Shimogga Flight Booking: ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಬಹಳ ನಿರೀಕ್ಷೆ ಹುಟ್ಟಿಸಿದ್ದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಯಾವಾಗ ಎಂಬ ಪ್ರಶ್ನೆಗೆ ಇಂಡಿಗೋ ವೆಬ್ ಸೈಟ್ ನಲ್ಲಿ ಕೊನೆಗೂ ಉತ್ತರ ಸಿಕ್ಕಂತಾಗಿದೆ. ಕೊನೆಗೂ ವೆಬ್ ಸೈಟ್ ನಲ್ಲಿ ವಿಮಾನ ಹಾರಾಟದ ದಿನಾಂಕ, ಸಮಯ ಮತ್ತು ಟಿಕೆಟ್ ದರವನ್ನ ಪ್ರಕಟಿಸಿದೆ.
ಇದನ್ನೂ ಓದಿ; ಕಾಫಿನಾಡು ಪೊಲೀಸರಿಗೆ ತಲೆನೋವಾದ ಟೂರಿಸ್ಟ್
ಹೌದು, ಬೆಂಗಳೂರು-ಶಿವಮೊಗ್ಗ ನಡುವೆ ವಿಮಾನ ಹಾರಾಟ ನಡೆಸಲಿರುವ ಇಂಡಿಗೋ ಸಂಸ್ಥೆ ತನ್ನ ವೆಬ್ ಸೈಟ್ ನಲ್ಲಿ ಈ ಮಾಹಿತಿಯನ್ನು ಪ್ರಕಟಿಸಿದೆ.
ಇದನ್ನೂ ಓದಿ; ಮುಳ್ಳಯ್ಯನಗಿರಿ ಮಾರ್ಗದಲ್ಲಿ ವಾಹನ ಸಂಚಾರ ಬಂದ್, ಪ್ರವಾಸಿಗರಿಗೆ ನಿರ್ಬಂಧ
ಯಾವ ಸಮಯಕ್ಕೆ ಹೊರಡಲಿದೆ:
ಆಗಸ್ಟ್ 31 ರಂದು ಬೆಳಗ್ಗೆ 9.50ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಿಂದ ಹೊರಡುವ ಇಂಡಿಗೋ ವಿಮಾನ 11.05ಕ್ಕೆ ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣಕ್ಕೆ ಬಂದು ಲ್ಯಾಂಡ್ ಆಗಲಿದೆ.


