Dighvijay News; ಮಾಧ್ಯಮ‌ ಲೋಕದಲ್ಲಿ ರಿಪಬ್ಲಿಕ್ ನ ದಿಗ್ವಿಜಯ

Dighvijay News;  ಬೆಂಗಳೂರು: ಏಳು ವರ್ಷಗಳಿಂದ ಕನ್ನಡಿಗರ ಮನೆಮಾತಾಗಿದ್ದ ದಿಗ್ವಿಜಯ ನ್ಯೂಸ್ (Dighvijay News;)ಇದೀಗ ರಿಪಬ್ಲಿಕ್ ಕನ್ನಡ ಸುದ್ದಿವಾಹಿನಿಯಾಗಿ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್ ಸಮೂಹಕ್ಕೆ ಸೇರ್ಪಡೆಯಾಗಿದೆ. ಶುಕ್ರವಾರ ದಿಗ್ವಿಜಯ ನ್ಯೂಸ್ ನ ಬೆಂಗಳೂರು ಕಚೇರಿಯ ಸ್ಟುಡಿಯೋದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅರ್ನಬ್ ಗೋಸ್ವಾಮಿ ಅವರು ರಿಪಬ್ಲಿಕ್ ಕನ್ನಡ ವಾಹಿನಿಯ ವಿಧ್ಯುಕ್ತ ಆರಂಭದ ಘೋಷಣೆ ಮಾಡಿದರು.

ಇದನ್ನೂ ಓದಿ; ಚಂದ್ರನ ಅಂಗಳಕ್ಕಿಳಿದ ರೋವರ್ ಪ್ರಜ್ಞಾನ್; ರೋವರ್ ಚಲನೆಯ ಮತ್ತೊಂದು ವಿಡಿಯೊವನ್ನು ಹಂಚಿಕೊಂಡ ಇಸ್ರೋ

ಕನ್ನಡದಲ್ಲಿ ವಾಹಿನಿ ಆರಂಭಿಸುವ ಕಾರಣ ಹೊರಹಾಕಿದ ಅರ್ನಬ್ ಗೋಸ್ವಾಮಿ, ರಾಷ್ಟ್ರೀಯತೆ ಹಾಗೂ ಸಮಗ್ರತೆ ನಮ್ಮ ವಿಚಾರಧಾರೆಯಾಗಿದೆ. ಪ್ರತಿಶತ ನೂರರಷ್ಟು ಸುದ್ದಿಯನ್ನು ವೀಕ್ಷಕರಿಗೆ ಉಣಬಡಿಸುವ ವೇಳೆ ನಿಖರ ಹಾಗೂ ಕರಾರುವಕ್ಕಾದ ಸುದ್ದಿಗಳನ್ನೆ ನೀಡಲು ಆದ್ಯ ಗಮನ ಹರಿಸಲಾಗುವುದು ಎಂದಿದ್ದಾರೆ.

ಇದನ್ನೂ ಓದಿ; ಇನ್ಮುಂದೆ ಕಾಡಿನ ರಾಜ ಸಿಂಹ ಅಲ್ಲ..!; ಚಿರತೆಗೆ ಕಾಡಿನ ರಾಜನ ಪಟ್ಟ.. ಏನಿದು ಹೊಸ ಬೆಳವಣಿಗೆ

ಉದ್ಯಮ ನಡೆಸುವುದು ಲಾಭಕ್ಕಲ್ಲ, ಬದಲಾಗಿ ಪ್ಯಾಷನ್ ಗಾಗಿ ಮಾತ್ರ.
ರಾಷ್ಟ್ರೀಯತೆಗೆ ಸಂಬಂಧಿತ ವಿಷಯಗಳು ವಾಹಿನಿಗಳಲ್ಲಿ ಪ್ರಮುಖವಾಗಿ ಚರ್ಚೆಯಾಗಬೇಕು. ಜನರಿಂದ ನೇರವಾಗಿ ಪಡೆದ ಮಾಹಿತಿಯೊಂದಿಗೆ ಸುದ್ದಿಯಾಗಿಸುವುದು ಕೂಡ ವೀಕ್ಷಕರಿಗೆ ನಾವು ಕೊಡುವ ಫರ್ಫೆಕ್ಟ್ ನ್ಯೂಸ್ ಆಗಿರುತ್ತದೆ ಎಂದು ನಿಲುವು ವ್ಯಕ್ತಪಡಿಸಿದರು.

