Chandrayaan 3 ಆ 41 ದಿನಗಳ ಪಯಣ, ಕೊನೆಯ ರೋಚಕ 19 ನಿಮಿಷಗಳು, ಇಡೀ ವಿಶ್ವವೇ ಭಾರತದತ್ತ ನೋಡುತ್ತಿರುವಾಗಲೇ ಭಾರತೀಯರ ಭರವಸೆ ಕನಸುಗಳನ್ನು ನನಸು ಮಾಡುತ್ತಾ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಿತು. ವಿಕ್ರಮ್ ಲ್ಯಾಂಡರ್ ಯಾವುದೇ ತೊಂದರೆಗಳಿಲ್ಲದೆ ಸರಿಯಾಗಿ ಸಂಜೆ 6.04 ಕ್ಕೆ ಚಂದ್ರನ ಮೇಲೆ ಇಳಿದಿದೆ. ಇಸ್ರೋ ಕೇಂದ್ರದಲ್ಲಿ ನೇರವಾಗಿ ವೀಕ್ಷಿಸಿದವರ ಜೊತೆಗೆ ಇಡೀ ದೇಶವೇ ಚಂದ್ರಯಾನ-3ರ ಯಶಸ್ಸಿನ ಖುಷಿಯಲ್ಲಿ ಮುಳುಗಿತ್ತು.
ಇದನ್ನೂ ಓದಿ; ಚಂದ್ರಯಾನ-3 ಯಶಸ್ವಿ; ಚಿಕ್ಕಮಗಳೂರಿನಲ್ಲಿ ಬಿಜೆಪಿ ಸಂಭ್ರಮಾಚರಣೆ
ನಾಲ್ಕು ವರ್ಷಗಳ ಹಿಂದೆ ಭಗ್ನಗೊಂಡಿದ್ದ ಕನಸನ್ನು ನನಸು ಮಾಡಲು ಇಸ್ರೋ ಕಳೆದ ತಿಂಗಳು ೧೪ರಂದು ಚಂದ್ರಯಾನ-೩ ಉಡಾವಣೆ ಮಾಡಿತ್ತು. ಚಂದ್ರಯಾನ-3 ಅನ್ನು LVM3-M4 ರಾಕೆಟ್ ಮೂಲಕ ಭೂಮಿಯ ಕಕ್ಷೆಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 18 ದಿನಗಳ ಅವಧಿಯಲ್ಲಿ ಐದು ಹಂತಗಳಲ್ಲಿ ಕಕ್ಷೆಯನ್ನು ಏರಿಸಲಾಯಿತು. ನಂತರ ಆಗಸ್ಟ್ 1 ರಂದು, ಇದು ಟ್ರಾನ್ಸ್ ಲೂನಾರ್ ಕಕ್ಷೆಯನ್ನು ಪ್ರವೇಶಿಸಿತು. ಇದು ಆಗಸ್ಟ್ 5 ರಂದು ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತು. ತದ ನಂತರ, ಕ್ರಮೇಣ ಚಂದ್ರನ ಕಕ್ಷೆಯನ್ನು ಕಡಿಮೆ ಮಾಡಿದರು.
ವಿಕ್ರಮ್ ಲ್ಯಾಂಡರ್ ಆಗಸ್ಟ್ 17 ರಂದು ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟಿತು. ಇದು ಪ್ರಗ್ಯಾನ್ ರೋವರ್ ಅನ್ನು ಸಹ ಹೊಂದಿದೆ. ಪ್ರೊಪಲ್ಷನ್ ಮಾಡ್ಯೂಲ್‌ನಿಂದ ಬೇರ್ಪಟ್ಟ ನಂತರ, ಲ್ಯಾಂಡರ್ ತನ್ನದೇ ಆದ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತು ಮತ್ತು ಎರಡು ಡಿ-ಆರ್ಬಿಟ್ ಕಾರ್ಯವಿಧಾನಗಳಿಗೆ ಒಳಗಾಯಿತು. ಇಸ್ರೋ ಯೋಜಿಸಿದಂತೆ ವಿಕ್ರಮ್ ಲ್ಯಾಂಡರ್ ಯಾವುದೇ ಅಡೆತಡೆಗಳಿಲ್ಲದೆ ಸಂಜೆ 6.04 ಕ್ಕೆ ಚಂದ್ರನ ಮೇಲೆ ಸುರಕ್ಷಿತವಾಗಿ ಯಶಸ್ವಿಯಾಗಿ ಇಳಿಯಿತು.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ?-24.08.2023
