(Additional salary hike:) ರಾಜ್ಯದ ಸರ್ಕಾರಿ, ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು, ಮುಖ್ಯ ಶಿಕ್ಷಕರುಗಳಿಗೆ ಹೆಚ್ಚುವರಿ ವೇತನ ಬಡ್ತಿಯನ್ನು ಮೂಲವೇತನದೊಂದಿಗೆ ವಿಲೀನಗೊಳಿಸುವಾಗ ಉಂಟಾದ ಗೊಂದಲದ ಬಗ್ಗೆ ಮಹತ್ವದ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆ ಹಂಚಿಕೊಂಡಿದೆ.
ಇದನ್ನೂ ಓದಿ: ಮುಂದಿನ ತಿಂಗಳಿನಿಂದ ಇಂದಿರಾ ಆಹಾರ ಕಿಟ್ ವಿತರಣೆ
ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ಮಂಜೂರು ಮಾಡಲಾದ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ಮೂಲವೇತನದೊಂದಿಗೆ ವಿಲೀನಗೊಳಿಸುವಾಗ ದಿ:20.10.2018 ರ ಸರ್ಕಾರ ಆದೇಶ ಸಂಖ್ಯೆ: ಆಇ 28 ಎಸ್.ಆರ್.ಪಿ 2018ರ ಆದೇಶದನ್ವಯ ವೇತನವನ್ನು ನಿಗದಿಪಡಿಸಬೇಕಾಗಿರುತ್ತದೆ ಎಂದು ಹೇಳಿದ್ದಾರೆ.
(Additional salary hike:) ಈ ರೀತಿ ವೇತನ ನಿಗದಿಪಡಿಸುವಾಗ ಮಂಜೂರು ಮಾಡಿರುವ ಹೆಚ್ಚುವರಿ ವೇತನ ಬಡ್ತಿಯು ನಿಶ್ಚಿತವಾಗಿದ್ದು, ಕಾಲಕಾಲಕ್ಕೆ ಸದರಿ ಮೊತ್ತ ಪರಿಷ್ಕರಣೆಗೆ ಅವಕಾಶವಿರುವುದಿಲ್ಲ. ಈ ಹಿನ್ನಲೆಯಲ್ಲಿ ದಿ:20.10.2018 ರ ಆದೇಶದಂತೆ ವೇತನ ನಿಗದಿಪಡಿಸುವಾಗ ಈ ಕೆಳಕಂಡಂತೆ ಕ್ರಮವಹಿಸಬೇಕಾಗಿರುತ್ತದೆ.
ಇದನ್ನೂ ಓದಿ: ಆರೋಗ್ಯ ಸಂಜೀವಿನಿ ಯೋಜನೆ ನೋಂದಣಿ ಕುರಿತು ಮಹತ್ವದ ಆದೇಶ
1. ದಿನಾಂಕ: 01.11.2018 ರಲ್ಲಿ ಇದ್ದ ಮೂಲವೇತನ : (ದಿ:01.11.2018 ರಲ್ಲಿದ್ದ ಮೂಲವೇತನ) + (2016 ರಲ್ಲಿ ಮಂಜೂರಾದ ಹೆಚ್ಚುವರಿ ವೇತನ ಬಡ್ತಿ ಮೊತ್ತ)
2. ದಿನಾಂಕ: 01.11.2018 ಕ್ಕೆ ವಿಲೀನಗೊಳಿಸಿದ ನಂತರ ಮೂಲವೇತನ: (ಕ್ರಸಂ.(1)ರ ಒಟ್ಟಾರೆ ಮೊತ್ತ
3. ದಿನಾಂಕ: 01.11.2018 ಕ್ಕೆ ಪರಿಷ್ಕೃತ ವೇತನ ಶ್ರೇಣಿಯ ಅನ್ವಯಿಸುವ ವೇತನ ಹಂತದಲ್ಲಿ ವೇತನ ನಿಗದಿ: [ಹುದ್ದೆಯ ವೇತನ ಶ್ರೇಣಿಯಲ್ಲಿನ ವಾರ್ಷಿಕ ವೇತನ ಬಡ್ತಿಯ ಮುಂದಿನ ಹಂತ]
4. ಮುಂದಿನ ವಾರ್ಷಿಕ ಬಡ್ತಿ ದಿನಾಂಕ: [ಯಥಾಸ್ಥಿತಿ]
ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರುಗಳು ಈ ಬಗ್ಗೆ ವೈಯಕ್ತಿಕ ಗಮನಹರಿಸಿ ತಮ್ಮ ಜಿಲ್ಲೆಗಳಲ್ಲಿನ ಸರ್ಕಾರಿ/ಅನುದಾನಿತ ಪ್ರೌಢಶಾಲಾ ಸಹ ಶಿಕ್ಷಕರು/ಮುಖ್ಯ ಶಿಕ್ಷಕರುಗಳಿಗೆ ವೇತನ ನಿಗದಿಯನ್ನು ಪುನರ್ ಪರಿಶೀಲಿಸಿ ಮೇಲಿನಂತೆ ವೇತನ ನಿಗದಿಯಾಗಿರುವುದನ್ನು ಖಚಿತ ಪಡಿಸಿಕೊಳ್ಳುವುದು. ವ್ಯತಿರಿಕ್ತವಾಗಿ ವೇತನ ನಿಗದಿಪಡಿಸಲಾದ ಪ್ರಕರಣಗಳಲ್ಲಿ ಹೆಚ್ಚುವರಿ ವೇತನ ಪಾವತಿಯಾಗಿರುವ ಮೊತ್ತವನ್ನು ಕಟಾವಣೆ ಮಾಡಿ ಸರ್ಕಾರದ ಲೆಕ್ಕಶೀರ್ಷಿಕೆಗೆ ಜಮಾ ಆಗಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರುಗಳ ಜವಾಬ್ದಾರಿಯಾಗಿರುತ್ತದೆ.

ಇದನ್ನೂ ಓದಿ: ಪಿಎಂ ಕಿಸಾನ್ 2000 ಹಣ ಈ ದಿನ ಜಮಾ!
ಇತ್ತೀಚಿನ ಜನಪ್ರಿಯ ಸುದ್ದಿಗಳು (Additional salary hike:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