Dighvijay News;
Dighvijay News;

ಇದನ್ನೂ ಓದಿ; ಅರ್ನಬ್ ಗೋಸ್ವಾಮಿ ಪಾಲಾದ ಕನ್ನಡ ಖ್ಯಾತ ಸುದ್ದಿವಾಹಿನಿ; ದಿಗ್ವಿಜಯ ನ್ಯೂಸ್ ಇನ್ಮುಂದೆ ರಿಪಬ್ಲಿಕ್ ಕನ್ನಡ.. ಏನಿದು ಸುದ್ದಿ?

ಮುಂದಿನ ವರ್ಷ ಜಾಗತಿಕ ಚಾನೆಲ್:
ಭವಿಷ್ಯದಲ್ಲಿ ದೇಶದ ಎಲ್ಲ ರಾಜ್ಯಗಳ ಪ್ರಾದೇಶಿಕ ಭಾಷೆಗಳಲ್ಲಿ ಚಾನೆಲ್ ತರುವ ಗುರಿ ಹೊಂದಲಾಗಿದೆ. ಸ್ಥಳೀಯ ಜನರ ಧ್ವನಿಗೆ ಪ್ರಾಧಾನ್ಯತೆ ಸಿಗಬೇಕು. ಜನರ ಆಶೋತ್ತರಗಳನ್ನು ಈಡೇರಿಸುವ ಆಶಯವೂ ಇದೆ. ಮುಂದಿನ ವರ್ಷ ಭಾರತದ ನೆಲದಿಂದಲೇ ಜಾಗತಿಕ ಮಟ್ಟದ ಚಾನೆಲ್ ಆರಂಭಿಸುವುದಾಗಿ ಅರ್ನಬ್ ಗೋಸ್ವಾಮಿ ಪ್ರಕಟಿಸಿದರು.

ಇದನ್ನೂ ಓದಿ; ಕಾಫಿನಾಡ ಬರಕ್ಕೆ ಮತ್ತೊಬ್ಬ ರೈತ ಆತ್ಮಹತ್ಯೆ; ಎರಡು ದಿನದಲ್ಲಿ ಇಬ್ಬರು ರೈತರ ಆತ್ಮಹತ್ಯೆಗೆ ಶರಣು

ವ್ಯಾಪಾರ ಮನೋಭಾವದಿಂದ ಖರೀದಿ ಮಾಡಿಲ್ಲ:
ವಿ.ಆರ್.ಎಲ್ ಗ್ರೂಪ್ ನ ಡಾ.ವಿಜಯ ಸಂಕೇಶ್ವರ ಹಾಗೂ ಡಾ. ಆನಂದ ಸಂಕೇಶ್ವರ ಅವರು ಅತ್ಯಂತ ಪ್ರೀತಿಯಿಂದ ಸ್ಥಾಪಿಸಿದ ಮೌಲ್ಯಯುತ ಚಾನೆಲ್ ಅನ್ನು ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ಗೆ ಕೊಡುತ್ತಿರುವುದು ನಮಗೊಂದು ಸೌಭಾಗ್ಯ. ನಾವೂ ಸಹ ರಾಷ್ಟ್ರೀಯತೆ ಮತ್ತು ಸಮಗ್ರತೆಯ ಮೌಲ್ಯಗಳನ್ನು ಹಂಚುವ ಕೆಲಸ ಮುಂದುವರಿಸುತ್ತೇವೆ. ದಿಗ್ವಿಜಯ ಚಾನೆಲ್ ಅನ್ನು ಬರೀ ವ್ಯಾಪಾರ ಮನೋಭಾವದಿಂದ ರಿಪಬ್ಲಿಕ್ ಮೀಡಿಯಾ ನೆಟ್ ವರ್ಕ್ ತೆಕ್ಕೆಗೆ ಪಡೆಯುತ್ತಿಲ್ಲ. ಡಾ. ಆನಂದ ಸಂಕೇಶ್ವರ ಅವರೊಂದಿಗಿನ ಉತ್ತಮ ಸ್ನೇಹ ಹಾಗೂ ಅವರ ತಂದೆ ಡಾ. ವಿಜಯ ಸಂಕೇಶ್ವರ ಅವರ ಮೇಲಿನ ಗೌರವದಿಂದ ಪಾಲುದಾರಿಕೆಯಲ್ಲೆ ಚಾನೆಲ್ ಮುಂದುವರಿಯಲಿದೆ ಎಂದು ಭಾವಿಸುವುದಾಗಿ ಅರ್ನಬ್ ಗೊಸ್ವಾಮಿ ಹೇಳಿದರು.

