Appointment: SC-ST ನೇಮಕಾತಿ ಕುರಿತು ಮಹತ್ವದ ಆದೇಶ

(Appointment) ಅನುಕಂಪದ ಆಧಾರದ ಮೇಲೆ ನೇಮಕಾತಿ ನೀಡುವ ಕುರಿತು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಅನುಕಂಪದ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸುವ ಕುರಿತು ಮಹತ್ವದ ಆದೇಶ ಹೊರಡಿಸಿದೆ.


ಇದನ್ನೂ ಓದಿ:  ಬೋರ್ವೆಲ್ ಕೊರೆಯುವ ನಿಯಮದಲ್ಲಿ ಮಹತ್ವ ಬದಲಾವಣೆ; ಏನಿದೆ ನೋಡಿ…


ಈ ನಿಬಂಧನೆಗಳು ಪೂರೈಸಿದರೆ ಮಾತ್ರ ನೇಮಕಾತಿ:
ಸರ್ಕಾರಿ ನೌಕರನು ಸೇವೆಯಲ್ಲಿರುವಾಗಲೇ ಮೃತಪಟ್ಟಲ್ಲಿ ಆತನ ಅವಲಂಬಿತರಲ್ಲಿ ಒಬ್ಬರಿಗೆ ಕರ್ನಾಟಕ ಸಿವಿಲ್ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು 1996 ರನ್ವಯ ಅರ್ಹತೆಯ ಆಧಾರದ ಮೇಲೆ ಅನುಕಂಪದ ಆಧಾರದ ನೇಮಕಾತಿಯನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ.

ಆದರೆ, ಸದರಿ ಅನುಕಂಪದ ಆಧಾರದ ನೌಕರಿಯನ್ನು ಸರ್ಕಾರಿ ನೌಕರನು ಸೇವೆಯಲ್ಲಿರುವಾಗಲೇ ಮೃತನಾದಲ್ಲಿ ಆತನ ಕುಟುಂಬಕ್ಕೆ ಉಂಟಾಗುವ ಆರ್ಥಿಕ ಸ್ತೋಭೆಯನ್ನು ತಡೆಯಲು ನೀಡುವಂತಹ ವ್ಯವಸ್ಥೆಯಾಗಿದ್ದರೂ ಇದನ್ನು ಹಕ್ಕೊತ್ತಾಯ ಮಾಡಲು ಅವಕಾಶವಿರುವುದಿಲ್ಲ. ಈ ನಿಯಮಗಳಲ್ಲಿ ಅನುಕಂಪದ ನೇಮಕಾತಿಗಾಗಿ ನಿಗಧಿಪಡಿಸಿರುವ ಎಲ್ಲಾ ಷರತ್ತು ಮತ್ತು ನಿಬಂಧನೆಗಳನ್ನು ಅರ್ಜಿದಾರರು ಪೂರೈಸಿದಲ್ಲಿ ಮಾತ್ರ ಅನುಕಂಪದ ನೇಮಕಾತಿಗಾಗಿ ಪರಿಗಣಿಸಬಹುದಾಗಿದೆ.


ಇದನ್ನೂ ಓದಿ: 17,000 ಸ್ಕಾಲರ್‌ ಶಿಪ್‌ ನೇರ ವಿದ್ಯಾರ್ಥಿಗಳ ಖಾತೆಗೆ; ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


