(RATION- AADHAR LINK) ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ ಎಂಬ ಸುದ್ದಿ ಹಾಗೂ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಜನರು ರೇಷನ್ ಕಾರ್ಡ್ ನೋಂದಣಿ ಕೇಂದ್ರಗಳತ್ತ ಮುಗಿ ಬೀಳುತ್ತಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಸುದ್ದಿಗೆ ಆಹಾರ ಇಲಾಖೆ ಸ್ಪಷ್ಟನೆ ನೀಡಿದ್ದು, ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭಿಸಿಲ್ಲ, ಇದು ಕೇವಲ ವದಂತಿಯಾಗಿದೆ. ಸದ್ಯ ರೇಷನ್ ಕಾರ್ಡ್ ತಿದ್ದಪಡಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಯಜಮಾನಿಯರಿಗೆ ಸರ್ಕಾರದಿಂದ ಬಿಗ್ ಶಾಕ್; ಇನ್ಮುಂದೆ ಇಂತಹವರಿಗೆ ಬರಲ್ಲ ಗೃಹಲಕ್ಷ್ಮಿ ಯೋಜನೆಯ ಹಣ
ಇನ್ನು ರೇಷನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡುವ ಗಡುವನ್ನು ಕೂಡ ಸರ್ಕಾರದ ವಿಸ್ತರಿಸಿದ್ದು, ಇದರಿಂದ ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಂತಾಗಿದೆ. ಹೌದು, ಪಡಿತರ ಚೀಟಿ ಜೊತೆ ಆಧಾರ್ ಕಾರ್ಡ್ ಜೋಡಣೆ ದಿನಾಂಕವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ ಮಾಡಿದೆ. ಹಾಗಾದರೆ ರೇಷನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡುವುದು ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅನರ್ಹ BPL ರೇಷನ್ ಕಾರ್ಡ್ ರದ್ದು; ರಾಜ್ಯ ಸರ್ಕಾರ ಖಡಕ್ ಆದೇಶ..!; ನಿಮ್ಮ ಕಾರ್ಡ್ ರದ್ದಾಗಿದೆಯೇ ಚೆಕ್ ಮಾಡಿ
ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದು ಹೇಗೆ?:
ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ರಾಜ್ಯದ ನಾನಾ ಜಿಲ್ಲಾ ಕೇಂದ್ರಗಳಲ್ಲಿರುವ ಮುಂತಾದ ಸೇವಾ ಕೇಂದ್ರಗಳಲ್ಲಿ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಡಲಾಗುತ್ತದೆ. ಇನ್ನು ಆನ್ ಲೈನ್ ಮೂಲಕವೇ ನೀವು ಮಾಡಬಹುದಾಗಿದೆ. ಈ ಕುರಿತು ಇಲ್ಲಿದೆ ಡಿಟೈಲ್ಸ್.
ಇದನ್ನೂ ಓದಿ: ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
* ಆಹಾರ ಇಲಾಖೆಯ ವೆಬ್ ಸೈಟ್ ಗೆ ತೆರಳಿ. (https://ahara.kar.nic.in/Home/EServices)
* ಇ – ಸೇವೆಗಳನ್ನು ಆಯ್ಕೆ ಮಾಡಿ.
* ಆನಂತರ ಅಲ್ಲಿ ಯುಐಡಿ ಲಿಂಕ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ.
* ಹೊಸ ಪುಟ ತೆರೆದುಕೊಳ್ಳುತ್ತದೆ ಅಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು UID linking for RC members ಅನ್ನು ಕ್ಲಿಕ್ ಮಾಡಿ GO ಎಂಬ ಬಟನ್ ಕ್ಲಿಕ್ ಮಾಡಿದರೆ, ಮತ್ತೊಂದು ಹೊಸ ವೆಬ್ ಪುಟ ತೆರೆದುಕೊಳ್ಳುತ್ತದೆ.
* ಅಲ್ಲಿ ನೀಡಲಾಗಿರುವ ನಿಗದಿತ ಜಾಗದಲ್ಲಿ ಆಧಾರ್ ಸಂಖ್ಯೆ ನಮೂದಿಸಿ GO ಬಟನ್ ಕ್ಲಿಕ್ ಮಾಡಿ.