ಇದನ್ನೂ ಓದಿ; ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್: ಸಂಸದ ಸ್ಥಾನದಿಂದ ಅನರ್ಹ;  ಅಂದು ಮಾಡಿದ ಒಂದು ಯಡವಟ್ಟಿನಿಂದ MP ಸ್ಥಾನವೇ ಹೋಯ್ತು!

ಎಂಟ್ರಿ ಕೊಡ್ತಿದ್ದಾಗೆ ಎಲ್ಲಾ ಮಾಧ್ಯಮಗಳಿಗೆ, ರಾಜಕಾರಣಿಗಳಿಗೆ ಖಡಕ್ ಎಚ್ಚರಿಕೆ:
ಇನ್ನು ದಿಗ್ವಿಜಯ ನ್ಯೂಸ್ ವಾಹಿನಿಯಲ್ಲಿ ಮಾತನಾಡಿದ ಅರ್ನಬ್ ಗೋಸ್ವಾಮಿ ಎಲ್ಲಾ ಮಾಧ್ಯಮಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹೌದು, ಮಾಧ್ಯಮದಲ್ಲಿ ಜ್ಯೋತಿಷಿಯನ್ನು ಕರೆಸಿ ದಿನಭವಿಷ್ಯ ಅಂತ ಕಾರ್ಯಕ್ರಮ ಮಾಡುತ್ತೀರಿ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋ ಅನ್ನು ತಂದು ದಿನವಿಡೀ ಹಾಕುತ್ತೀರಿ. ಜನರಿಗೆ ಎಂಟ್ಟೈನ್ಮೆಂಟ್ ಅಂತೀರಾ. ಜನರಿಗೆ ಎಂಟ್ಟೈನ್ಮೆಂಟ್ ಬೇಕು ಅಂದ್ರೆ ಸಿನಿಮಾ ನೋಡುತ್ತಾರೆ. ನ್ಯೂಸ್ ಅನ್ನು ಯಾಕೆ ನೋಡುತ್ತಾರೆ. ವಾಹಿನಿ ಅಂದ ಮೇಲೆ ಈಗ ಹೇಗಿರುತ್ತದೋ ಹಾಗೆ ಸುದ್ದಿ ಪ್ರಸಾರ ಮಾಡಬೇಕು. ಅದನ್ನು ಬಿಟ್ಟು ಜ್ಯೋತಿಷ್ಯದ ಹೆಸರಿನಲ್ಲಿ ಮಾಡುವುದು ಅಲ್ಲ ಎಂದಿದ್ದಾರೆ. ಬೇರೆ ಸುದ್ದಿ ವಾಹಿನಿಯವರ ಹಾಗೇ ರಾಜಕಾರಣಿ ಕರೆದು ಕಾರ್ಯಕ್ರಮ ಮಾಡ್ತೀವಿ ನಾವೇ ಕರೆಸಿ ಮಾತನಾಡುಸ್ತೀವಿ ಅಂತ ರಾಜಕಾರಣಿ ಅಂದುಕೊಂಡಿದ್ದಾರೆ ಆದರೆ ರಿಪಬ್ಲಿಕ್ ಕನ್ನಡದಲ್ಲಿ ಹಾಗೇ ಆಗಲ್ಲ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.