ಚಂದ್ರನ ಮೇಲಿನ ಅತ್ಯಂತ ಕಷ್ಟಕರವಾದ ದಕ್ಷಿಣ ಧ್ರುವದ ಮೇಲೆ ಕಾಲಿಟ್ಟ ದೇಶವಾಗಿ ಭಾರತ ಇತಿಹಾಸವನ್ನು ಸೃಷ್ಟಿಸಿದೆ. ಅಮೆರಿಕ, ಜಪಾನ್ ಮತ್ತು ಇಸ್ರೇಲ್‌ಗೂ ಈ ಸಾಧನೆ ಸಾಧ್ಯವಾಗಿರಲಿಲ್ಲ. ಎರಡು ದಿನಗಳ ಹಿಂದೆ ರಷ್ಯಾದ ಲೂನಾ-25 ದಕ್ಷಿಣ ಧ್ರುವದಲ್ಲಿ ಇಳಿಯಲು ಯತ್ನಿಸಿ ವಿಫಲವಾಗಿತ್ತು. ಆದರೆ ಕಷ್ಟದ ದಕ್ಷಿಣ ಧ್ರುವದಲ್ಲಿ ಹೆಜ್ಜೆ ಹಾಕುವ ಮೂಲಕ ಇಸ್ರೋ ಇಡೀ ವಿಶ್ವವನ್ನೇ ಅಚ್ಚರಿಗೊಳಿಸಿದೆ. ಇಸ್ರೋ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸಾಮಾನ್ಯವಾಗಿ ಕೆಲ ಜನರಿಗೆ ಮೂಡುವಂತಹ ಪ್ರಶ್ನೆ ಚಂದ್ರನ ಮೇಲೆ ಈ ಲ್ಯಾಂಡರ್ ಕಳುಹಿಸಲು ಉದ್ದೇಶ ಏನು? ಇದರಿಂದ ದೇಶಕ್ಕೆ ಏನು ಲಾಭ? ಈ ಎಲ್ಲಾ ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಚಿಕ್ಕಮಗಳೂರು ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಖಾಸಗಿಯವರಿಗೆ ಪರಭಾರೆ ಮಾಡಿದ ತಹಸಿಲ್ದಾರ್; ಕ್ರಿಮಿನಲ್ ಮೊಕದ್ದಮೆ ದಾಖಲು
- ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ ನಿಮಗಾಗಿ-24.08.2023
- ಅತೀ ಹೆಚ್ಚು ಇಳುವರಿ ಕೊಡುವ ಅಡಿಕೆ ತಳಿಗಳು ಯಾವುದು ಗೊತ್ತೇ?; ಈ ಅಡಿಕೆ ತಳಿಗಳು ಹಾಕಿದ್ರೆ ಆದಾಯ ಅಂತೂ ಗ್ಯಾರಂಟಿ
Chandrayaan 3 ಚಂದ್ರಯಾನ-3 ರ ಯಶಸ್ಸು ಕೇವಲ ಭಾರತೀಯರು ಹೆಮ್ಮೆ ಪಡುವುದಕ್ಕೆ ಸೀಮಿತವಾಗಿಲ್ಲ. ಇದು ಭವಿಷ್ಯದಲ್ಲಿ ಭಾರತೀಯರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಜನಸಾಮಾನ್ಯರು ತಮ್ಮ ಮನಸ್ಸಿನಲ್ಲಿ ವರ್ಷಗಳ ಕಾಲ ಇರುವ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುತ್ತಾರೆ. ಚಂದ್ರನ ಮೇಲೆ ಹೋಗಲು ಸಾಧ್ಯವೇ, ಚಂದ್ರನಲ್ಲಿ ಕೃಷಿ ಮಾಡಬಹುದೇ, ಚಂದ್ರನ ಮೇಲೆ ಎಷ್ಟು ಅಮೂಲ್ಯವಾದ ವಸ್ತುಗಳಿವೆ ಎಂದು ಪ್ರತಿ ದೇಶವು ಚಿಂತಿಸುತ್ತಿದೆ. ಇಂತಹ ಎಲ್ಲಾ ಪ್ರಶ್ನೆಗಳಿಗೆ ಜನಸಾಮಾನ್ಯರಿಗೆ ಉತ್ತರ ಸಿಗುತ್ತದೆ.
ಚಂದ್ರನ ಮೇಲೆ ನೀರು ಮತ್ತು ಮಂಜುಗಡ್ಡೆಯೊಂದಿಗೆ ಯುರೇನಿಯಂ, ಪ್ಲಾಟಿನಂ ಮತ್ತು ಚಿನ್ನ ಸೇರಿದಂತೆ ಹಲವು ರೀತಿಯ ಅದಿರುಗಳಿವೆ ಎಂದು ವಿಶ್ವದ ಅನೇಕ ವಿಜ್ಞಾನಿಗಳು ನಂಬುತ್ತಾರೆ. ಈಗ ಭಾರತೀಯ ಮಿಷನ್ ಚಂದ್ರಯಾನ-3 ರ ರೋವರ್ ಮುಂದಿನ 14 ದಿನಗಳವರೆಗೆ ಅಂತಹ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತದೆ.