ಅಭ್ಯರ್ಥಿಯ ವಿದ್ಯಾರ್ಹತೆಗನುಗುಣವಾಗಿ ಕರ್ನಾಟಕ ಸರ್ಕಾರ ಸಚಿವಾಲಯದ ಸಹಾಯಕ ಹುದ್ದೆಯ ವೇತನ ಶ್ರೇಣಿಯನ್ನು ಮೀರದಂತಹ ಗರಿಷ್ಠ ಗ್ರೂಪ್ “ಸಿ” ಹುದ್ದೆ ಅಥವಾ ಗ್ರೂಪ್ “ಡಿ” ಹುದ್ದೆಯನ್ನು ನೀಡಬಹುದಾಗಿದೆ. ಅನುಕಂಪದ ಆಧಾರದ ಮೇಲಿನ ನೇಮಕಾತಿ ಅರ್ಜಿಯನ್ನು ಸಲ್ಲಿಸಿದಾಗ ಯಾವ ನಿಯಮ ಚಾಲ್ತಿಯಲ್ಲಿರುತ್ತದೆಯೋ ಆ ಪ್ರಕಾರವಾಗಿ ನಿರ್ಧರಿಸಬೇಕಿರುತ್ತದೆ. ಹಾಗೂ ಅನುಕಂಪದ ಆಧಾರದ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕಾಲಮಿತಿಯೊಳಗೆ ಅಭ್ಯರ್ಥಿಯು ಹೊಂದಿರುವ ವಿದ್ಯಾರ್ಹತೆಯನ್ನು ಪರಿಗಣಿಸಿ ನೇಮಕಾತಿ ನೀಡಬೇಕಾಗುತ್ತದೆ.


ಇದನ್ನೂ ಓದಿ: ಮನೆ ನಿರ್ಮಾಣಕ್ಕೆ ಸಿಗಲಿದೆ 2.50 ಲಕ್ಷ!; ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ


(Appointment) ಎಸ್ಸಿ-ಎಸ್ಟಿ ಅಭ್ಯರ್ಥಿಗಳ ನೇಮಕಾತಿಯಲ್ಲಿ ದೂರು:
ಕೆಲವು ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅನುಕಂಪದ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ಅವರುಗಳ ವಿದ್ಯಾರ್ಹತೆಯನ್ನು ಪರಿಗಣಿಸದೇ ಕೆಳಹಂತದ ಹುದ್ದೆಗಳಿಗೆ ನೇಮಕಾತಿ ಮಾಡಿರುವ ಬಗ್ಗೆ ದೂರುಗಳು ಸ್ವೀಕೃತವಾಗಿದ್ದು, ಈ ನಡೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ.


ಇದನ್ನೂ ಓದಿ: ವಾಹನ ಸವಾರರಿಗೆ ಗುಡ್‌ ನ್ಯೂಸ್ ಕೊಟ್ಟ ನಿತಿನ್ ಗಡ್ಕರಿ; ಏನದು? ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಇದರಿಂದಾಗಿ ಎಸ್ಸಿ-ಎಸ್ಟಿ ಪಂಗಡ ಸೇರಿದಂತೆ ಇತರೆ ಜಾತಿ/ಧರ್ಮ/ವರ್ಗದ ಆಧಾರದ ಮೇಲೆ ಅಭ್ಯರ್ಥಿಗಳಿಗೆ ಅನುಕಂಪದ ಆಧಾರದ ನೇಮಕಾತಿ ನೀಡುವ ಸಂದರ್ಭದಲ್ಲಿ ಯಾವುದೇ ತಾರತಮ್ಯ ಮಾಡದಂತೆ ನಿಯಮಾನುಸಾರ ಪರಿಶೀಲಿಸಿ ಹಾಗೂ ನಿಯಮಾನುಸಾರ ಕ್ರಮವಹಿಸದ ಅಧಿಕಾರಿ / ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸೂಚಿಸಿದೆ.

Appointment: SC-ST ನೇಮಕಾತಿ ಕುರಿತು ಮಹತ್ವದ ಆದೇಶ
Appointment: SC-ST ನೇಮಕಾತಿ ಕುರಿತು ಮಹತ್ವದ ಆದೇಶ

