(Caste Certificate:) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರು ಎಂದು ದೃಢೀಕರಿಸುವ ದಾಖಲೆಯೇ ಈ ಜಾತಿ ಪ್ರಮಾಣಪತ್ರ. ಈ ಪ್ರಮಾಣಪತ್ರವೂ ಸರ್ಕಾರದಿಂದ ವಿಶೇಷ ಪ್ರೋತ್ಸಾಹ ಮತ್ತು ಅವಕಾಶಗಳನ್ನು ಪಡೆಯುವ ಸಲುವಾಗಿ ಇದನ್ನು ನೀಡಲಾಗುತ್ತದೆ. ಈ ಜಾತಿ ಪ್ರಮಾಣಪತ್ರದ ಕುರಿತು ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: 36,000 ಸ್ಕಾಲರ್ ಶಿಪ್ ನೇರ ವಿದ್ಯಾರ್ಥಿಗಳ ಖಾತೆಗೆ; ಜಸ್ಟ್ ಈ ರೀತಿ ಅರ್ಜಿ ಸಲ್ಲಿಸಿ
ಜಾತಿ ಪ್ರಮಾಣಪತ್ರದ ಉಪಯೋಗವೇನು?:
* ತಮ್ಮ ಜಾತಿ ಮತ್ತು ಸಾಮಾಜಿಕ ಸ್ಥಾನಮಾನದ ಪುರಾವೆ
* ಶಾಸನಸಭೆ ಮತ್ತು ಸಂಸತ್ತಿನಲ್ಲಿ ಸ್ಥಾನಗಳ ಮೀಸಲಾತಿ ಪಡೆಯಲು ಅರ್ಹತೆ
* ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲು ಸ್ಥಾನಗಳಿಗೆ ಪ್ರವೇಶ
* ಶಾಲಾ ಮತ್ತು ಕಾಲೇಜು ಶುಲ್ಕಗಳಲ್ಲಿ ರಿಯಾಯಿತಿಗಳು
* ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅರ್ಹರನ್ನಾಗಿಸುತ್ತದೆ
* ಸರ್ಕಾರಿ ಸೇವೆಗಳು ಹಾಗೂ ಯೋಜನೆಗಳಲ್ಲಿ ಕೋಟಾಗಳು
* ಕೆಲವು ಉದ್ಯೋಗಗಳಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯ ಕುರಿತು ಮಹತ್ವದ ಕ್ರಮ; ಸರ್ಕಾರದಿಂದ ನಾಲ್ಕು ಹಂತದ ಸಮಿತಿ ರಚನೆ!
(Caste Certificate:) ಹಾಗಾದರೆ ಜಾತಿ ಪ್ರಮಾಣಪತ್ರದ ಪಡೆಯಲು ಅರ್ಹತೆ ಏನಿರಬೇಕು?:
* ಭಾರತದ ಪ್ರಜೆಯಾಗಿರಬೇಕು ಮತ್ತು ಕರ್ನಾಟಕದ ನಿವಾಸಿಯಾಗಿರಬೇಕು
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಇತರೆ ಹಿಂದುಳಿದ ವರ್ಗಗಳೆಂದು ಪಟ್ಟಿ ಮಾಡಲಾದ ಜಾತಿ, ಬುಡಕಟ್ಟು ಅಥವಾ ಸಮುದಾಯಕ್ಕೆ ಸೇರಿರಬೇಕು
* ಈಗಾಗಲೇ ಜಾತಿ ಪ್ರಮಾಣಪತ್ರ ಹೊಂದಿರದವರು ಮಾತ್ರ ಅರ್ಜಿ ಸಲ್ಲಿಸಬಹುದು
* ಕುಟುಂಬ ಸದಸ್ಯರು ಬೇರೆ ರಾಜ್ಯದ ಜಾತಿ ಪ್ರಮಾಣಪತ್ರ ಹೊಂದಿರಬಾರದು
ಅರ್ಜಿ ಸಲ್ಲಿಕೆ ಹೇಗೆ?:
ಜಾತಿ ಪ್ರಮಾಣಪತ್ರಕ್ಕೆ ಆನ್ ಲೈನ್ ಮೂಲಕ ಹಾಗೂ ಆಫ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಹೇಗೆ?:
ನಾಡಕಚೇರಿ AJKP ಅಧಿಕೃತ ವೆಬ್‌ಸೈಟ್ http://www.nadakacheri.karnataka.gov.in ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆಫ್ ಲೈನ್ ಮೂಲಕವಾದರೆ ಖುದ್ದಾಗಿ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ನಿಮ್ಮ ಗ್ರಾಮದಲ್ಲಿ ಈ ಸಮಸ್ಯೆಗಳಿದ್ರೆ ಸಹಾಯವಾಣಿಗೆ ಕರೆ ಮಾಡಿ
(Caste Certificate:) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುದು?:
ಅರ್ಜಿ ನಮೂನೆ (ಆನ್‌ಲೈನ್ ಅಥವಾ ಸ್ಥಳೀಯ ಸರ್ಕಾರಿ ಕಚೇರಿಗಳಲ್ಲಿ ಲಭ್ಯ).
