(Share Market Crash Kannada) ಪ್ರಿ ಮಾರ್ಕೆಟ್ ನಲ್ಲಿ ಗ್ಯಾಪ್ ಅಪ್ ಸೂಚನೆ ನೀಡುತ್ತಿದ್ದ ಮಾರುಕಟ್ಟೆ, ಓಪನ್ ಆಗುತ್ತಿದ್ದಂತೆಯೇ ಚುನಾವಣಾ ಲೆಕ್ಕಾಚಾರದಲ್ಲಿ ಅತಂತ್ರ ಮನಗಂಡು ಚಾರ್ಟ್ ನಲ್ಲಿ ಮಾರ್ಕ್ ಮಾಡಿರುವಂತೆ ಮೇಜರ್ ಸಪೋರ್ಟ್ ಇಂದಲೇ ಗ್ಯಾಪ್ ಡೌನ್ ಓಪನ್ ಆಗಿ ಭೀಕರ ಕುಸಿತ ಕಂಡಿತು. FMCG ಸೆಕ್ಟರ್ ಹೊರತುಪಡಿಸಿದರೆ ಮಿಕ್ಕೆಲ್ಲ ಸೆಕ್ಟರ್ ಗಳು ಕೆಂಪು ಬಣ್ಣಕ್ಕೆ ತಿರುಗಿದ್ದವು. ಫಲಿತಾಂಶದಲ್ಲಿ ಅತಂತ್ರ ಪರಿಸ್ಥಿತಿ ಮುಂದುವರೆದಂತೆ ಮಾರ್ಕೆಟ್ ನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿ ಪ್ಯಾನಿಕ್ ಸೆಲ್ಲಿಂಗ್ ಶುರುವಾಯಿತು. ಮದ್ಯಾಹ್ನದ ಹೊತ್ತಿದೆ ಕೊಂಚ ಚೇತರಿಕೆ ಕಂಡರೂ ಸಹ, ನಿಫ್ಟಿಯಲ್ಲಿ ಉತ್ತಮ ಕ್ಲೋಸಿಂಗ್ ಕಂಡು ಬರಲಿಲ್ಲ. ದೀರ್ಘಾವಧಿ ಹೂಡಿಕೆದಾರರ ಪೋರ್ಟ್ಫೋಲಿಯೋ ಸಹ ಇಂದು ನಷ್ಟ ಕಂಡಿದೆ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ಜಮೆಯಾಗಿಲ್ಲವೇ.?; ಹಾಗಿದ್ರೆ ತಕ್ಷಣವೇ ಈ ಕೆಲಸ ಮಾಡಿ!

ನಿಫ್ಟಿಯಲ್ಲಿ ಇನ್ನೊಂದು ಕುಸಿತದ ಬಗ್ಗೆ ಮೊದಲೇ ಸುಳಿವು ನೀಡಲಾಗಿತ್ತು!
ಹೌದು, ಎಕ್ಸಿಟ್ ಪೋಲ್, ಎಲೆಕ್ಷನ್ ರಿಸಲ್ಟ್ ಅಥವಾ ಇನ್ಯಾವುದೇ ಇತರೆ ಮೇಜರ್ ಇವೆಂಟ್ ಇದ್ದರು ಸಹ ಪ್ರೈಸ್ ಆಕ್ಷನ್ ಗೆ ಹೆಚ್ಚು ಗಮನ ನೀಡಬೇಕು. ಏಕೆಂದರೆ ಇಂತಹ ಮೇಜರ್ ಇವೆಂಟ್ ಗಳಲ್ಲಿ ಮಾಧ್ಯಮ, ಸೋಶಿಯಲ್ ಮೀಡಿಯಾ ಮತ್ತು ಪೊಲಿಟಿಕಲ್ ಹೇಳಿಕೆಗಳಿಂದ ಹೂಡಿಕೆದಾರಲ್ಲಿ ಅನವಶ್ಯಕ ಹೈಪ್ ಕ್ರಿಯೇಟ್ ಆಗಿ ಹೂಡಿಕೆದಾರನ್ನು ಕನ್ಫ್ಯೂಸ್ ಮಾಡುತ್ತವೆ. ಈ ಬಾರಿಯ ಚುನಾವಣೆಯಲ್ಲಿ ಸ್ವತಃ ಮೋದಿ ಹಾಗು ಅಮಿತ್ ಶಾಹ್ ಅವರು ಷೇರು ಮಾರುಕಟ್ಟೆಯ ಕುರಿತು ಮಾತನಾಡಿದ್ದು ಈತರಹ ಕನ್ಫ್ಯೂಷನ್ ಗೆ ಇನ್ನಷ್ಟು ಪುಷ್ಟಿ ನೀಡಿದೆ. ಇದರಿಂದಾಗಿ ಬುಲ್ಲಿಶ್ ಮಾರ್ಕೆಟ್ ಕಡೆಗೆ ಯೋಜನೆ ರೂಪಿಸಿ ಹೂಡಿಕೆ ಇಟ್ಟುಕೊಂಡಿದ್ದ ಹಲವರಿಗೆ ಇಂದು ದೊಡ್ಡ ಆಘಾತವಾಗಿದೆ.
ಇದನ್ನೂ ಓದಿ: ಒಳ್ಳೆಯ ಗಳಿಕೆ ನೀಡಲಿರುವ ಈ ಷೇರಿನ ಬಗ್ಗೆ ಇರಲಿ ಗಮನ!
