LIC Home Loan: ಡಿಸೆಂಬರ್ 2025 ರಿಂದ ತನ್ನ ಗೃಹ ಸಾಲದ ಬಡ್ಡಿ ದರಗಳನ್ನು ಶೇ. 7.15ಕ್ಕೆ ಇಳಿಕೆ ಮಾಡಿದ್ದು, ಮನೆ ಖರೀದಿದಾರರಿಗೆ ಸಿಹಿ ಸುದ್ದಿ ನೀಡಿದೆ. ಆರ್ಬಿಐ ರೆಪೊ ದರ ಕಡಿತದ ನಂತರ, ಈ ದರಗಳು ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೂ ಅನ್ವಯವಾಗಲಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುತ್ತಿದೆ. ಈ ಕ್ರಮವು ಮಧ್ಯಮ ವರ್ಗದ ಮನೆ ಕನಸನ್ನು ನನಸಾಗಿಸಲು ಸಹಾಯ ಮಾಡಲಿದೆ.
ಮನೆ ಖರೀದಿದಾರರಿಗೆ ಕಡಿಮೆ ಇಎಂಐ (EMI) ಮತ್ತು ಕೈಗೆಟುಕುವ ದರದಲ್ಲಿ ಸಾಲ ಒದಗಿಸುವುದು.ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ತಿದ್ದುಪಡಿಗಳು ಹೊಸದಾಗಿ ಸಾಲ ಪಡೆಯುವವರಿಗೆ ಮತ್ತು ಅಸ್ತಿತ್ವದಲ್ಲಿರುವ ಸಾಲಗಾರರಿಗೆ ಅನ್ವಯವಾಗುತ್ತವೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಈ ವರ್ಷ ದಾಖಲೆ ಮಟ್ಟದಲ್ಲಿ 125 ಬೇಸಿಸ್ ಪಾಯಿಂಟ್ಸ್ ರೆಪೋ ದರ ಇಳಿಕೆ ಮಾಡಿದೆ. ಇದರಿಂದಾಗಿ ಹಲವು ಬ್ಯಾಂಕುಗಳು ಮತ್ತು ಇತರ ಎನ್ಬಿಎಫ್ಸಿ (NBFC) ಗಳು ಕೂಡ ಸಾಲದ ಬಡ್ಡಿದರಗಳನ್ನು ಕಡಿಮೆ ಮಾಡುತ್ತಿವೆ. ಇತ್ತೀಚೆಗೆ ಎಲ್ಐಸಿ ಹೌಸಿಂಗ್ ಫೈನಾನ್ಸ್ ಅತಿ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲಗಳನ್ನು ನೀಡುತ್ತಿದೆ.ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುತ್ತದೆ.
825 ಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್: ರೂ.5 ಕೋಟಿವರೆಗಿನ ಸಾಲಕ್ಕೆ ಬಡ್ಡಿದರ ಶೇ.7.15 ರಷ್ಟಿದೆ. (ರೂ. 5-15 ಕೋಟಿ ನಡುವೆ ಇದ್ದರೆ ಬಡ್ಡಿದರ ಶೇ. 7.45).
ಸಿಬಿಲ್ 800-824: ರೂ.5 ಕೋಟಿವರೆಗಿನ ಸಾಲಕ್ಕೆ ಬಡ್ಡಿದರ ಶೇ. 7.25 ರಷ್ಟಿದೆ.
ಸಿಬಿಲ್ 775-799: ರೂ. 50 ಲಕ್ಷದವರೆಗಿನ ಸಾಲಕ್ಕೆ ಶೇ. 7.35, ರೂ. 50 ಲಕ್ಷದಿಂದ 2 ಕೋಟಿವರೆಗೆ ಶೇ. 7.45 ಮತ್ತು ರೂ. 2 ಕೋಟಿಗಿಂತ ಹೆಚ್ಚಿನ ಸಾಲಕ್ಕೆ ಶೇ. 7.65 ರಷ್ಟು ಬಡ್ಡಿದರ ಅನ್ವಯವಾಗುತ್ತದೆ.
ಬಡ್ಡಿದರ ತಿಂಗಳ ಇಎಂಐ
ಶೇ. 7.15 : ರೂ. 18,145
ಶೇ. 7.25 : ರೂ. 18,257
ಶೇ. 7.35 : ರೂ. 18,370
ಶೇ. 7.45 : ರೂ. 18,483
ಶೇ. 7.65 : ರೂ. 18,711ಬಡ್ಡಿದರ ಹೆಚ್ಚುತ್ತಾ ಹೊದಂತೆ ತಿಂಗಳ ಇಎಂಐ ಹೆಚ್ಚುತ್ತದೆ.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (LIC Home Loan:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





