Pourakarmika 2024:ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನ

(Pourakarmika 2024) ಚಿತ್ರದುರ್ಗ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನೇರ ನೇಮಕಾತಿಯಲ್ಲಿ ಖಾಲಿ ಉಳಿದಿರುವ ಪೌರಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್‌ ಕಾರ್ಡ್‌ ಅನ್ನು ಇಲ್ಲಿ ಪಡೆಯಿರಿ


ಹುದ್ದೆ ಹೆಸರು:
ಪೌರಕಾರ್ಮಿಕರು

ಹುದ್ದೆಗಳ ಸಂಖ್ಯೆ:
26


ಇದನ್ನೂ ಓದಿ; ರಾಜ್ಯದ ಎಲ್ಲಾ ರೈತರ ಗಮನಕ್ಕೆ; ಬೆಳೆ ವಿಮೆಗೆ ನೋಂದಾಯಿಸಲು ನಾಳೆ ಲಾಸ್ಟ್‌ ಡೇಟ್


ಈ ಹುದ್ದೆಗಳನ್ನು ಚಿತ್ರದುರ್ಗ ನಗರಸಭೆ, ಹಿರಿಯೂರು ನಗರಸಭೆ, ಹೊಸದುರ್ಗ ನಗರಸಭೆ, ಹೊಳಲ್ಕೆರೆ ಪುರಸಭೆ, ಪಟ್ಟಣ ಪಂಚಾಯಿತಿ ಮೊಳಕಾಲ್ಮೂರು, ಪಟ್ಟಣ ಪಂಚಾಯಿತಿ ನಾಯಕನಹಟ್ಟಿ ವ್ಯಾಪ್ತಿಯಲ್ಲಿ ಭರ್ತಿ ಮಾಡಲಾಗುತ್ತದೆ.

ವಿದ್ಯಾರ್ಹತೆ:
* ವಿದ್ಯಾರ್ಹತೆ ಅವಶ್ಯಕತೆ ಇರುವುದಿಲ್ಲ. ಆದರೆ ಕನ್ನಡ ಮಾತನಾಡಲು ಗೊತ್ತಿರಬೇಕು.
* ಮೀಸಲಾತಿ ಕೋರುವ ಅಭ್ಯರ್ಥಿಗಳು ಅರ್ಜಿಯ ಜೊತೆಗೆ, ಮೀಸಲಾತಿ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.


ಇದನ್ನೂ ಓದಿ; SC/ST ಸಮುದಾಯದವರಿಗೆ ಭರ್ಜರಿ ಸುದ್ದಿ; ಈ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ


ವಯೋಮಿತಿ:
ಕನಿಷ್ಠ 18 ವರ್ಷ ಗರಿಷ್ಠ 55 ವರ್ಷಗಳು ಮೀರಬಾರದು.

ವೇತನ:
27,000-47,675

ಅರ್ಜಿ ಸಲ್ಲಿಸುವ ವಿಳಾಸ:
ಚಿತ್ರದುರ್ಗ ಜಿಲ್ಲೆಯಲ್ಲಿನ ಯಾವುದೇ ನಗರ ಸ್ಥಳೀಯ ಸಂಸ್ಥೆಯ ಸಂಬಂಧಿತ ಪೌರಾಯುಕ್ತರು ಮತ್ತು ಮುಖ್ಯಾಧಿಕಾರಿ, ಇವರಿಂದ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು – ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಚಿತ್ರದುರ್ಗ ರವರಿಗೆ ಸಲ್ಲಿಸುವುದು.


ಇದನ್ನೂ ಓದಿ; ರಾಜ್ಯದ ಜನತೆಗೆ ಗುಡ್‌ ನ್ಯೂಸ್‌; ಇ-ಸ್ವತ್ತು ಕುರಿತು ಮಹತ್ವದ ಕ್ರಮ


ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ:
* ಇತ್ತೀಚಿನ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ.
* ಜನ್ಮ ದಿನಾಂಕದ ಧೃಢೀಕರಣಕ್ಕಾಗಿ ಶೈಕ್ಷಣಿಕ ದಾಖಲಾತಿಗಳು / ಆಧಾರ್ ಕಾರ್ಡ್‌ / ಮತದಾರರ ಗುರುತಿನ ಚೀಟಿ / ಪಡಿತರ ಚೀಟಿ ಯಾವುದೇ ಆಗಬಹುದು.
* ಚಿತ್ರದುರ್ಗ ಜಿಲ್ಲೆಯ ನಗರಸಭೆ / ಪುರಸಭೆ / ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಪ್ರಮಾಣ ಪತ್ರ.
* ಜಾತಿ ಪ್ರಮಾಣ ಪತ್ರ.
* ಈಗಾಗಲೇ ನೇರಪಾವತಿ ವಿಧಾನದಲ್ಲಿ ಕರ್ತವ್ಯ ನಿರ್ವಹಿಸುತ್ತ, ಸಂಬಳ ಪಡೆದ ಬಗ್ಗೆ ದಾಖಲೆಗಳು.
* ಇತರೆ ಅನ್ವಯವಾಗುವ ದಾಖಲೆಗಳು.

ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ:
06-11-2024


ಇದನ್ನೂ ಓದಿ; ರೈತರಿಗೆ ಮುಖ್ಯ ಮಾಹಿತಿ; ಈ ಸುದ್ದಿ ಮಿಸ್‌ ಮಾಡ್ದೆ ಓದಿ


ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಕೊನೆಯ ದಿನಾಂಕ:
05-12-2024 ರ ಕಚೇರಿ ವೇಳೆಯಲ್ಲಿ

Pourakarmika 2024:ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನ
Pourakarmika 2024:ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನ

ಇತ್ತೀಚಿನ ಜನಪ್ರಿಯ ಸುದ್ದಿಗಳು