ಗುರುತಿನ ಪುರಾವೆ: ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್‌ಪೋರ್ಟ್ ಇತ್ಯಾದಿ.
ನಿವಾಸದ ಪುರಾವೆ: ರೇಷನ್ ಕಾರ್ಡ್, ವಿದ್ಯುತ್ ಬಿಲ್ ಇತ್ಯಾದಿ.
ಜಾತಿ ಹಕ್ಕುದಾರಿಕೆಯ ಪುರಾವೆ: ಕುಟುಂಬ ಸದಸ್ಯರ ಜಾತಿ ಪ್ರಮಾಣಪತ್ರ, ಶಾಲಾ ಬಿಡುವ ಪ್ರಮಾಣಪತ್ರ (ಜಾತಿ ನಮೂದಾಗಿರುವ).
ಅರ್ಜಿದಾರರ ಜಾತಿ ಮತ್ತು ವಾಸಸ್ಥಳದ ವಿವರಗಳನ್ನು ಘೋಷಿಸುವ ಅಫಿಡವಿಟ್.
ಕೆಲವು ಸಂದರ್ಭಗಳಲ್ಲಿ, ಅರ್ಜಿದಾರರ ಜಾತಿಯನ್ನು ದೃಢೀಕರಿಸುವ ಸ್ಥಳೀಯ ಕಂದಾಯ ಇನ್ಸ್‌ಪೆಕ್ಟರ್ ಅಥವಾ ಗ್ರಾಮ ಲೆಕ್ಕಾಧಿಕಾರಿಯ ವರದಿ.
ವಯಸ್ಸಿನ ಪುರಾವೆ: ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ ಇತ್ಯಾದಿ.
ಆದಾಯದ ಪುರಾವೆ.
ಅರ್ಜಿ ಶುಲ್ಕ ಎಷ್ಟು?:
ಕರ್ನಾಟಕದಲ್ಲಿ ಜಾತಿ ಪ್ರಮಾಣಪತ್ರಕ್ಕೆ ಸಾಮಾನ್ಯವಾಗಿ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇದು ಎಲ್ಲ ಅರ್ಹ ವ್ಯಕ್ತಿಗಳಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ. ಆದರೆ, ನಾಡಕಚೇರಿ ಅಥವಾ ಸೇವಾ ಸಿಂಧು ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿದರೆ ಸೇವಾ ಶುಲ್ಕ 40 ರೂ. ನೀಡಬೇಕಾಗಬಹುದು.
ಗಮನಿಸಿ: ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ಶುಲ್ಕಗಳು ಕಾಲಕಾಲಕ್ಕೆ ಬದಲಾಗಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ವೆಬ್‌ಸೈಟ್ ಅಥವಾ ಸಮೀಪದ ನಾಡಕಚೇರಿ ಕೇಂದ್ರಗಳಲ್ಲಿ ಇತ್ತೀಚಿನ ಮಾಹಿತಿಯನ್ನು ಪರಿಶೀಲಿಸುವುದು ಉತ್ತಮ.

ಇತ್ತೀಚಿನ ಜನಪ್ರಿಯ ಸುದ್ದಿಗಳು (Caste Certificate:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