ಇತ್ತೀಚಿನ ಜನಪ್ರಿಯ ಸುದ್ದಿಗಳು

  1. ಕೃಷಿ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಪೂರೈಕೆ ಕುರಿತು ಮುಖ್ಯ ಆದೇಶ; ಏನದು? ಇಲ್ಲಿದೆ ನೋಡಿ
  2. ರಾಜ್ಯ ಸರ್ಕಾರದಿಂದ SC-ST ವರ್ಗಕ್ಕೆ ಗುಡ್ ನ್ಯೂಸ್; ಏನದು ಗೊತ್ತಾ?
  3. ಇ-ಖಾತೆ ಕುರಿತು ಆಯುಕ್ತರಿಂದ ಖಡಕ್‌ ಸೂಚನೆ; ಏನದು ಗೊತ್ತಾ? ಇಲ್ಲಿದೆ ನೋಡಿ ಡಿಟೈಲ್ಸ್
  4. 2nd PUC ವಿದ್ಯಾರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  5. ಆಸ್ತಿ ಮಾಲೀಕರೇ ಗಮನಿಸಿ; ಇ-ಖಾತೆ ಪಡೆಯಲು ಈ ದಾಖಲೆಗಳು ಕಡ್ಡಾಯ!
  6. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  7. ರೇಷನ್‌ ಕಾರ್ಡ್‌ ತಿದ್ದುಪಡಿ/ಸೇರ್ಪಡೆಗೆ ಅವಕಾಶ; ಲಾಸ್ಟ್‌ ಡೇಟ್‌ ಯಾವಾಗ ಗೊತ್ತಾ? ಇಲ್ಲಿದೆ ನೋಡಿ
  8. ರಾಜ್ಯದಲ್ಲಿ DL, RC ಸ್ಮಾರ್ಟ್‌ ಕಾರ್ಡ್‌ ಹೊಸ ರೂಪಕ್ಕೆ ಸಮಸ್ಯೆ ಸೃಷ್ಟಿ; ಜನರ ಪರದಾಟ, ಏನಿದು ಸಮಸ್ಯೆ, ಇಲ್ಲಿದೆ ನೋಡಿ
  9. ಪಂಚಾಯತಿ ರಾಜ್’ನಿಂದ 7,000 ಸ್ಕಾಲರ್‌ ಶಿಪ್‌; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?, ಇಲ್ಲಿದೆ ಡಿಟೈಲ್ಸ್
  10. ರೇಷನ್‌ ಕಾರ್ಡ್‌ ಹೊಂದಿದ್ರೆ ಈ ಸುದ್ದಿ ಮಿಸ್‌ ಮಾಡ್ದೆ ಓದಿ; ಇಲ್ಲಿದೆ ಭರ್ಜರಿ ಗುಡ್‌ ನ್ಯೂಸ್
  11. ಗೃಹಲಕ್ಷ್ಮಿ ಯೋಜನೆಯ 2000 ಹಣ ಜಮಾ!; ಹಣ ಬಾರದಿದ್ದರೆ ತಪ್ಪದೇ ಈ ಕೆಲಸ ಮಾಡಿ
  12. 1 ರಿಂದ 10ನೇ ತರಗತಿ ಮಕ್ಕಳಿಗೆ ಇಲ್ಲಿದೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ
  13. ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಟ್ರ್ಯಾಕ್ಟರ್ ಖರೀದಿಸಲು ಸರ್ಕಾರದಿಂದ ಸಬ್ಸಿಡಿ!, ಎಷ್ಟು ಗೊತ್ತಾ?
  14.  ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳ ಗಮನಕ್ಕೆ; ಮಾಸಿಕ ಗೌರವ ಧನ ಹೆಚ್ಚಳದ ಕುರಿತು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದೇನು?
  15. ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್‌; ಏನಿದೆ ಹೊಸ ರೂಲ್ಸ್‌? ಇಲ್ಲಿದೆ ನೋಡಿ
  16. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್‌ ಕಾರ್ಡ್ ವಿತರಣೆ!‌; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ
  17. ಭೂ ದಾಖಲೆಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಮಾಹಿತಿ; ಇಲ್ಲಿದೆ ಡಿಟೈಲ್ಸ್
  18. B.COM, BA ಓದುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಭರ್ಜರಿ ನ್ಯೂಸ್‌; ಏನದು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
  19. PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್‌ ಸಾಲ ಕೂಡ ಲಭ್ಯ
  20. ಗೃಹಲಕ್ಷ್ಮಿ ಯೋಜನೆಯ 2000 ಹಣ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ನಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