Borewell: ಬೋರ್ವೆಲ್ ಕೊರೆಯುವ ನಿಯಮದಲ್ಲಿ ಮಹತ್ವ ಬದಲಾವಣೆ

(Borewell:) ಕೊಳವೆ ಬಾವಿಗಳನ್ನು ಸಮರ್ಪಕವಾಗಿ ಮುಚ್ಚದೇ ಮಕ್ಕಳು ಬಿದ್ದು ಆಗುವ ಅವಘಢಗಳನ್ನು ನಿಲ್ಲಿಸುವ ದೃಷ್ಟಿಯಿಂದ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ.


ಇದನ್ನೂ ಓದಿ: ಬಿಗ್‌ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಎಲಿಮಿನೇಷನ್‌!


ಕರ್ನಾಟಕ ಅಂತರ್ಜಲ (ಅಭಿವೃದ್ದಿ ಮತ್ತು ನಿರ್ವಹಣೆ ವಿನಿಮಯ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012 ಕ್ಕೆ ತಿದ್ದುಪಡಿ ಸಂಬಂಧ ರಾಜ್ಯ ಸರ್ಕಾರವು ರಾಜ್ಯ ಪತ್ರ ಹೊರಡಿಸಿದೆ. ಹಾಗಾದರೆ ನಿಯಮದಲ್ಲಿ ಏನಿದೆ ಎಂದು ನೋಡುವುದಾದರೆ.

* ಭೂಮಿಯ ಅಥವಾ ಆವರಣಗಳ ಮಾಲೀಕ (ರೈತನನ್ನು ಹೊರತುಪಡಿಸಿ) ಅಥವಾ ಅನುಷ್ಠಾನ ಏಜೆನ್ಸಿಯು ಕೊರೆ ಬಾವಿ ಅಥವಾ ಕೊಳವೆ ಬಾವಿಯನ್ನು ತೋಡುವ ಮೊದಲು ಕನಿಷ್ಟ ಹದಿನೈದು ದಿನಗಳಿಗೆ ಮುಂಚಿತವಾಗಿ ಸರ್ಕಾರವು ಕಾಲಕಾಲಕ್ಕೆ ಅಧಿಸೂಚಿಸಬಹುದಾದಂತೆ ಸಂದರ್ಭಾನುಸಾರ ಸ್ಥಳೀಯ ಪ್ರಾಧಿಕಾರದ ಅಧಿಕಾರಿ ಅಥವಾ ನಗರದ ಸ್ಥಳೀಯ ಸಂಸ್ಥೆಗೆ ಲಿಖಿತದಲ್ಲಿ ತಿಳಿಸಬೇಕು.

* ಕೊಳವೆ ಬಾವಿ ಕೊರೆಸುವುದನ್ನು ಪೂರ್ಣಗೊಳಿಸಿದ ನಂತರ ತಕ್ಷಣ ಕೊರೆಯುವ ಏಜೆನ್ಸಿ ಅಥವಾ ಅನುಷ್ಠಾನ ಏಜೆನ್ಸಿಯು ಕೊಳವೆ ಬಾವಿಯನ್ನು ಮಾರಣಾಂತಿಕ ಆಕಸ್ಮಿಕಗಳನ್ನು ತಡೆಯಲು ಸುರಕ್ಷತಾ ಕ್ರಮವಾಗಿ ಬೋಲು ಮತ್ತು ನಟ್ಟುಗಳೊಂದಿಗೆ ಸ್ಟೀಲು ಮುಚ್ಚಳದ ಮೂಲಕ ಅಥವಾ ಫ್ರೆಡ್ ಮಾಡಲಾದ ಮುಚ್ಚಳದ ಮೂಲಕ ಮುಚ್ಚಬೇಕು.