ಇದನ್ನೂ ಓದಿ; ವಾಹನ ಖರೀದಿ ಮಾಡಿದ ಎಲ್ಲರಿಗೂ ಹೊಸ ರೂಲ್ಸ್!; ಈ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಕಡ್ಡಾಯ
ದೇಶದ ಹಲವು ಖಾಸಗಿ ಕಂಪನಿಗಳು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಮುನ್ನಡೆಯುತ್ತಿವೆ. ಭಾರತ ಸರ್ಕಾರ ಅವರನ್ನು ಉತ್ತೇಜಿಸುತ್ತಿದೆ. ದೇಶದ ಹೆಸರಾಂತ ಕಂಪನಿಗಳಾದ ಗೋದ್ರೇಜ್ ಏರೋಸ್ಪೇಸ್, ಲಾರ್ಸನ್ ಮತ್ತು ಟೂಬ್ರೊ (ಎಲ್&ಟಿ), ಹಿಮ್ಸನ್ ಇಂಡಸ್ಟ್ರಿಯಲ್ ಸೆರಾಮಿಕ್ಸ್ ಚಂದ್ರಯಾನ-3 ಮಿಷನ್‌ನೊಂದಿಗೆ ಸಂಬಂಧ ಹೊಂದಿವೆ. ಈ ಕಂಪನಿಗಳು ತಯಾರಿಸಿದ ಉಪಕರಣಗಳನ್ನು ಚಂದ್ರಯಾನ-3ರಲ್ಲಿ ಬಳಸಲಾಗಿದೆ. ಇದರ ಪರಿಣಾಮ ಕಂಪನಿಗಳ ಷೇರುಗಳ ಮೇಲೆ ಗೋಚರಿಸಿತು.
ಇನ್ನು ಚಂದ್ರನ ಮೇಲ್ಮೈಯಲ್ಲಿ ಚಂದ್ರಯಾನ- 3ಗೆ ಏನೆಲ್ಲ ಅಪಾಯಗಳಿವೆ:
ಇದೀಗ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಎರಡೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಎಸ್ ಸೋಮನಾಥ್ ಅವರು ಹೇಳಿದ್ದಾರೆ. ಚಂದ್ರನ ಮೇಲೆ ವಾತಾವರಣದ ಕೊರತೆಯಿಂದಾಗಿ ಯಾವ ಕಡೆಯಿಂದಾದರೂ ವಸ್ತುಗಳು ಬಂದು ಹೊಡೆಯಬಹುದು. ಅದರೊಂದಿಗೆ ಥರ್ಮಲ್ ಸಮಸ್ಯೆ ಮತ್ತು ಸಂವಹನ ಬ್ಲ್ಯಾಕೌಟ್ ಸಮಸ್ಯೆ ಇದೆ. ಕ್ಷುದ್ರಗ್ರಹ ಅಥವಾ ಇತರೆ ಯಾವುದೇ ವಸ್ತುಗಳು ಭಾರೀ ವೇಗದಲ್ಲಿ ಹೊಡೆದರೆ, ಲ್ಯಾಂಡರ್ ಮತ್ತು ರೋವರ್ ಎರಡೂ ನಾಶವಾಗುತ್ತವೆ. ನಾವು ಚಂದ್ರನ ಮೇಲ್ಮೈಯನ್ನು ನೋಡಿದರೆ ತಿಳಿಯುತ್ತದೆ. ಇದು ಬಾಹ್ಯಾಕಾಶ ವಸ್ತುಗಳ ಹೊಡೆತದಿಂದ ಉಂಟಾಗುವ ಗುರುತುಗಳಿಂದಲೇ ತುಂಬಿರುತ್ತದೆ. ಭೂಮಿಯಲ್ಲೂ, ಪ್ರತಿ ಗಂಟೆಗೆ ಲಕ್ಷಗಟ್ಟಲೆ ಬಾಹ್ಯಾಕಾಶ ವಸ್ತುಗಳು ಬರುತ್ತದೆ ಆದರೆ ನಮ್ಮ ವಾತಾವರಣವು ಎಲ್ಲವನ್ನೂ ಸುಡುವುದರಿಂದ ಅದು ನಮ್ಮ ಅನುಭವಕ್ಕೆ ಬರುವುದಿಲ್ಲ ಎಂದು ಸೋಮನಾಥ್ ಹೇಳಿದ್ದಾರೆ.
ಇದನ್ನೂ ಓದಿ; ಆಲ್ದೂರು: ಮನೆ ಬಿಟ್ಟು ನಾಪತ್ತೆಯಾಗಿದ್ದ ಯುವತಿ ಬೆಂಗಳೂರಿನಲ್ಲಿ ಪತ್ತೆ






Leave a Reply