(Fasal Bima Yojana) 2024-25 ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ನೋಂದಣಿ ಮಾಡಿಸಲು ಕೆಲವು ದಾಖಲೆ ಕಡ್ಡಾಯವಾಗಿದೆ. ಹಾಗಯೇ ನೋಂದಣಿ ಮಾಡುವುದು ಹೇಗೆ? ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ಇದನ್ನೂ ಓದಿ; ಆಸ್ತಿ ಖರೀದಿ, ಮಾರಾಟಗಾರರ ಗಮನಕ್ಕೆ; ಈ ನಿಯಮ ಪಾಲನೆ, ದಾಖಲೆಗಳು ಕಡ್ಡಾಯ!
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು 2024-25 ನೇ ಸಾಲಿನಲ್ಲಿಯೂ ಜಾರಿಯಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ, ಮುಂತಾದ ಪ್ರಾಕೃತಿಕ ವಿಕೋಪ ಸೇರಿದಂತೆ ಹಲವಾರು ಕಾರಣಗಳಿಂದ ಬೆಳೆ ನಷ್ಟ ಉಂಟಾದಾಗ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ ರೈತರ ವಿಮಾ ಕಂತನ್ನು ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳಿಗೆ ಮುಂಗಾರು ಹಂಗಾಮಿಗೆ ಶೇ. 2 ಎಂದು ಪರಿಗಣಿಸಲಾಗಿದೆ. ಮುಖ್ಯ ಬೆಳೆಗಳಿಗೆ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಳವಡಿಸಲಾಗುವುದು. ಈ ಯೋಜನೆಯು ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದ್ದು, ವಿಮಾ ಮೊತ್ತವು ಒಂದೇ ಆಗಿರುತ್ತದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?
ಬಿತ್ತನೆ ಅಥವಾ ನಾಟಿ ಕಾಲಕ್ಕೆ ಆಗುವ ನಷ್ಟ, ಬೆಳೆವಣಿಗೆ ಹಂತದಲ್ಲಿ ಆಗುವ ನಷ್ಟ ಹಾಗೂ ಕಟಾವಿನ ನಂತರದ ನಷ್ಟವನ್ನು ಸಹ ಪರಿಗಣಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ, ಓರಿಯಂಟಲ್ ಜನರಲ್ ಇನ್ಶುರೆನ್ಸ್ ಕಂಪನಿ ವಿಮಾ ಕಂಪನಿಯನ್ನು ಬೆಳೆ ವಿಮೆ ಕಾರ್ಯಕ್ಕೆ ಆಯ್ಕೆ ಮಾಡಲಾಗಿದೆ. ವಿಮಾ ಅರ್ಜಿಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಲಭ್ಯವಿದ್ದು, ಈ ಯೋಜನೆಯಡಿ ಅರ್ಜಿಯನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಲ್ಲಿಸಿ ನೋಂದಾಯಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ; ಪಡಿತರ ಚೀಟಿ ಹೊಂದಿದವರಿಗೆ ಮುಖ್ಯ ಮಾಹಿತಿ; ಈ ಕೆಲಸ ಮಾಡದೆ ಇರುವವರ ರೇಷನ್ ಸ್ಥಗಿತ
ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ?;
* ಪಹಣಿ
* ಬ್ಯಾಂಕ್ ಪಾಸ್ ಪುಸ್ತಕ
* ಆಧಾರ್ ಸಂಖ್ಯೆಯನ್ನು ನೀಡಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
ಇನ್ನು ಈ ಯೋಜನೆಯ ಮಾಹಿತಿಯನ್ನು ಸಂರಕ್ಷಣೆ ತಂತ್ರಾAಶದಲ್ಲಿ ಪಡೆಯಬಹುದು. (http://www.samrakshane.karnataka.gov.in/) ಹೆಚ್ಚಿನ ಮಾಹಿತಿಗೆ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದಾಗಿದೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
- ಬಿಪಿಎಲ್ ರೇಷನ್ ಕಾರ್ಡ್ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
- 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
- PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
- HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ
- ಹೃದಯಾಘಾತಕ್ಕೂ ಮುನ್ನ ಈ ಐದು ಎಚ್ಚರಿಕೆ ನೀಡುತ್ತೆ ನಿಮ್ಮ ದೇಹ….; ದೇಹದ ಈ ಭಾಗಗಳಲ್ಲಿ ನೋವು ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು!