ಇದನ್ನೂ ಓದಿ: ಕೆನರಾ ಬ್ಯಾಂಕ್‌ ನಲ್ಲಿ ಜಾಬ್‌ ಆಫರ್‌; ವಿದ್ಯಾರ್ಹತೆ, ಸಂಬಳ ಕುರಿತು ಇಲ್ಲಿದೆ ಡಿಟೈಲ್ಸ್


* ವಿಫಲಗೊಂಡ ಅಥವಾ ಬಿಟ್ಟುಬಿಡಲಾದ ಅಥವಾ ಅಪೂರ್ಣವಾಗಿ ಕೊರೆಸಲಾದ ಕೊರ ಬಾವಿ ಅಥವಾ ಕೊಳವೆ ಬಾವಿಯ ಸಂದರ್ಭದಲ್ಲಿ ಗುದ್ದುಬೀಳುವುದನ್ನು ಅಥವಾ ಕುಸಿಯುವುದನ್ನು ತಡೆಯಲು, ಅದನ್ನು ಸ್ಥಳೀಯ ಬಳಕೆಯ ಕಲ್ಲುಗಳು ಮತ್ತು ತಿಳಿ ಕೆಸರಿನಿಂದ ತುಂಬತಕ್ಕದ್ದು ಹಾಗೂ ನೆಲ ಮಟ್ಟದಿಂದ ಮೇಲೆ 2’x2′ ದಿಬ್ಬವನ್ನು ಕಟ್ಟತಕ್ಕದ್ದು. ದಿಬ್ಬಕ್ಕೆ ಮುಳ್ಳು, ತಂತಿ ಅಥವಾ ಸ್ಥಳೀಯವಾಗಿ ಸಿಗುವ ಮುಳ್ಳು ಗಿಡಗಳೊಂದಿಗೆ ಬೇಲಿ ಹಾಕತಕ್ಕದ್ದು. ಘನ ತ್ಯಾಜ್ಯ ಅಥವಾ ರಾಸಾಯನಿಕ ತ್ಯಾಜ್ಯ ಪದಾರ್ಥಗಳಿಂದ ಹಾಗೆ ತುಂಬುದಲ್ಲ.

* ಭೂಮಿಯ ಅಥವಾ ಆವರಣಗಳ ಮಾಲೀಕ ಮತ್ತು ಅನುಷ್ಠಾನ ಏಜೆನ್ಸಿಯು 24 ಗಂಟೆಗಳೊಳಗಾಗಿ ವಿಫಲಗೊಂಡ ಅಥವಾ ಬಿಟ್ಟುಬಿಡಲಾದ ಅಥವಾ ಅಪೂರ್ಣವಾಗಿ ಕೊರೆಸಲಾದ ಕೊಳವೆ ಬಾವಿಯನ್ನು ಸುರಕ್ಷಿತವಾಗಿ ಮುಚ್ಚತಕ್ಕದ್ದು ಹಾಗೂ ಈ ಕುರಿತು ಕೈಗೊಂಡ ಕ್ರಮವನ್ನು ಮುಚ್ಚಲಾದ ಕೊಳವೆ ಬಾವಿಯ ಛಾಯಾಚಿತ್ರಗಳೊಂದಿಗೆ ತಕ್ಷಣವೇ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ತಿಳಿಸತಕ್ಕದ್ದು ಹಾಗೂ ಸಂಬಂಧಪಟ್ಟ ಪ್ರಾಧಿಕಾರವು ಪರಿಶೀಲನೆ ನಡೆಸಿ ಕೊಳವ ಬಾವಿಯನ್ನು ಮುಚ್ಚಲಾಗಿದೆ ಎಂದು ಪ್ರಮಾಣೀಕರಿಸಿದ ಪ್ರಮಾಣಪತ್ರವನ್ನು ನೀಡಬೇಕು.

ಕೊಳವ ಬಾವಿಯನ್ನು ಮುಚ್ಚಲಾಗಿದೆ ಎಂದು ಪ್ರಮಾಣೀಕರಿಸಿದ ಪ್ರಮಾಣಪತ್ರವನ್ನು ಹತ್ತಿರದ ಗ್ರಾಮ ಪಂಚಾಯತಿ ಅಥವಾ ಗ್ರಾಮ ಆಡಳಿತಾಧಿಕಾರಿಗೆ, ನಗರ ಸ್ಥಳೀಯ ನಿಕಾಯದ ಅಧಿಕಾರವ್ಯಾಪ್ತಿಯಲ್ಲಿನ ಸಂಬಂಧಿತ ಪೌರಾಡಳಿತ ಆಯುಕ್ತ ಅಥವಾ ಸಂದರ್ಭಾನುಸಾರವಾಗಿ, ಮುಖ್ಯಾಧಿಕಾರಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಇಂಜಿನಿಯರ್‌ ಗೆ ಸಲ್ಲಿಸಬೇಕು.


