ಕರೆಂಟ್ ಬಿಲ್ ಕಟ್ಟಿ ಎಂದಿದ್ದಕ್ಕೆ ಮೆಸ್ಕಾಂ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿತ

ಹಾಸನ: (ನ್ಯೂಸ್ ಮಲ್ನಾಡ್ ವರದಿ) ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೂ ಬರುವ ಮುನ್ನವೇ ಪ್ರತೀ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಇನ್ನೂ ಈ ಯೋಜನೆಯನ್ನು ಜಾರಿ ಮಾಡಿಲ್ಲ ಎಂದು ವಿಪಕ್ಷಗಳು ವಾಗ್ದಾಳಿಯನ್ನು ಮುಂದುವರೆಸಿವೆ.

ಇದನ್ನೂ ಓದಿ; ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಚ್ ಡಿ ತಮ್ಮಯ್ಯ ಫುಲ್ ರೌಂಡ್ಸ್

ಮತ್ತೊಂದೆಡೆ ವಿದ್ಯುತ್ ಬಿಲ್ ಕಲೆಕ್ಷನ್‌ಗೆ ಬಂದಂತಹ ಸಿಬ್ಬಂದಿಗಳ ಮೇಲೂ ಹಲವರು ಹಲ್ಲೆ ಮಾಡಿದ ಘಟನೆಗಳು ನಡೆದಿವೆ. ಅದೇ ರೀತಿಯ ಘಟನೆ ಇದೀಗ ಹಾಸನ ಜಿಲ್ಲೆಯ ಅರಕಲಗೂಡಿಲ್ಲೂ ನಡೆದಿದೆ.

ಇದನ್ನೂ ಓದಿ; ಭೀಕರ ರಸ್ತೆ ಅಪಘಾತ; ತಲೆ ಮೇಲೆ ಟಿಪ್ಪರ್ ಹರಿದು ಬಾಲಕಿ ಸಾವು

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಹಳೇ ಕೋರ್ಟ್ ರಸ್ತೆಯಲ್ಲಿರುವ ಸುರೇಶ್ ಎಂಬುವವರ ಮನೆಗೆ ಮೆಸ್ಕಾಂ ಸಿಬ್ಬಂದಿ ಬುಧವಾರ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಹೋಗಿದ್ದರು. ಈ ವೇಳೆ ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಏನಿವಾಗ ಎಂದು ಮೆಸ್ಕಾಂ ಸಿಬ್ಬಂದಿ ಸಂತೋಷ್ ಎಂಬುವವರ ಮೇಲೆ ಕೋಳಿ ಅಂಗಡಿ ಮಾಲೀಕ ಸುರೇಶ್ ಮತ್ತು ಆತನ ಮಗ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಹಲ್ಲೆಗೊಳಗಾದ ಸಂತೋಷ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ಮಾಹಿತಿಯನ್ನು ಕಲೆಹಾಕಿದ್ದಾರೆ. ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಿರುಗಾಳಿ ಮಳೆ ಸೃಷ್ಟಿಸಿದ ಅವಾಂತರ: ಎಲ್ಲೆಲ್ಲಿ ಏನೇನು?

ಹಾಸನ: (ನ್ಯೂಸ್ ಮಲ್ನಾಡ್ ವರದಿ) ಈಗಾಗಲೇ ರಾಜ್ಯದ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುವ ಮೂಲಕ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದಾನೆ ಹಲವೆಡೆ ಬೆಳೆಗಳು ನಾಶವಾಗಿದೆ, ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ.

ಇದನ್ನೂ ಓದಿ; ಭೀಕರ ರಸ್ತೆ ಅಪಘಾತ; ತಲೆ ಮೇಲೆ ಟಿಪ್ಪರ್ ಹರಿದು ಬಾಲಕಿ ಸಾವು

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲವೆಡೆ ನಿನ್ನೆ ಧಾರಾಕಾರವಾಗಿ ಸುರಿದ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಬೇಲೂರು, ಚೀಕನಹಳ್ಳಿ, ಮೂಡಿಗೆರೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೃಹತ್ ಮರಗಳು, 17 ವಿದ್ಯುತ್ ಕಂಬಗಳು ಧರೆಗುರುಳಿವೆ. ಮತ್ತು ಮೂರು ಟ್ರಾನ್ಸ್ ಫಾರ್ಮ ಗಳು ಹಾಳಾಗಿವೆ. ಮತ್ತೊಂದೆಡೆ ಕೋನರ್ಲು ಗ್ರಾಮದಲ್ಲಿ ಬಿರುಗಾಳಿಗೆ ಹುಸೇನ್ ಎಂಬುವವರ ವಾಸದ ಮನೆಯ ಮೇಲ್ನಾವಣಿ ಹಾರಿ ಹೋಗಿದೆ. ಇನ್ನು ಭಾರಿ ಮಳೆಯಿಂದ ಟ್ರಾನ್ಸ್ಫಾರ್ಮ ಗಳು ಹಾಳಾದ ಹಿನ್ನೆಲೆ ನಿನ್ನೆಯಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಾಗೆಯೆ ಬೇಲೂರು ತಾಲೂಕಿನ, ಬಳ್ಳೂರು ಗ್ರಾಮದಲ್ಲಿ ಧರ್ಮೇಗೌಡ ಎಂಬುವವರ ಜಮೀನಿನಲ್ಲಿ ನೂರಾರು ಬಾಳೆ ಗಿಡಗಳು ಮುರಿದು ಬಿದ್ದಿದ್ದು, ಬಾಳೆ ಬೆಳೆ ಕಳೆದುಕೊಂಡ ರೈತ ಧರ್ಮೇಗೌಡ ಕಾಂಗಾಲಾಗಿದ್ದಾರೆ. ಅಲ್ಲದೆ ಗಾಳಿ, ಮಳೆಯಿಂದ ನೆಲಕ್ಕುರುಳಿದ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ಸಾರ್ವಜನಿಕರೇ ತೆರವುಗೊಳಿಸಿದ್ದಾರೆ.

ಇದನ್ನೂ ಓದಿ; ಟ್ರಕ್ಕಿಂಗ್ ತೆರಳಿದ್ದ ವ್ಯಕ್ತಿ ನಾಪತ್ತೆಯಾಗಿದ್ದ ಪ್ರಕರಣ; ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಪತ್ತೆ