(Senior citizen card 25:) 60 ವಯಸ್ಸುಗಿಂತ ಹೆಚ್ಚು ಆಗಿರುವ ಹಿರಿಯ ನಾಗರಿಕರಿಗೆ ಕರ್ನಾಟಕ ಸರ್ಕಾರದಿಂದ ಸಿಗುವ ಈ ಕಾರ್ಡ್ ನಿಮ್ಮ ಬಳಿ ಇದ್ದರೆ ಹಲವಾರು ಸೌಕರ್ಯ ಮತ್ತು ಸರ್ಕಾರದ ಸೌಲಭ್ಯ ನಿಮಗೆ ಸಿಗುವುದು. ಈ ಕಾರ್ಡ್ ಅನ್ನು ಹಿರಿಯ ನಾಗರಿಕರ ಗುರುತಿನ ಚೀಟಿಯೇ ಎಂದು ಗುರುತಿಸಲಾಗಿದೆ. ಸೀನಿಯರ್ ಸಿಟಿಜನ್ ಕಾರ್ಡಿಗೆ ಅಪ್ಲೈ ಮಾಡಲು ಈ ವಿವರಗಳನ್ನು ಸರಿಯಾಗಿ ಓದಿ.
ಇದನ್ನೂ ಓದಿ: ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನ
* 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರ ಹಿರಿಯ ನಾಗರಿಕರಿಗೆ ಈ ಕಾರ್ಡ್ ಅರ್ಜಿ ಹಾಕಬಹುದು.
* ಈ ಗುರುತಿನ ಚೀಟಿ ಇದ್ದರೆ ಹಲವು ಸರ್ಕಾರದ ಯೋಜನೆ ಹಾಗೂ ಸೇವೆಗಳಲ್ಲಿ ರಿಯಾಯಿತಿಯು ಕೂಡ ಪಡೆಯಬಹುದು.
ಈ ಕಾರ್ಡ್ ನಲ್ಲಿ ಯಾವ ಸೇವೆ ಬರುವುದು?:
* ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ಸರ್ಕಾರಿ ಬಸ್ ಗಳಲ್ಲಿ ಕಡಿಮೆ ಹಣದಲ್ಲಿ ಪ್ರಯಾಣ ಮಾಡಬಹುದು
* ಆರೋಗ್ಯ ಸೇವೆಗಳು :- ಆಸ್ಪತ್ರೆಗಳಲ್ಲಿ ನಿಮ್ಮ ಬಿಲ್ ರಿಯಾಯಿತಿ ಆಗುವುದು.
* ಬ್ಯಾಂಕ್ ಗಳಲ್ಲಿ ಹಿರಿಯ ನಾಗರಿಕರಿಗೆ ಮೊದಲ ಆದ್ಯತೆ ನೀಡಲಾಗುವುದು.
ಇದನ್ನೂ ಓದಿ: ರೈತರಿಗೆ ಹೊಸ ಪಹಣಿ, ನಕ್ಷೆ ನೀಡಲು ಅಭಿಯಾನ; ಸಚಿವ ಕೃಷ್ಣ ಬೈರೇಗೌಡ ಮಾಹಿತಿ
ಅರ್ಜಿ ಸಲ್ಲಿಕೆ ಹೇಗೆ:
* ಮೊದಲಿಗೆ ಸರ್ಕಾರದ ಅಧಿಕೃತ ವೆಬ್ಸೈಟ್ ಆದ ಸೇವಾ ಸಿಂಧು ವೆಬ್ಸೈಟ್ ಗೆ ಭೇಟಿ ನೀಡಿ
* ನಂತರ ನಿಮ್ಮ ಮೊಬೈಲ್ ನಂಬರ್ ಅಥವಾ ನಿಮ್ಮ ಇಮೇಲ್ ಐಡಿ ಮೂಲಕ ಲಾಗಿನ್ ಮಾಡಿ
* ಹಿರಿಯ ನಾಗರಿಕರು ಗುರುತಿನ ಚೀಟಿ ಎಂಬ ಸೇವೆಯನ್ನು ಆಯ್ಕೆ ಮಾಡಿಕೊಳ್ಳಿ
* ಅಲ್ಲಿ ಕೇಳುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಬರ್ತಿ ಮಾಡಿಕೊಳ್ಳಿ
(Senior citizen card 25:) ಬೇಕಾಗುವಂತ ಅಗತ್ಯ ದಾಖಲೆಗಳು?:
* ಆಧಾರ್ ಕಾರ್ಡ್
* ಎರಡು ಪಾಸ್ಪೋರ್ಟ್ ಸೈಜ್ ಫೋಟೋ
* ವಯಸ್ಸಿನ ಪತ್ರ
* ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
ಇದನ್ನೂ ಓದಿ: 500 ಮೀಟರ್ ಒಳಗಿನ ಪಂಪ್ಸೆಟ್ ಗಳಿಗೆ ಇಲಾಖೆಯಿಂದಲೇ ಟ್ರಾನ್ಸ್ಫಾರ್ಮರ್!; ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿಕೆ
ಅರ್ಜಿಯನ್ನು ಸಲ್ಲಿಸಿದ ನಂತರ ಒಂದು ವಾರಕ್ಕೆ ನಿಮಗೆ ಡಿಜಿಟಲ್ ಕಾರ್ಡ್ ಬರುವುದು ಅದನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು. ಅರ್ಜಿ ಹಾಕಲು ಕೊನೆಯ ದಿನಾಂಕವನ್ನು ಸರ್ಕಾರ ಸೂಚನೆ ನೀಡಿಲ್ಲ.

ಇತ್ತೀಚಿನ ಜನಪ್ರಿಯ ಸುದ್ದಿಗಳು (Senior citizen card 25:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