ಇದನ್ನೂ ಓದಿ: ಡಿಸೆಂಬರ್‌ ತಿಂಗಳ ಗೃಹಲಕ್ಷ್ಮಿ ಯೋಜನೆಯ 2000 ಹಣ ಈ ದಿನ ಜಮಾ!; ಹಣ ಬಾರದೇ ಇದ್ದಲ್ಲಿ ಜಸ್ಟ್‌ ಈ ರೀತಿ ಮಾಡಿ


* ದುರಸ್ತಿಗಳ ಸಂದರ್ಭದಲ್ಲಿ ಅರೆಮುಳುಗಡೆ (submersible) ಪಂಪ್ ಅನ್ನು ತೆಗೆಯಲಾದ ನಂತರ ತಕ್ಷಣವೇ ಮಾಲೀಕ (ರೈತನನ್ನು ಹೊರತುಪಡಿಸಿ) ಅಥವಾ ಸೇವೆನೀಡಿಕೆ ಏಜೆನ್ಸಿಯು ಕೊಳವೆ ಬಾವಿಯನ್ನು ಮಾರಣಾಂತಿಕ ಆಕಸ್ಮಿಕಗಳನ್ನು ತಡೆಯಲು ಸುರಕ್ಷತಾ ಕ್ರಮವಾಗಿ ಬೋಲು ಮತ್ತು ನಟ್ಟುಗಳೊಂದಿಗೆ ಸ್ಟೀಲು ಮುಚ್ಚಳದ ಮೂಲಕ ಅಥವಾ ಫ್ರೆಡ್ ಮಾಡಲಾದ ಮುಚ್ಚಳದ ಮೂಲಕ ಯುಕ್ತವಾಗಿ ಮುಚ್ಚಬೇಕು.

* ಕೊಳವೆ ಬಾವಿ ಜಾಗದಲ್ಲಿ ಸೂಚನಾಫಲಕಗಳನ್ನು ನಿಲ್ಲಿಸುವುದು. ಕೊರೆಯುವ ಏಜೆನ್ಸಿಯು ಕೊರೆ ಬಾವಿ ಅಥವಾ ಕೊಳವೆ ಬಾವಿಯನ್ನು ಕೊರೆಯುವ, ದುರಸ್ತಿಗೊಳಿಸುವ, ಪುನರುಜೀವನಗೊಳಿಸುವ ಸಮಯದಲ್ಲಿ ಕೊರೆಯುವ ಏಜೆನ್ಸಿ ಅಥವಾ ಅನುಷ್ಠಾನ ಏಜೆನ್ಸಿ ಅಥವಾ ಭೂಮಿ ಅಥವಾ ಆವರಣಗಳ ಮಾಲೀಕನ ಸಂಪೂರ್ಣ ವಿಳಾಸವನ್ನು ತೋರುವ ಸೂಚನಾಫಲಕಗಳನ್ನು ಜಾಗದ ಹತ್ತಿರ ನಿಲ್ಲಿಸಬೇಕು.

* ಕೊಳವೆ ಬಾವಿಗಳಿಗೆ ಬೇಲಿ ಹಾಕುವುದು. ಕೊರೆಯುವ ಏಜೆನ್ಸಿಯು ಕೊರೆಯುವಾಗ, ದುರಸ್ತಿಗೊಳಿಸುವಾಗ, ಪುನರುಜ್ಜಿವನಗೊಳಿಸುವಾಗ ಸಂಬಂಧಪಡುವ ವ್ಯಕ್ತಿಗಳ ಅಥವಾ ಮಕ್ಕಳ ಪ್ರವೇಶವನ್ನು ತಪ್ಪಿಸಲು ಕೊರೆ ಬಾವಿ ಅಥವಾ ಕೊಳವೆ ಬಾವಿಯ ಸುತ್ತಲೂ ಮುಳ್ಳು ತಂತಿ ಬೇಲಿ ಅಥವಾ ಯಾವುದೇ ಇತರ ಸೂಕ್ತ ತಡೆಗೋಡೆಯನ್ನು ನಿಲ್ಲಿಸಬೇಕು.

