(RSSB Recruitment 25:) ರಾಷ್ಟ್ರೀಯ ಆರೋಗ್ಯ ಮಿಷನ್ (ಆಯುರ್ವೇದ/ಹೋಮಿಯೋಪತಿ/ಯುನಾನಿ) ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: 10th ಹಾಗೂ PUC ಪಾಸ್ ಆದವರಿಗೆ ಜಾಬ್ ಆಫರ್; ಆಕರ್ಷಕ ಸಂಬಳ
ಆಯುಷ್ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ರಾಜಸ್ಥಾನ ಸಿಬ್ಬಂದಿ ಆಯ್ಕೆ ಮಂಡಳಿ (RSSB) ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಅಕ್ಟೋಬರ್ 10 ರಂದು ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಆಯ್ಕೆ ಮಂಡಳಿಯ ಅಧಿಕೃತ ವೆಬ್‌ಸೈಟ್ rssb.rajasthan.gov.in ಗೆ ಭೇಟಿ ನೀಡುವ ಮೂಲಕ ನವೆಂಬರ್ 8 ರವರೆಗೆ ಅರ್ಜಿ ಸಲ್ಲಿಸಬಹುದು.
ಎಷ್ಟು ಹುದ್ದೆಗಳು ಖಾಲಿ ಇದೆ:
ಒಟ್ಟು 1535 ಆಯುಷ್ ಅಧಿಕಾರಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಇದನ್ನೂ ಓದಿ: ಜಾಗ ಒತ್ತುವರಿ ಮಾಡಿಕೊಂಡವರಿಗೆ ಬಿಗ್ ಶಾಕ್; ಮುಲಾಜಿಲ್ಲದೆ ತೆರವು ಮಾಡುವಂತೆ CM ಸಿದ್ದರಾಮಯ್ಯ ಸೂಚನೆ!
(RSSB Recruitment 25:) ಅರ್ಜಿ ಸಲ್ಲಿಸಲು ಅರ್ಹತೆಗಳೇನು?
ರಾಜಸ್ಥಾನ ಆಯುಷ್ ಅಧಿಕಾರಿ ನೇಮಕಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಆಯುರ್ವೇದ (BAMS), ಹೋಮಿಯೋಪತಿ (BHMS), ಅಥವಾ ಯುನಾನಿ (BUMS) ಪದವಿಯನ್ನು ಹೊಂದಿರಬೇಕು. ವಯಸ್ಸಿನ ಮಿತಿ 21 ರಿಂದ 40 ವರ್ಷಗಳು. ಮೀಸಲು ವಿಭಾಗಗಳ ಅರ್ಜಿದಾರರಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯೂ ಲಭ್ಯವಿದೆ.
ಯಾವ ವರ್ಗಕ್ಕೆ ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ವರ್ಗದ (OBC/MBC) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 600 ರೂ. ಉಳಿದ OBC/MBC, EWS, SC, ST (ರಾಜಸ್ಥಾನ ನಿವಾಸಿಗಳು) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 400 ರೂ. ಅಂಗವಿಕಲ ಅಭ್ಯರ್ಥಿಗಳು ಸಹ 400 ರೂ. ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: 5 ಕೆಜಿ ಅಕ್ಕಿ ಬದಲಾಗಿ ಇಂದಿರಾ ಆಹಾರ ಕಿಟ್ ವಿತರಣೆ; ಏನಿರಲಿದೆ? ಆಹಾರ ಕಿಟ್’ನಲ್ಲಿ
ಅರ್ಜಿ ಸಲ್ಲಿಸುವುದು ಹೇಗೆ?
ಆಯ್ಕೆ ಮಂಡಳಿಯ ಅಧಿಕೃತ ವೆಬ್‌ಸೈಟ್ rssb.rajasthan.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು (RSSB Recruitment 25:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





