Sringeri: ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿವೆ ಗೂಳಿ ದಾಳಿ ಪ್ರಕರಣಗಳು: ನಿದ್ದೆಯಲ್ಲಿರುವ ಪಟ್ಟಣ ಪಂಚಾಯಿತಿ

Sringeri: ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಪಟ್ಟಣದಲ್ಲಿ ದಿನೇ ದಿನೇ ಗೂಳಿ ದಾಳಿ ಪ್ರಕರಣಗಳು ಹೆಚ್ಚುತ್ತಿದ್ದರೂ ಪಟ್ಟಣ ಪಂಚಾಯಿತಿ ಮಾತ್ರ ನಿದ್ದೆಯಲ್ಲಿರುವಂತೆ ಕಾಣುತ್ತಿದೆ.

ಇದನ್ನೂ ಓದಿ;  17 ಸಾವಿರ ಟನ್ ಅಡಿಕೆ ಆಮದಿಗೆ ಒಪ್ಪಿಗೆ; ರೈತರಲ್ಲಿ ಆತಂಕ ತಂದ ಭೂತಾನ್ ಅಡಿಕೆ ಆಮದು

ಪಟ್ಟಣದ ವ್ಯಾಪ್ತಿಯಲ್ಲಿ ಹಲವಾರು ಬಿಡಾಡಿ ಗೂಳಿಗಳು ಇದ್ದು ಏಕಾಏಕಿ ಮಹಿಳೆಯರು , ವೃದ್ದರು, ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುವ ಘಟನೆಗಳು ಪದೆ ಪದೇ ಮರುಕಳಿಸುತ್ತಿದೆ.

ಇದನ್ನೂ ಓದಿ;  ಚಿಕ್ಕಮಗಳೂರು: ಅಕ್ರಮ ಭೂ ಮಂಜೂರಾತಿ ಪ್ರಕರಣ ತನಿಖೆಗೆ 15 ತಹಸೀಲ್ದಾರ್ ಗಳ ವಿಶೇಷ ತಂಡ ರಚನೆ

ಕಳೆದ ಎರಡು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಇವು ದಾಳಿ ಮಾಡಿದ್ದು ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರು ಹಾಗೂ ವೃದ್ದರ ಮೇಲೆ ಏಕಾಏಕಿ ದಾಳಿ ನಡೆಸಿ ನೆಲಕ್ಕೆ ಕೆಡವಿವೆ, ಕಳೆದ ವಾರ ಶ್ರೀನಿವಾಸ್ ಭಟ್ ಎಂಬುವವರ ಮೇಲೆ ದಾಳಿ ಮಾಡಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ತಲೆಗೆ ಹೊಲಿಗೆ ಹಾಕಲಾಗಿದೆ.

ಇದನ್ನೂ ಓದಿ;  ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-09.08.2023

Sringeri: ಇನ್ನು ಕಟ್ಟೆಬಾಗಿಲು ಹಾಗೂ ಪ್ಯಾರಲಲ್ ರಸ್ತೆ ಸಂಪರ್ಕಿಸುವಲ್ಲಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಮೇಲೆ ದಾಳಿ ಮಾಡಿವೆ.

ಇನ್ನು ಈ ಗೂಳಿಗಳಿಗೆ ಹೆದರಿ ವಾಕಿಂಗ್ ಹೋಗುತ್ತಿದ್ದ ಹಲವರು ತಮ್ಮ ವಾಕಿಂಗ್ ಅನ್ನೇ ನಿಲ್ಲಿಸಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು   


ವಾಹನದ ಮೇಲೆ ದಾಳಿ: ಕಳೆದ ಎರಡು ದಿನಗಳ ಹಿಂದೆ ಭಾರತೀಬೀದಿಯ ಚಪ್ಪರದ ಆಂಜನೇಯ ದೇವಸ್ಥಾನ ಬಳಿ ಸ್ಥಳೀಯರು ನಿಲ್ಲಿಸಿಟ್ಟಿದ್ದ ಎರ್ಟಿಕಾ ವಾಹನದ ಹಿಂಭಾಗ ದಾಳಿ ಮಾಡಿ ವಾಹನವನ್ನು ಜಖಂಗೊಳಿಸಿವೆ.

ಪದೇ ಪದೇ ಇಂತಹ ಪ್ರಕರಣಗಳು ನಡೆದರೂ ಪಟ್ಟಣ ಪಂಚಾಯಿತಿ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ, ಶೀಘ್ರ ಕ್ರಮವಹಿಸಿ ಜನರನ್ನು ಭಯಮುಕ್ತ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ; ಚಿಕ್ಕಮಗಳೂರು: ಜನರ ಸಮಸ್ಯೆ ಕೇಳಲು ಫೋನ್ ಇನ್ ಕಾರ್ಯಕ್ರಮ ಆರಂಭ; ಚಿಕ್ಕಮಗಳೂರು ಎಸ್‌ಪಿಯಿಂದ ಹೊಸ ಪ್ರಯತ್ನ

ನಿನ್ನೆಯ ಪ್ರಮುಖ ಸುದ್ದಿಗಳನ್ನು ಓದಿ

  1. ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ; ಸಾಲ ಪಡೆಯಬೇಕೆಂದರೆ ಏನು ಮಾಡಬೇಕು?
  2. 17 ಸಾವಿರ ಟನ್ ಅಡಿಕೆ ಆಮದಿಗೆ ಒಪ್ಪಿಗೆ; ರೈತರಲ್ಲಿ ಆತಂಕ ತಂದ ಭೂತಾನ್ ಅಡಿಕೆ ಆಮದು
  3. ಚಿಕ್ಕಮಗಳೂರು: ಅಕ್ರಮ ಭೂ ಮಂಜೂರಾತಿ ಪ್ರಕರಣ ತನಿಖೆಗೆ 15 ತಹಸೀಲ್ದಾರ್ ಗಳ ವಿಶೇಷ ತಂಡ ರಚನೆ
  4. ಪ್ರಕಾಶ್ ರಾಜ್ ಸಂವಾದ ನಡೆಸಿದ ಕಾಲೇಜು ಕೊಠಡಿಯನ್ನು ಗೋಮೂತ್ರ ಸಿಂಪಡಿಸಿ ಶುದ್ಧೀಕರಣಗೊಳಿಸಿದ ವಿದ್ಯಾರ್ಥಿಗಳು!
  5. ಚಿಕ್ಕಮಗಳೂರು: ಜನರ ಸಮಸ್ಯೆ ಕೇಳಲು ಫೋನ್ ಇನ್ ಕಾರ್ಯಕ್ರಮ ಆರಂಭ; ಚಿಕ್ಕಮಗಳೂರು ಎಸ್‌ಪಿಯಿಂದ ಹೊಸ ಪ್ರಯತ್ನ
  6. ಹಠಾತ್ ಹೃದಯ ಸ್ತಂಭನ | ಹೃದಯಾಘಾತ ನಡುವಿನ ವ್ಯತ್ಯಾಸ ಏನು?; ಹಠಾತ್ ಹೃದಯ ಸ್ತಂಭನಕ್ಕೆ ಕಾರಣವೇನು?
  7. ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-09.08.2023
  8. ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಬಂಗಾರ, ಬೆಳ್ಳಿ ದರದಲ್ಲಿ ಇಳಿಕೆ;

intresting story ಓದಲು ಇಲ್ಲಿ ಕ್ಲಿಕ್ ಮಾಡಿ 👇