(Borewell:) ಸ್ಥಳೀಯ ಪ್ರಾಧಿಕಾರಗಳ ಕರ್ತವ್ಯಗಳು:
* ಗ್ರಾಮ ಪಂಚಾಯತಿ, ಗ್ರಾಮ ಆಡಳಿತಾಧಿಕಾರಿ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ನಗರ ಪಾಲಿಕೆಗಳು ಮತ್ತು ಸಂದರ್ಭಾನುಸಾರವಾಗಿ ಪುರಸಭೆಗಳಂತಹ ಸಂಬಂಧಪಟ್ಟ ನಗರ ಸ್ಥಳೀಯ ಪ್ರಾಧಿಕಾರಗಳು ಮತ್ತು ಮಂಡಳಿಗಳ ಕಿರಿಯ ಎಂಜಿನಿಯರುಗಳು ಕೊರೆಸಲಾದ ಕೊಳವೆ ಬಾವಿಗಳ ಮೇಲೆ ನಿಗಾ ಇಡಬೇಕು ಮತ್ತು ವಿಫಲಗೊಂಡ ಅಥವಾ ಬಿಟ್ಟುಬಿಟ್ಟ ಅಥವಾ ನಿಷ್ಕ್ರಿಯಗೊಂಡ ಕೊಳವೆ ಬಾವಿಗಳನ್ನು ಮಾನವ ಸಾವು-ನೋವುಗಳನ್ನು ತಡೆಯಲು ಮುಚ್ಚಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

* ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾಮ ಆಡಳಿತಾಧಿಕಾರಿ, ಸಂಬಂಧಪಟ್ಟ ನಗರ ಸ್ಥಳೀಯ ಪ್ರಾಧಿಕಾರಗಳ ಕಿರಿಯ ಎಂಜಿನಿಯರುಗಳು ಅಥವಾ ಆಯುಕ್ತರು ಅಥವಾ ಮುಖ್ಯಾಧಿಕಾರಿಗಳು ಕೊಳವೆ ಬಾವಿಗಳ ಸಂಬಂಧದಲ್ಲಿ ನಿರ್ದಿಷ್ಟಪಡಿಸಿದ ನಮೂನೆಯ ಅನುಸಾರವಾಗಿ ಒಂದು ವಹಿಯನ್ನು ನಿರ್ವಹಿಸಬೇಕು ಮತ್ತು ಅಂತರ್ಜಲ ಪ್ರಾಧಿಕಾರ ಅಥವಾ 21ಎ ಪ್ರಕರಣದಡಿ ಈ ಕುರಿತು ಪ್ರಾಧೀಕರಿಸಿದ ಯಾರೇ ಅಧಿಕಾರಿಗೆ ತ್ರೈಮಾಸಿಕ ವರದಿಯನ್ನು ಸಲ್ಲಿಸಬೇಕು.


ಇದನ್ನೂ ಓದಿ:  17,000 ಸ್ಕಾಲರ್‌ ಶಿಪ್‌ ನೇರ ವಿದ್ಯಾರ್ಥಿಗಳ ಖಾತೆಗೆ; ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


* ಕುಡಿಯುವ ನೀರು ಅಥವಾ ನೀರಾವರಿ ಅಥವಾ ವಾಣಿಜ್ಯ ಸೋಮುಗಳ ಅನುಷ್ಠಾನ ಏಜೆನ್ಸಿಯ ಪ್ರಭಾರೆಯಲ್ಲಿರುವ ಅಧಿಕಾರಿಯು, ಕಾರ್ಯಾಚರಣೆಯಲ್ಲಿರುವ ಕೊಳವ ಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಲಾಗಿದೆ ಎಂಬುದನ್ನು ಖಚಿತಪಡಿಕೊಳ್ಳಬೇಕು.

