Betting Apps: ಆನ್‌ಲೈನ್‌ ಗೇಮಿಂಗ್‌ ಮಸೂದೆ ಪಾಸ್‌: ಪ್ರಚಾರ ಮಾಡಿದ್ರೂ ಜೈಲು ಶಿಕ್ಷೆ ಫಿಕ್ಸ್‌!

(Betting Apps:) ಹೆಚ್ಚುತ್ತಿರುವ ವ್ಯಸನ ಮತ್ತು ಹಣ ವರ್ಗಾವಣೆ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಹಣದಿಂದ ಆಡುವ ಆನ್‌ಲೈನ್ ಆಟಗಳನ್ನು (ಬೆಟ್ಟಿಂಗ್ ಆ್ಯಪ್) ನಿಷೇಧಿಸುವ ಮಸೂದೆಯನ್ನು ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತ್ತು. ಇದೀಗ ಮಸೂದೆಯ ಕರಡು ಕಾನೂನನ್ನು (Bill Pass) ಲೋಕಸಭೆ ಬುಧವಾರ ಅಂಗೀಕರಿಸಿದೆ.


ನ್ನೂ ಓದಿ: ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ; ಜಸ್ಟ್‌ ಈ ರೀತಿ ಅರ್ಜಿ ಸಲ್ಲಿಸಿ


ಪ್ರಸ್ತಾವಿತ ಮಸೂದೆ ಬೆಟ್ಟಿಂಗ್ ಅಥವಾ ಜೂಜಾಟಗಳನ್ನು ಒಳಗೊಂಡ ಆನ್‌ಲೈನ್ ಗೇಮ್ ಗಳನ್ನು ನಿಷೇಧಿಸಲು ಕಠಿಣ ನಿಬಂಧನೆ ಜೊತೆಗೆ ಶಿಕ್ಷೆ ಮತ್ತು ದಂಡ ಒಳಗೊಂಡಿರಲಿದೆ. ಮುಖ್ಯವಾಗಿ ಸೆಲೆಬ್ರಿಟಿಗಳು ಬೆಟ್ಟಿಂಗ್ ಸಂಬಂಧಿತ ಆನ್‌ಲೈನ್ ಗೇಮಿಂಗ್ ಅಪ್ಲಿಕೇಷನ್‌ಗಳನ್ನು ಪ್ರಚಾರ ಮಾಡಲು ನಿರ್ಬಂಧ ಹೇರುವುದಕ್ಕೆ ಹಾಗೂ ಈ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

(Betting Apps:) ಸಮಾಜದ ಸ್ವಾಸ್ಥ ಕೆಡಿಸಿ, ಯುವಪೀಳಿಗೆಗೆ ಕಂಟಕವಾಗಿ ಮಾರ್ಪಟ್ಟಿರುವ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ ಗಳ ದುರುಪಯೋಗ ನಿಯಂತ್ರಿಸಲು ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟುಮಾಡುವ ಅಕ್ರಮ ಬೆಟ್ಟಿಂಗ್ ಚಟುವಟಿಕೆ ನಿಗ್ರಹಿಸುವ ಆನ್‌ಲೈನ್ ಗೇಮಿಂಗ್ ಮಸೂದೆಗೆ ಅಂಗೀಕಾರವಾಗಿದೆ.


ನ್ನೂ ಓದಿ: 30,0000 ಸ್ಕಾಲರ್‌ ಶಿಪ್‌: ಯಾರು ಅರ್ಹರು…?


ಅಕ್ರಮ ಹಣದ ಗೇಮಿಂಗ್ ಮಾಡಿದ್ದು ಸಾಬೀತಾದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು / ಅಥವಾ 1 ಕೋಟಿ ರೂ.ವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ. ಆನ್‌ಲೈನ್‌ ಗೇಮ್‌ಗಳಿಗೆ ಜಾಹೀರಾತು ಮಾಡಿದವರಿಗೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು / ಅಥವಾ 50 ಲಕ್ಷ ರೂ.ವರೆಗೆ ದಂಡವನ್ನು ವಿಧಿಸಬಹುದು. ಸಂಬಂಧಿತ ವಹಿವಾಟುಗಳಲ್ಲಿ ಭಾಗಿಯಾಗಿರುವ ಹಣಕಾಸು ಸಂಸ್ಥೆಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ ಅಥವಾ 1 ಕೋಟಿ ರೂ.ವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ.

(Betting Apps:) ಒಂದು ವೇಳೆ ಮತ್ತೊಮ್ಮೆ ಈ ಅಪರಾಧ ಎಸಗಿದ್ದಲ್ಲಿ ದೀರ್ಘಾವಧಿಯ ಜೈಲು ಶಿಕ್ಷೆ ಮತ್ತು ಹೆಚ್ಚಿನ ದಂಡ ಸೇರಿದಂತೆ ಕಠಿಣ ಶಿಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಈ ಅಪರಾಧ ಎಸಗಿದ್ದಲ್ಲಿ ಜಾಮೀನು ಸಿಗುವುದಿಲ್ಲ. ಶಂಕಿತ ಪ್ರಕರಣಗಳಲ್ಲಿ ತನಿಖೆ ಮಾಡಲು, ಶೋಧಿಸಲು ಮತ್ತು ಆಸ್ತಿಯನ್ನು ವಶಪಡಿಸಿಕೊಳ್ಳಲು ಮತ್ತು ವಾರಂಟ್ ಇಲ್ಲದೆ ಬಂಧಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗುತ್ತದೆ.

Betting Apps: ಆನ್‌ಲೈನ್‌ ಗೇಮಿಂಗ್‌ ಮಸೂದೆ ಪಾಸ್‌: ಪ್ರಚಾರ ಮಾಡಿದ್ರೂ ಜೈಲು ಶಿಕ್ಷೆ ಫಿಕ್ಸ್‌!
Betting Apps: ಆನ್‌ಲೈನ್‌ ಗೇಮಿಂಗ್‌ ಮಸೂದೆ ಪಾಸ್‌: ಪ್ರಚಾರ ಮಾಡಿದ್ರೂ ಜೈಲು ಶಿಕ್ಷೆ ಫಿಕ್ಸ್‌!

ಇತ್ತೀಚಿನ ಜನಪ್ರಿಯ ಸುದ್ದಿಗಳು (Betting Apps:)

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