Crop wise Premium Calculator:ಬೆಳೆವಿಮೆ ಪಾವತಿಸಲು ಲಾಸ್ಟ್ ಡೇಟ್

(Crop wise Premium Calculator) 2024-25ನೇ ಸಾಲಿಗೆ ಮುಂಗಾರು ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ಈ ಹಿಂದೆ ಜುಲೈ 30 ಕೊನೆಯ ದಿನಾಂಕವಾಗಿತ್ತು. ಆದರೆ, ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆದ ಕಾರಣ ಹಲವು ಅವಾಂತರ ಸೃಷ್ಟಿ ಮಾಡಿತ್ತು. ಈ ಕಾರಣದಿಂದ ಹಲವು ರೈತರು ಬೆಳೆ ವಿಮೆ ಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬೆಳೆವಿಮೆ ಪ್ರಿಮಿಯಂ ಪಾವತಿಸಲು ದಿನಾಂಕ ವಿಸ್ತರಿಸಲು ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ 16 ರ ವರೆಗೆ ದಿನಾಂಕ ವಿಸ್ತರಿಸಿದೆ. ಯಾವ ಬೆಳೆಗಳಿಗೆ ಎಷ್ಟು ಪ್ರಿಮಿಯಂ ಪಾವತಿ ಮಾಡಬೇಕು ಹಾಗೂ ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


ಇದನ್ನೂ ಓದಿ: ವಾಹನ ಸವಾರರೇ ನೀವಿನ್ನೂ HSRP ನಂಬರ್ ಪ್ಲೇಟ್ ಹಾಕಿಸಿಲ್ವಾ!; ನಂಬರ್ ಪ್ಲೇಟ್ ಹಾಕಿದ್ರು, ಹಾಕಿಲ್ಲಾ ಅಂದ್ರೂ ಈ ಸುದ್ದಿ ಓದಿ; ಬಿಗ್ ಅಪ್ಡೇಟ್ ಇಲ್ಲಿದೆ


ಯಾವ ಬೆಳೆಗಳಿಗೆ ಎಷ್ಟು ಪ್ರಿಮಿಯಂ ಪಾವತಿ ಮಾಡಬೇಕು:
ರೈತರು ಯಾವ ಬೆಳೆಗಳಿಗೆ ಎಷ್ಟು ವಿಮೆ ಪಾವತಿ ಮಾಡಬೇಕು ಎಂಬುದು ಈ ಕೆಳಗಿನ ಹಂತವನ್ನು ಅನುಸರಿಸಿ ಚೆಕ್ ಮಾಡಬಹುದಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

  • ಈ ವೆಬ್ ಸೈಟ್ ಗೆ ಭೇಟಿ ನೀಡಿ (https://samrakshane.karnataka.gov.in/)
  • ಇದರಲ್ಲಿ ವರ್ಷ(year), ಋತು (Kharif/ಮುಂಗಾರು) ಆಯ್ಕೆ ಮಾಡಿ ಮುಂದೆ (Go) ಎಂಬ ಆಯ್ಕೆ ಕ್ಲಿಕ್ ಮಾಡಿ
  • ಇದರ ವೆಬ್ ಪುಟ ಓಪನ್ ಆಗತ್ತದೆ ಇದರಲ್ಲಿ Farmer Corner ಅಡಿಯಲ್ಲಿ Premium Calculator ಎಂಬ ಆಯ್ಕೆ ಕ್ಲಿಕ್ ಮಾಡಿ
  • ನಂತರ ಇದರಲ್ಲಿ ಕೇಳುವ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ/ಹಳ್ಳಿ ಮತ್ತು ಬೆಳೆಯನ್ನು ಆಯ್ಕೆ ಮಾಡಿ
  • ಬೆಳೆ ವಿಸ್ತೀರ್ಣ ಕಾಲಂ ನಲ್ಲಿ ಎಷ್ಟು ಎಕರೆ ಎಂದು ಹಾಕಿ
  • ಪಕ್ಕದಲ್ಲಿ ಗುಂಟೆ/ಸೆಂಟ್ ಅನ್ನು ನಮೂದಿಸಿ
  • ಪ್ರಿಮಿಯಂ ವಿವರ ಬಟನ್ ಮೇಲೆ ಕ್ಲಿಕ್ ಮಾಡಿ
  • ನಂತರ ರೈತರ ಪಾಲು ಕಾಲಂ ನಲ್ಲಿ ಎಷ್ಟು ಬೆಳೆ ವಿಮೆ ಕಟ್ಟಬೇಕು ಎನ್ನುವ ವಿವರ ಗೋಚರಿಸುತ್ತದೆ.