* ಸಂಬಂಧಪಟ್ಟ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಯು ಪಂಚಾಯತಿ ಕಛೇರಿಯ ಆವರಣಗಳಲ್ಲಿ ಯಶಸ್ವಿಯಾದ ಅಥವಾ ವಿಫಲವಾದ ಅಥವಾ ಬಿಟ್ಟುಬಿಟ್ಟ ಅಥವಾ ನಿಷ್ಕ್ರಿಯಗೊಂಡ ಅಥವಾ ಅಪೂರ್ಣವಾಗಿ ಕೊರೆಯಲಾದ ಕೊಳವೆ ಬಾವಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕನ್ನಡ ಭಾಷೆಯಲ್ಲಿ ಫಲಕವನ್ನು ಪ್ರದರ್ಶಿಸಬೇಕು.

* ಈ ನಿಯಮಗಳನ್ನು ವ್ಯಕ್ತಿಯು ಉಲ್ಲಂಘಿಸಿದರೆ ಮೂರು ತಿಂಗಳುಗಳ ಅವಧಿಯವರೆಗೆ ವಿಸ್ತರಿಸಬಹುದಾದ ಸಾದಾ ಕಾರವಾಸದೊಂದಿಗೆ ಅಥವಾ ಐದು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ದಂಡಿತನಾಗಬೇಕು.

* ಯಾರೇ ವ್ಯಕ್ತಿ ಉಲ್ಲಂಘಿಸಿದರೆ ಆರು ತಿಂಗಳುಗಳ ಅವಧಿಯವರೆಗೆ ವಿಸ್ತರಿಸಬಹುದಾದ ಸಾದಾ ಕಾರವಾಸದೊಂದಿಗೆ ಅಥವಾ ಹತ್ತು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ದಂಡಿತನಾಗಬೇಕು.

* ಕೊರೆಯುವ ಮತ್ತು ಸೇವೆನೀಡಿಕೆ ಏಜೆನ್ಸಿಗಳ ವೈಫಲ್ಯಕ್ಕಾಗಿ ಒಂದು ವರ್ಷದ ಅವಧಿಯವರೆಗೆ ವಿಸ್ತರಿಸಬಹುದಾದ ಸಾದಾ ಕಾರವಾಸದೊಂದಿಗೆ ಮತ್ತು ಇಪ್ಪತ್ತೈದು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ದಂಡಿತನಾಗಬೇಕು.

* ಯಾವುದೇ ಕೊರೆಯುವ ಮತ್ತು ಸೇವೆನೀಡಿಕೆ ಏಜೆನ್ಸಿಯು ಪ್ರಕರಣ 21ಬಿ ಮತ್ತು 21ಸಿರ ಅಡಿಯಲ್ಲಿ ಕರ್ತವ್ಯಗಳನ್ನು ಪಾಲಿಸಲು ವಿಫಲವಾದರೆ, ಮೂರು ತಿಂಗಳ ಅವಧಿಗೆ ವಿಸ್ತರಿಸಬಹುದಾದ ಸಾದಾ ಕಾರವಾಸದೊಂದಿಗೆ ಮತ್ತು ಐದು ಸಾವಿರ ರೂಪಾಯಿಗಳಿಗೆ ವಿಸ್ತರಿಸಬಹುದಾದ ಜುಲ್ಮಾನೆಯೊಂದಿಗೆ ದಂಡಿತನಾಗಬೇಕು.

Borewell: ಬೋರ್ವೆಲ್ ಕೊರೆಯುವ ನಿಯಮದಲ್ಲಿ ಮಹತ್ವ ಬದಲಾವಣೆ
Borewell: ಬೋರ್ವೆಲ್ ಕೊರೆಯುವ ನಿಯಮದಲ್ಲಿ ಮಹತ್ವ ಬದಲಾವಣೆ