(ICG 2025:) ಭಾರತ ಕರಾವಳಿ ಭದ್ರತಾ ಪಡೆಯು ವಿವಿಧ ಗ್ರೂಪ್ ಸಿ ಪೋಸ್ಟ್ ಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
(ICG 2025:) ನೇಮಕಾತಿ ಸಂಸ್ಥೆ:
ಭಾರತೀಯ ಕರಾವಳಿ ಭದ್ರತಾ ಪಡೆ
ಹುದ್ದೆ ಹೆಸರು:
ಎನ್‌ರೋಲ್ಡ್ ಫಾಲೋವರ್ಸ್ (ಸ್ವೀಪರ್ / ಸಫಾಯಿವಾಲಾ ) ಗ್ರೂಪ್ ಸಿ, ನಾನ್ ಗೆಜೆಟೆಡ್
ಹುದ್ದೆಗಳ ಸಂಖ್ಯೆ:
04
ವೇತನ ಶ್ರೇಣಿ:(ICG 2025:)
21,700- 68,100.
ಅರ್ಜಿ ವಿಧಾನ:
ಆಫ್ ಲೈನ್ ಮೂಲಕ
ವಿದ್ಯಾರ್ಹತೆ:
ಎಸ್‌ಎಸ್‌ಎಲ್‌ಸಿ ಜೊತೆಗೆ ಐಟಿಐ ಶಿಕ್ಷಣ ಪಡೆದಿರಬೇಕು.
ವಯೋಮಿತಿ:
ದಿನಾಂಕ 10-02-2025 ಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು. ಆದರೆ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇರಲಿದೆ.
ಆಯ್ಕೆ ವಿಧಾನ?:
ಅರ್ಜಿ ಸಲ್ಲಿಸಿದವರಿಗೆ ಲಿಖಿತ ಪರೀಕ್ಷೆ, ದೈಹಿಕ ತಾಳ್ವಿಕೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಸ್ಕಿಲ್ ಟೆಸ್ಟ್, ವೈದ್ಯಕೀಯ ಪರೀಕ್ಷೆಗಳನ್ನು ಸಹ ನಡೆಸಲಾಗುತ್ತದೆ.
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 03, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 01 ಹುದ್ದೆ ಮೀಸಲಿವೆ.
ಆಯ್ಕೆಯಾದ ಅಭ್ಯರ್ಥಿಗಳನ್ನು ಭಾರತೀಯ ಯಾವುದೇ ಕರಾವಳಿ ಭದ್ರತಾ ಪಡೆಯಲ್ಲಿ ನೇಮಕ ಮಾಡಲಾಗುತ್ತದೆ.
ಇದನ್ನೂ ಓದಿ: ಟೆಸ್ಲಾ ಪ್ರಿಯರಿಗೆ ಬಂಪರ್ ಸುದ್ದಿ; ಭಾರತಕ್ಕೆ ಬರುತ್ತಿದೆ ಎರಡು ಹೊಸ ಕಾರುಗಳು, ಮಾರಾಟ ಯಾವಾಗ?
ಅರ್ಜಿ ಸಲ್ಲಿಕೆ ಹೇಗೆ?:
ಅರ್ಜಿ ನಮೂನೆಯನ್ನು ಅಧಿಸೂಚನೆಯೊಂದಿಗೆ ನೀಡಿದ್ದು, ಅದನ್ನು ಡೌನ್‌ಲೋಡ್ ಮಾಡಿ ಭರ್ತಿ ಮಾಡಿ, ಅಥವಾ ಟೈಪಿಸಿಕೊಂಡು, ನಿಗದಿತ ದಿನಾಂಕದೊಳಗೆ ತಲುಪುವಂತೆ ಆರ್ಡಿನರಿ ಪೋಸ್ಟ್ ಮೂಲಕ ಸಲ್ಲಿಸುವುದು. ಅರ್ಜಿಯೊಂದಿಗೆ ಪೂರಕ ದಾಖಲೆಗಳನ್ನು ಲಗತ್ತಿಸುವುದು.
ಅರ್ಜಿ ಸಲ್ಲಿಸಬೇಕಾದ ಸ್ಥಳ:
The President, (EF Recruitment Board), Coast Guard District Headquarters No.3, Post Box No.19, Panambur, New Mangalore – 575010.
ಅರ್ಜಿ ನಮೂನೆಗಾಗಿ ಭಾರತೀಯ ಕರಾವಳಿ ಭದ್ರತಾ ಪಡೆಯ ಅಧಿಕೃತ ವೆಬ್‌ಸೈಟ್ https://joinindiancoastguard.cdac.in/ ಗೆ ಭೇಟಿ ನೀಡಿರಿ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
10-04-2025