* ನಿಮ್ಮ ಮೊಬೈಲ್ ಒನ್ ಟೈಂ ಪಾಸ್ ವರ್ಡ್ (OTP) ಬರುತ್ತದೆ. ಅದನ್ನು ನಮೂದಿಸಿ ಅಲ್ಲೇ ಇರುವ GO ಬಟನ್ ಒತ್ತಿ.
ಇದನ್ನೂ ಓದಿ: ಯಜಮಾನಿಯರಿಗೆ ಗುಡ್ ನ್ಯೂಸ್; ಜೂನ್-ಜುಲೈ ತಿಂಗಳ 4000 ಹಣ ಒಟ್ಟಿಗೆ ಜಮಾ..!
* ಆನಂತರ ಓಪನ್ ಆಗುವ ಮತ್ತೊಂದು ಪುಟದಲ್ಲಿ ನಿಮ್ಮ ಪಡಿತರ ಚೀಟಿಯ ಸಂಖ್ಯೆಯನ್ನು ನಮೂದಿಸಲು ಕೇಳಲಾಗುತ್ತದೆ.
* ಅಲ್ಲಿ, RC ನಂಬರ್ ಎಂಟರ್ ಎಂದು ಇರುವ ಕಡೆ ಪಡಿತರ ಚೀಟಿಯ ನಂಬರ್ ಹಾಕಬೇಕು.
* ನಂತರ ಮುಂದೆ ಇರುವ GO ಬಟನ್ ಒತ್ತಿದರೆ ಪಡಿತರ ಕಾರ್ಡ್ ನಲ್ಲಿ ನಮೂದಿಸಲಾಗಿರುವ ಕುಟುಂಬದ ಮುಖ್ಯಸ್ಥರ ಮೊಬೈಲಿಗೆ ನೋಟಿಫಿಕೇಷನ್ ಬರುತ್ತದೆ.
* ಅದರಲ್ಲಿ ಪಡಿತರ ಚೀಟಿಗೆ ಆಧಾರ ಲಿಂಕ್ ಮಾಡುವ ಪ್ರಕ್ರಿಯೆಯನ್ನು ನೀವು ಮುಗಿಸಿರುವುದಾಗಿ ತಿಳಿಸಲಾಗಿರುತ್ತದೆ. ಇಷ್ಟು ಮಾಡಿದರೆ ನಿಮ್ಮ ಪಡಿತರ ಚೀಟಿ ಕಾರ್ಡ್, ಆಧಾರ್ ಗೆ ಲಿಂಕ್ ಆಗುತ್ತದೆ.

ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಚಹಾ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಶೀಘ್ರವೇ ರಾಜ್ಯದಲ್ಲಿ ಟೀ ಪುಡಿ ಬ್ಯಾನ್
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಅಳವಡಿಕೆ ಕುರಿತು ಮತ್ತೊಂದು ಹೊಸ ಅಪ್ಡೇಟ್; ಮಿಸ್ ಮಾಡ್ದೆ ಈ ಸುದ್ದಿ ಓದಿ
- ಪಿಎಂ ಕಿಸಾನ್ ಯೋಜನೆ; 6,000 ಬದಲು 8,000ಕ್ಕೆ ಹೆಚ್ಚಿಸುವ ಸಾಧ್ಯತೆ; ಯೋಜನೆಗೆ ನೋಂದಣಿ ಹೇಗೆ?, ಇಲ್ಲಿದೆ ಮಾಹಿತಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಗ್ರಾಮ ಪಂಚಾಯತ್ ನಲ್ಲಿ ಜಾಬ್ ಆಫರ್; ಪಿಯುಸಿ ಪಾಸ್ ಆದವರು ಅರ್ಜಿ ಸಲ್ಲಿಸಿ; 15,000 ಸಂಬಳ
- ಯಜಮಾನಿಯರಿಗೆ ಸರ್ಕಾರದಿಂದ ಬಿಗ್ ಶಾಕ್; ಇನ್ಮುಂದೆ ಇಂತಹವರಿಗೆ ಬರಲ್ಲ ಗೃಹಲಕ್ಷ್ಮಿ ಯೋಜನೆಯ ಹಣ
- ಕರ್ನಾಟಕ ಬ್ಯಾಂಕ್ ನಲ್ಲಿ ಜಾಬ್ ಆಫರ್; ಈಗಲೇ ಅರ್ಜಿ ಸಲ್ಲಿಸಿ
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ






