Free Driving Training26: ಉಚಿತ ಭಾರೀ ವಾಹನ ಚಾಲನಾ ತರಬೇತಿ

Free Driving Training26:ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಸಮಾಜ ಕಲ್ಯಾಣ ಇಲಾಖೆಯು ಅರ್ಹ ನಿರುದ್ಯೋಗಿ ಯುವಕರಿಗೆ ಉಚಿತ ಭಾರೀ ವಾಹನ ಚಾಲನಾ ತರಬೇತಿ ಮತ್ತು ಪರವಾನಗಿ ಪ್ರಮಾಣ ಪತ್ರವನ್ನು ವಿತರಣೆ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ದೇಶದಲ್ಲಿನ ತುಂಬಾ ಯುವಜನರ ಕನಸು ಒಂದೇ ದುಡಿದು ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎನ್ನುವುದು. ಗೌರವ ಮತ್ತು ಸ್ವಾಭಿಮಾನದಿಂದ ಬದುಕಬೇಕು ಎನ್ನುವುದು ಮಹತ್ತರ ಕನಸು ಹೊಂದಿದ್ದಾರೆ. ಅದರಲ್ಲಿ ವಿಶೇಷವಾಗಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿನ ಕನಸಿಗೆ ಕರ್ನಾಟಕ ಸರ್ಕಾರ ಇವರ ಕನಸಿಗೆ ಜೊತೆಯಾಗಿ ಭರ್ಜಿರಿ ಸಿಹಿ ಸುದ್ದಿ ನೀಡಿದೆ.


ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಉಚಿತವಾಗಿ ಭಾರೀ ವಾಹನ ಚಾಲನಾ ತರಬೇತಿ ಮತ್ತು ಪರವಾನಗಿ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.

* ದೊಡ್ಡ ಬಸ್‌ಗಳು ಮತ್ತು ಭಾರೀ ವಾಹನಗಳನ್ನು ಸುರಕ್ಷಿತವಾಗಿ ಚಾಲನೆ ಮಾಡುವ ಬಗ್ಗೆ ಪ್ರಾಯೋಗಿಕವಾಗಿ ತರಬೇತಿಯನ್ನು ನೀಡಲಾಗುತ್ತದೆ.
* ವೃತ್ತಿಪರ ಚಾಲಕನಿಗೆ ಇರಬೇಕಾದ ಶಿಸ್ತು ಮತ್ತು ಪ್ರಯಾಣಿಕರ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದು.
* ತರಬೇತಿ ಪಡೆದ ಅಭ್ಯರ್ಥಿಗಳು ಕೆಎಸ್‌ಆರ್‌ಟಿಸಿ ಸೇರಿದಂತೆ ಖಾಸಗಿ ಸಾರಿಗೆ ಸಂಸ್ಥೆಗಳು, ಲಾಜಿಸ್ಟಿಕ್ಸ್ ಕಂಪನಿಗಳಲ್ಲಿ ಚಾಲಕರಾಗಿ ಕೆಲಸ ಪಡೆಯಲು ಪ್ರಮಾಣ ಪತ್ರ ಪಡೆಯುವ ಅರ್ಹತೆ ಪಡೆಯುತ್ತಾರೆ.
* ತರಬೇತಿ ವೇಳೆ ಊಟ ಮತ್ತು ವಸತಿ ವ್ಯವಸ್ಥೆ.


ಇದನ್ನೂ ಓದಿ: ಡ್ರೋನ್ ಪೈಲಟ್ ಆಗಲು ಇಲ್ಲಿದೆ ಸುವರ್ಣಾವಕಾಶ: ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರದ ವತಿಯಿಂದ ಉಚಿತ ಡ್ರೋನ್ ಪೈಲಟ್ ತರಬೇತಿ


ಅರ್ಹತೆಗಳು:
* ಅಭ್ಯರ್ಥಿಯು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
* ಗರಿಷ್ಠ ವಯೋಮಿತಿ 45 ಇರಬೇಕು.
* ಲಘು ಮೋಟಾರು ವಾಹನ ಪರವಾನಿ ಮತ್ತು ಕನಿಷ್ಠ ಅರ್ಹತೆ ಹೊಂದಿರುವುದು ಅವಶ್ಯ.

ಅಗತ್ಯ ದಾಖಲಾತಿಗಳು:
* ಆಧಾರ್‌ ಕಾರ್ಡ್‌( Aadhar card)
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ(Caste and income certificate)
* ವಿದ್ಯಾರ್ಹತೆ ಅಂಕಪಟ್ಟಿ(Qualification Marksheet)
* ಇತ್ತೀಚಿನ ಪೋಟೋ(Recent photo)

Free Driving Training26: ಉಚಿತ ಭಾರೀ ವಾಹನ ಚಾಲನಾ ತರಬೇತಿ
Free Driving Training26: ಉಚಿತ ಭಾರೀ ವಾಹನ ಚಾಲನಾ ತರಬೇತಿ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (Free Driving Training26:) 

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