Shimogga Flight Booking: ಎಷ್ಟಿದೆ ಪ್ರಯಾಣ ದರ:
ಇಂಡಿಗೋ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿರುವ ಮಾಹಿತಿಯಂತೆ ಆಗಸ್ಟ್ 31 ರಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬರಲಿರುವ ವಿಮಾನದಲ್ಲಿ ಪ್ರಯಾಣಿಸಲು ಎಕಾನಮಿ ಕ್ಲಾಸ್ ನಲ್ಲಿ ದರವನ್ನು ಜುಲೈ 26ರ ಸಂಜೆ 5.30ಕ್ಕೆ ಪರಿಶೀಲಿಸಿದಂತೆ 5807 ರೂ.ಗಳಲ್ಲಿ ಪ್ರಕಟಿಸಲಾಗಿದೆ. ಅದೇ, ಮೇಕ್ ಮೈ ಟ್ರಿಪ್ ನಲ್ಲಿ ಪ್ರಕಟಗೊಂಡ ಮಾಹಿತಿಯಂತೆ ಅದೇ ದಿನಕ್ಕೆ 5387 ರೂ. ಪ್ರಕಟಿಸಲಾಗಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಪಿಎಂ ಕಿಸನ್ 14 ನೇ ಕಂತು; ಈ ರೀತಿ ಮಾಡಿದರೆ ತಿಂಗಳಿಗೆ 2000 ಹಣ ನಿಮ್ಮ ಖಾತೆಗೆ ಖಚಿತ
- ಅರಶಿನ ನೀರನ್ನು ಕುಡಿಯೋದ್ರಿಂದ ನಿಮಗೆ ಸಿಗಲಿದೆ ಈ 7 ಲಾಭಗಳು..
- ಮೂಡಿಗೆರೆ: ಮಳೆಯ ಆರ್ಭಟಕ್ಕೆ ಮನೆ ಸಂಪೂರ್ಣ ಜಖಂ
ಮೇಕ್ ಮೈ ಟ್ರಿಪ್ ವೆಬ್ ಸೈಟ್ ನಲ್ಲಿ ಜುಲೈ 26 ರಂದು ಸಂಜೆ 6 ಗಂಟೆಗೆ ಪ್ರಕಟಗೊಂಡಿರುವ ಮಾಹಿತಿಯಂತೆ, ಸೆಪ್ಟೆಂಬರ್ 1ರಿಂದ ನಂತರದ ದರ 3999 ರೂ. ಆಗಿದೆ.
ಶಿವಮೊಗ್ಗ-ಬೆಂಗಳೂರು ವಿಮಾನ ಪ್ರಯಾಣ ದರ:
ಆಗಸ್ಟ್ 31ರಂದು ಶಿವಮೊಗ್ಗದಿಂದ ಬೆಂಗಳೂರಿಗೆ ಬೆಳಗ್ಗೆ 11.25ಕ್ಕೆ ಇದೇ ಇಂಡಿಗೋ ವಿಮಾನ ವಾಪಾಸ್ ತೆರಳಿದ್ದು, ಜುಲೈ 26ರ ಸಂಜೆ 6 ಗಂಟೆಗೆ ಮೇಕ್ ಮೈ ಟ್ರಿಪ್ ವೆಬ್ ಸೈಟ್ ನಲ್ಲಿ ಪ್ರಕಟಗೊಂಡ ಮಾಹಿತಿಯಂತೆ 6021 ರೂ. ಆಗಿದೆ. ಅದೇ, ವಿಮಾನ ಪ್ರಯಾಣಕ್ಕೆ ಇಂಡಿಗೋ ವೆಬ್ ಸೈಟ್ ನಲ್ಲಿ ಪ್ರಯಾಣ ದರ 6441 ರೂ. ಪ್ರಕಟಿಸಲಾಗಿದೆ.
ಇದನ್ನೂ ಓದಿ; ಶೃಂಗೇರಿ : ಅಧಿಕಾರಿಯ ಅಮಾನತು ಆದೇಶ ರದ್ದಾಗಿದ್ದರೂ ನಿಯೋಜನೆ ಆದೇಶ ನೀಡದೆ ಕಿರುಕುಳ: ಪ್ರತಿಭಟನೆ ಎಚ್ಚರಿಕೆ


ಎರಡು ಬಗೆಯ ಟಿಕೆಟ್ ಮಾದರಿ:
ಇಂಡಿಗೋ ಸಂಸ್ಥೆ ಎರಡು ಬಗೆಯ ಟಿಕೆಟ್ ಮಾದರಿಗಳನ್ನು ಪರಿಚಯಿಸಿದೆ. ಸೇವರ್ ಮತ್ತು ಫ್ಲೆಕ್ಸಿ ಪ್ಲಸ್ ಟಿಕೆಟ್‌ಗಳನ್ನು ಪರಿಚಯಿಸಿದೆ. ಸೇವರ್ ಮಾದರಿ ಟಿಕೆಟ್‌ನಲ್ಲಿ ಯಾವುದೆ ಹೆಚ್ಚುವರಿ ಸೌಲಭ್ಯಗಳು ಇಲ್ಲ. ಆದರೆ ಫ್ಲೆಕ್ಸಿ ಪ್ಲಸ್ ಟಿಕೆಟ್‌ನಲ್ಲಿ ಕಾಂಪ್ಲಿಮೆಂಟರಿ ಸ್ಕ್ಯಾನ್ಸ್ ಲಭ್ಯವಿದೆ. ಹಾಗೂ ಸ್ಟಾಂಡರ್ಡ್ ಸೀಟ್ ಒದಗಿಸಲಾಗುತ್ತದೆ. ಇನ್ನು ಪ್ರಯಾಣದ ದಿನಾಂಕ ಬದಲಾವಣೆಯಾದರೆ ಹೆಚ್ಚುವರಿ ದರವಿರುವುದಿಲ್ಲ. ಟಿಕೆಟ್ ಕ್ಯಾನ್ಸಲ್ ಚಾರ್ಜ್ ಕೂಡ ಕಡಿಮೆ ಇರಲಿದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-26.07.2023
intresting story ಓದಲು ಇಲ್ಲಿ ಕ್ಲಿಕ್ ಮಾಡಿ






Leave a Reply