ಕಳೆದ ಶುಕ್ರವಾರದ ಆರ್ಟಿಕಲ್ ನಲ್ಲಿಯೇ ನಿಫ್ಟಿಯಲ್ಲಿ ಇನ್ನಷ್ಟು ಕುಸಿತ ಬಾಕಿ ಇದೆ ಎಂದು ಪ್ರೈಸ್ ಆಕ್ಷನ್ ಆಧಾರದ ಮೇಲೆ ಚರ್ಚಿಸಲಾಗಿತ್ತು, ಹಾಗು ಎಲ್ಲಿಯವರಿಗೆ ಕುಸಿಯಬಹುದು ಎಂಬ ಊಹೆಯನ್ನು ಮಾಡಲಾಗಿತ್ತು. ಹಾಗೆಯೆ ನಿನ್ನೆಯ ಬರಹದ ಚಾರ್ಟ್ ನಲ್ಲಿ ನಿಫ್ಟಿಯ ಚಾರ್ಟ್ ನಲ್ಲಿ ಗ್ಯಾಪ್ ಸಹ ಮಾರ್ಕ್ ಮಾಡಲಾಗಿತ್ತು. ಹಾಗು ಯಾವುದೇ ಟ್ರೇಡ್ ಮಾಡದೇ ಹಣವನ್ನು ಸುರಕ್ಷಿಸಿಕೊಳ್ಳುವುದು ಉತ್ತಮ ಎಂಬ ಸಲಹೆ ಸಹ ನೀಡಲಾಗಿತ್ತು.
ಇದನ್ನೂ ಓದಿ: 100 ರೂ. ಆಸುಪಾಸಿನಲ್ಲಿರುವ ಇದಕ್ಕೆ ಹೂಡಿಕೆ ಮಾಡಬಹುದಾ?
ನಿಫ್ಟಿಯಲ್ಲಿ ಮುಂದೇನು ?
ನಿಫ್ಟಿಯಲ್ಲಿ ಇಂದು ಸ್ವಲ್ಪ ಮಟ್ಟದ ರಿವರ್ಸ್ ಕಂಡಿದ್ದರು ಸಹ ಇದು ಶಾಶ್ವತವಲ್ಲ ಎನಿಸುತ್ತದೆ, ಇನ್ನೊಂದಷ್ಟು ಕುಸಿತ ಅಥವಾ ಸೈಡ್ ವೇಸ್ ನಲ್ಲಿ ಸಾಗಬಹುದು. ಒಂದು ವೇಳೆ ನಿಫ್ಟಿ ನಾಳೆ 22300 ರ ಮೇಲೆ ಕ್ಲೋಸ್ ನೀಡಿದಲ್ಲಿ ಮಾತ್ರ ಬುಲ್ಲಿಶ್ ಸೈಡ್ ಯೋಚಿಸಬಹುದು.
(ಹೂಡಿಕೆ ಮಾಡುವ ಮುನ್ನ ಅಧಿಕೃತ /ಸರ್ಟಿಫೈಡ್ ಅಡ್ವೈಸರ್ ನೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ)
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 17 ನೇ ಕಂತಿನ ಹಣ ಬಿಡುಗಡೆ; ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ! ಹೀಗೆ ಚೆಕ್ ಮಾಡಿ
- ಈ ಜಿಲ್ಲೆಯ ರೈತರಿಗೆ ಗುಡ್ ನ್ಯೂಸ್; 44.34 ಕೋಟಿ ಬೆಳೆವಿಮೆ ಮಂಜೂರು
- HSRP ನಂಬರ್ ಪ್ಲೇಟ್ ಅಳವಡಿಕೆಗೆ ಗುಡ್ ನ್ಯೂಸ್; ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದ ರಾಜ್ಯ ಸರ್ಕಾರ
- ರೈತರೇ ಗಮನಿಸಿ; ಈ ಯೋಜನೆಯಲ್ಲಿ ಸಿಗಲಿದೆ 3 ಸಾವಿರ ಹಣ; ಹೇಗೆ? ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ HSRP ನಂಬರ್ ಪ್ಲೇಟ್ ಹಾಕಿಸಿಲ್ವಾ?; ಹಾಗಿದ್ರೆ ತಪ್ಪದೇ ಈ ಸುದ್ದಿ ಓದಿ
- ಪಾನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿ; ಆಧಾರ್ ಜೊತೆ ಪಾನ್ ಲಿಂಕ್ ಮಾಡಲು 2 ದಿನ ಮಾತ್ರ ಬಾಕಿ; ಐಟಿ ಇಲಾಖೆಯಿಂದ ಮಹತ್ವದ ಸೂಚನೆ
- ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮಗಳು ಜಾರಿ
- ನಿರುದ್ಯೋಗಿ ಯುವಕ/ಯುವತಿಯರಿಗೆ ಗುಡ್ ನ್ಯೂಸ್; ಮೈತ್ರಿ ತರಬೇತಿಗೆ ಅರ್ಜಿ ಆಹ್ವಾನ
- ಪಡಿತರ ಚೀಟಿದಾರರ ಗಮನಕ್ಕೆ; ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್ ಕಾರ್ಡ್
- ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್;ನೆಕ್ಸ್ಟ್ ಜೆನ್ ಎಜು ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ






