Income Tax Department 2026: ಗುಜರಾತ್ ಆದಾಯ ಮತ್ತು ತೆರಿಗೆ ಇಲಾಖೆ ಕ್ರೀಡಾ ನೇಮಕಾತಿಯಡಿ ತೆರಿಗೆ ಆದಾಯಕ ಮತ್ತು ಬಹು ಕಾಯ೯ಕಾರಿ ಸಿಬ್ಬಂದಿ (MTS) ಹುದ್ದೆಗಳ ನೇಮಕಾತಿಗಾಗಿ ಅಹ೯ ಕ್ರೀಡಾ ಅಭ್ಯಥಿ೯ಗಳಿಂದ ಅರ್ಜಿ ಆಹ್ವಾನಿಸಿದೆ.
ಇದು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾ ಪಟುಗಳಿಗೆ ಸರ್ಕಾರಿ ವಲಯದಲ್ಲಿ ವೃತ್ತಿ ಜೀವನ ನಿರ್ಮಿಸಿಕೊಳ್ಳಲು ಸುವರ್ಣ ಅವಕಾಶವಾಗಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ಹಂಚಿಕೆ:
ತೆರಿಗೆ ಸಹಾಯಕ: 18
ಬಹು ಕಾರ್ಯಕಾರಿ ಸಿಬ್ಬಂದಿ: 28
ಒಟ್ಟು 46 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಅಧಾರದಲ್ಲಿ ಭತಿ೯ ಮಾಡಿಕೊಳ್ಳಲಿದೆ.
ಸರ್ಕಾರಿ ಉದ್ಯೋಗ ಗಳಿಗಾಗಿ ತಯಾರಿ ನಡೆಸುತ್ತಿರುವ ಯುವಜನರಿಗೆ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿಗೆ ಗುಜರಾತ್ ಆದಾಯ ತೆರಿಗೆ ಇಲಾಖೆಯಿಂದ ಉತ್ತಮ ಅವಕಾಶ ದೊರೆತಿದೆ. ಈ ನೇಮಕಾತಿಯಲ್ಲಿ ತೆರಿಗೆ ಸಹಾಯಕ ಮತ್ತು ಬಹು ಕಾಯ೯ಕಾರಿ ಸಿಬ್ಬಂದಿ ಎರಡು ಪ್ರಮುಖ ಹುದ್ದೆಗಳು ಸೇರಿವೆ. ಎರಡು ಹುದ್ದೆಗಳು ಸಂಪೂರ್ಣವಾಗಿ ಕ್ರೀಡಾ ಕೊಟಾದಡಿಯಲ್ಲಿ ಭರ್ತಿಯಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿ ಪ್ರಾಮಾಣಿಕ ಸಾಧನೆ ಹೊಂದಿರುವ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಶೈಕ್ಷಣಿಕ ಅರ್ಹತೆ
ತೆರಿಗೆ ಸಹಾಯಕ ಹುದ್ದೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಅರ್ಹತೆಯೊಂದಿಗೆ ಗಂಟೆಗೆ 8000 ಕೀ. ಡಿಪ್ರೆಶನ್ ಗಳ ಡೇಟಾ ಎಂಟ್ರಿ ವೇಗವನ್ನು ಹೊಂದಿರಬೇಕು.
ಬಹು ಕಾಯ೯ಕಾರಿ ಸಿಬ್ಬಂದಿ ಹುದ್ದೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಲ್ಲಿ ತೇರ್ಗಡೆಯಾಗಿರಬೇಕು.
* ಜೊತೆಗೆ ಇಲಾಖೆ ಅಧಿಸೂಚನೆ ಪ್ರಕಾರ ಆಟ/ ಕ್ರೀಡೆಯಲ್ಲಿ ಸಾಧನೆಗೈದಿರಬೇಕು ದೇಶವನ್ನು ಪ್ರತಿನಿಧಿಸಿರಬೇಕು.
ವಯೋಮಿತಿ:
ತೆರಿಗೆ ಸಹಾಯಕ ಹುದ್ದೆ:
ಕನಿಷ್ಠ – 18
ಗರಿಷ್ಠ- 27
ಬಹು ಕಾಯ೯ಕಾರಿ ಸಿಬ್ಬಂದಿ ಹುದ್ದೆ:
ಕನಿಷ್ಠ -18
ಗರಿಷ್ಠ -25
ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ 05 ವಷ೯ಗಳು , ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಿಗೆ 10 ವಷ೯ಗಳ ಸಡಿಲಿಕೆ ಇರುತ್ತದೆ.
ವೇತನ:
ತೆರಿಗೆ ಸಹಾಯಕ ಹುದ್ದೆ: 25,500 ರಿಂದ 81,100
ಬಹು ಕಾಯ೯ಕಾರಿ ಸಿಬ್ಬಂದಿ ಹುದ್ದೆ: 18,000 ರಿಂದ 56,900
ಆಯ್ಕೆ ಪ್ರಕ್ರಿಯೆ:
ಮಾನದಂಡಗಳು/ ಅರ್ಹತೆ/ ಸೂಚನೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳ ಶಾಟ್೯ ಲಿಸ್ಟ್
* ಲಿಖಿತ ಪರೀಕ್ಷೆ
* ದಾಖಲಾತಿ ಪರಿಶೀಲನೆ
ಅರ್ಜಿ ಶುಲ್ಕ:
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ -200

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (Income Tax Department 2026:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





