(Aadhaar biometric:) ಅಂಚೆ ಇಲಾಖೆ ಈಗ ಹೆಚ್ಚೆಚ್ಚು ಡಿಜಿಟಲೀಕರಣಗೊಳ್ಳುತ್ತಿದೆ. ಮಾಸಿಕ ಆದಾಯ ಯೋಜನೆ, ಟೈಮ್ ಡೆಪಾಸಿಟ್, ಕಿಸಾನ್ ವಿಕಾಸ್ ಪತ್ರ, ರಾಷ್ಟ್ರೀಯ ಉಳಿತಾಯ ಪತ್ರ ಇತ್ಯಾದಿ ಕೆಲ ಆಯ್ದ ಉಳಿತಾಯ ಯೋಜನೆಗಳ ಪ್ರಕ್ರಿಯೆಯನ್ನು ಅಂಚೆ ಇಲಾಖೆ ಸಂಪೂರ್ಣ ಡಿಜಿಟಲೀಕರಣಗೊಳಿಸಿದೆ. ಆ ನಿಟ್ಟಿನಲ್ಲಿ ಆಧಾರ್ ಬಯೋಮೆಟ್ರಿಲ್ ಅಥೆಂಟಿಕೇಶನ್ ಫೀಚರ್ ಅನ್ನು ಜಾರಿಗೆ ತಂದಿದೆ.
ಇದನ್ನೂ ಓದಿ: ರಾಜ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸರ್ಕಾರದಿಂದ ಮಹತ್ವದ ಆದೇಶ!
ಸರ್ಕಾರ ಹೊಸ ಸೇವಿಂಗ್ಸ್ ಅಕೌಂಟ್ಗಳನ್ನು ತೆರೆಯಲು ಆಧಾರ್ ಆಧಾರಿತ ಇ-ಕೆವೈಸಿಯನ್ನು 2025ರ ಜನವರಿ 6ರಂದು ಜಾರಿಗೆ ತಂದಿತ್ತು. ಗ್ರಾಹಕ ಮಾಹಿತಿ ಕಡತ ಅಥವಾ ಸಿಐಎಫ್, ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ ತೆರೆಯಲು ಇದನ್ನು ಬಳಸಲಾಗುತ್ತಿದೆ. ಈಗ ಈ ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಅಂಚೆ ಕಚೇರಿಯ ಕೆಲ ಜನಪ್ರಿಯ ಸೇವಿಂಗ್ ಸ್ಕೀಮ್ ಗಳಿಗೆ ವಿಸ್ತರಿಸಲಾಗಿದೆ.
(Aadhaar biometric:) ಅಂಚೆ ಕಚೇರಿಯ ಸೇವಿಂಗ್ಸ್ ಸ್ಕೀಮ್ಗಳನ್ನು ತೆರೆಯಬೇಕಾದರೆ ಸೇವಿಂಗ್ಸ್ ಅಕೌಂಟ್ ತೆರೆಯಬೇಕಾದರೆ ಕಾಗದದ ಅರ್ಜಿಗಳನ್ನು ಭರ್ತಿ ಮಾಡಬೇಕು. ಡೆಪಾಸಿಟ್ ಸ್ಲಿಪ್ ಗಳನ್ನು ಸಲ್ಲಿಸಬೇಕು. ಆದರೆ, ಈಗ ಅಧಾರ್ ದೃಢೀಕರಣ ಮೂಲಕ ಅಕೌಂಟ್ ತೆರೆಯಲು ಸಾಧ್ಯವಾಗುತ್ತದೆ. ಎಲ್ಲಾ ಅಂಚೆ ಕಚೇರಿ ಸರ್ಕಲ್ ಗಳಿಗೂ ಇಕೆವೈಸಿ ಅವಕಾಶ ಕಲ್ಪಿಸುವಂತೆ ಸರ್ಕಾರ ಸೂಚಿಸಿದೆ.
ಇದನ್ನೂ ಓದಿ: ಶೃಂಗೇರಿಯ ಟ್ರಿಲಿಯಂಟ್ ಡಿಜಿಟಲ್ ಕಂಪನಿಯಲ್ಲಿ ಭರ್ಜರಿ ಜಾಬ್ ಆಫರ್!; ವಾಕ್-ಇನ್ ಸಂದರ್ಶನ, ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ
ಮುಂದಿನ ದಿನಗಳಲ್ಲಿ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಅಕೌಂಟ್ ಅಂತ್ಯಗೊಳಿಸಲು, ವರ್ಗಾವಣೆ ಮಾಡಲು, ನಾಮಿನೇಶನ್ ಅಪ್ಡೇಟ್ ಮಾಡಲು ಇತ್ಯಾದಿ ಕಾರ್ಯಗಳಿಗೂ ಆಧಾರ್ ಆಧಾರಿತ ಬಯೋಮೆಟ್ರಿಕ್ ಅಥೆಂಟಿಕೇಶನ್ ಬಳಸುವಂತಾಗಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಪೋಸ್ಟ್ ಆಫೀಸ್ ಖಾತೆ ಆರಂಭಿಸಲು ನೀವು ಅಂಚೆ ಕಚೇರಿಗೆ ಹೋದಾಗ ಅಲ್ಲಿ ಕೌಂಟರ್ ಪೋಸ್ಟಲ್ ಅಸಿಸ್ಟೆಂಟ್ ಅವರು ಸಿಸ್ಟಂ ಮೆನು ಬಳಸುತ್ತಾರೆ. ಮೊದಲಿಗೆ ಪೂರ್ವಾನುಮತಿಗಾಗಿ ನಿಮ್ಮ ಬಯೋಮೆಟ್ರಿಕ್ ಡಾಟಾ (ಫಿಂಗರ್ ಪ್ರಿಂಟ್) ಪಡೆಯಲಾಗುತ್ತದೆ. ನಂತರ, ಹೆಸರು, ಯಾವ ಸ್ಕೀಮ್, ಠೇವಣಿ ಹಣ ಇತ್ಯಾದಿ ವಿವರವನ್ನು ಸಿಸ್ಟಂಗೆ ನೀಡಲಾಗುತ್ತದೆ. ಅಂತಿಮವಾಗಿ ಅದನ್ನು ಸಲ್ಲಿಸಲು ಎರಡನೇ ಬಾರಿ ಫಿಂಗರ್ ಪ್ರಿಂಟ್ ಪಡೆಯಲಾಗುತ್ತದೆ. ಇ-ಕೆವೈಸಿ ಅಕೌಂಟ್ ಓಪನಿಂಗ್ ಫಾರ್ಮ್ನಲ್ಲೇ ಠೇವಣಿ ಮೊತ್ತವನ್ನು ನಮೂದಿಸಿರುವುದರಿಂದ ಪ್ರತ್ಯೇಕವಾಗಿ ಡೆಪಾಸಿಟ್ ಸ್ಲಿಪ್ ತುಂಬುವ ಅವಶ್ಯಕತೆ ಇರುವುದಿಲ್ಲ. (Aadhaar biometric:)

ಇತ್ತೀಚಿನ ಜನಪ್ರಿಯ ಸುದ್ದಿಗಳು (Aadhaar biometric:)
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?