ಇದನ್ನೂ ಓದಿ: ಈರುಳ್ಳಿ ಮೇಲೆ ಕಪ್ಪು ಬಣ್ಣ ಇದ್ದರೆ ತಿನ್ನಬೇಕಾ ಬೇಡ್ವಾ..?; ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ


ಎಲ್ಲಿ ಬೆಳೆ ವಿಮೆ ಮಾಡಿಸಬಹುದು?
ಬ್ಯಾಂಕ್‌ ಗಳು, ಸಾಮಾಜಿಕ ಸೇವಾ ಕೇಂದ್ರಗಳು (ಸಿಎಸ್‌ಸಿ ಸೆಂಟರ್‌), ಕರ್ನಾಟಕ ಒನ್‌, ಗ್ರಾಮ ಒನ್‌ ಕೇಂದ್ರಗಳಲ್ಲಿ ನಿಗದಿತ ಸಮಯದೊಳಗೆ ವಿಮಾ ಕಂತು ಪಾವತಿಸಿ.


ಇದನ್ನೂ ಓದಿ: ಜಮೀನಿನ ದಾರಿಗೆ ಸರ್ಕಾರದಿಂದ ಬಂತು ಹೊಸ ರೂಲ್ಸ್!; ಏನದು? ಇಲ್ಲಿದೆ ನೋಡಿ


ಬೆಳೆ ವಿಮೆಗೆ ನೋಂದಾಯಿಸಲು FID ಸಂಖ್ಯೆ ಹೊಂದಿರುವುದು ಕಡ್ಡಾಯ. ಒಂದು ವೇಳೆ FID ಸಂಖ್ಯೆ ಹೊಂದಿರದಿದ್ದಲ್ಲಿ ಹತ್ತಿರದ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳು ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಆಧಾರ್‌ ಸಂಖ್ಯೆ ಮತ್ತು ಆರ್‌ಟಿಸಿ ವಿವರಗಳನ್ನು ಸಲ್ಲಿಸಿ FID ಸಂಖ್ಯೆ ಪಡೆಯಬಹುದು. ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.


ಇದನ್ನೂ ಓದಿ: ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಹೊಸ ಆದೇಶ; ಈ ಕೆಲಸ ಮಾಡಲು ಡೆಡ್ ಲೈನ್ ಫಿಕ್ಸ್ ಮಾಡಿದ ಸರ್ಕಾರ; ಏನದು? ಇಲ್ಲಿದೆ ನೋಡಿ


ಇನ್ನು ಎಲ್ಲ ಬೆಳೆಗಳಿಗೆ ವಿಮೆ ಪಾವತಿಸಲು ಆಗಸ್ಟ್ 16 ಅಂದರೆ ಇನ್ನು ಮೂರು ದಿನ ಮಾತ್ರ ಬಾಕಿ ಇದ್ದು, ವಿಮೆ ಪಾವತಿ ಮಾಡದೇ ಇರುವವರು ತಕ್ಷಣ ಪಾವತಿ ಮಾಡಿಕೊಳ್ಳಿ.

Crop wise Premium Calculator:ಬೆಳೆವಿಮೆ ಪಾವತಿಸಲು ಲಾಸ್ಟ್ ಡೇಟ್
Crop wise Premium Calculator:ಬೆಳೆವಿಮೆ ಪಾವತಿಸಲು ಲಾಸ್ಟ್ ಡೇಟ್

ಇದನ್ನೂ ಓದಿ: ಇಂತಹ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ 4,000 ಹಣ ಜಮಾ!; ನಿಮಗೂ ಜಮಾ ಆಗಬೇಕಿದ್ರೆ ಈ ಕೆಲಸ ಮಾಡುವುದು ಕಡ್ಡಾಯ


ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    11. ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
    12. 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
    13. PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
    14.  ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?