Bus Pass: ವಿದ್ಯಾರ್ಥಿಗಳಿಗೆ ಉಚಿತ / ರಿಯಾಯಿತಿ ಬಸ್ ಪಾಸ್

(Bus Pass:) ರಾಜ್ಯ ಸಾರಿಗೆ ಇಲಾಖೆಯು 2025-26ನೇ ಸಾಲಿಗೆ ವಿದ್ಯಾರ್ಥಿ ಉಚಿತ / ರಿಯಾಯಿತಿ ಬಸ್ ಪಾಸ್ ವಿತರಿಸುವ ಬಗ್ಗೆ ಮಹತ್ವದ ಆದೇಶ ಹೊರಡಿಸಿದೆ. ಈ ಕುರಿತು ಮಾಹಿತಿ ಇಲ್ಲಿದೆ ನೋಡಿ.


ಇದನ್ನೂ ಓದಿ: ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆಗಳು ಬಂದ್; ಯಾಕೆ ಗೊತ್ತಾ?


(Bus Pass:) ಆದೇಶದಲ್ಲಿ ಏನಿದೆ?:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ / ರಿಯಾಯಿತಿ ಬಸ್ ಪಾಸ್ ವಿತರಣೆ ಮಾಡುತ್ತಿದೆ ಹಾಗೂ 2017-18 ನೇ ಸಾಲಿನಿಂದ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡುತ್ತಿದೆ.

2023-24ನೇ ಸಾಲಿನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿದ್ಯಾರ್ಥಿ ಬಸ್ ಪಾಸ್ ವಿತರಣೆಯನ್ನು ಸಂಪೂರ್ಣವಾಗಿ ಗಣಕೀಕೃತಗೊಳಿಸಲು ಸರ್ಕಾರದ ನಿರ್ದೇಶನವಿರುತ್ತದೆ. ಈ ಸಂಬಂಧ ವಿದ್ಯಾರ್ಥಿ ಪಾಸುಗಳನ್ನು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ. ಕೆ-1 / ಜಿ-1 ಕೇಂದ್ರಗಳ ಮುಖಾಂತರ ಪಾಸುಗಳನ್ನು ವಿತರಿಸುವ ವ್ಯವಸ್ಥೆಯನ್ನು ಕರಾರಸಾ ನಿಗಮದಿಂದ ಕಲ್ಪಿಸಲಾಗಿರುತ್ತದೆ.


ಇದನ್ನೂ ಓದಿ: ರಾಜ್ಯದ ಬಿಸಿಯೂಟ ತಯಾರಕರಿಗೆ ಗುಡ್ ನ್ಯೂಸ್; ಗೌರವಧನ ಹೆಚ್ಚಳ ಮಾಡಿ ಸರ್ಕಾರ ಆದೇಶ!


(Bus Pass:) ಕಳೆದ ಸಾಲಿನಂತೆ ಪ್ರಸಕ್ತ ಸಾಲಿನಲ್ಲಿಯೂ ಸಹ ವಿದ್ಯಾರ್ಥಿ ಪಾಸುಗಳನ್ನು ಸಂಪೂರ್ಣ ಗಣಕೀಕೃತವಾಗಿ ಪಾಸುಗಳನ್ನು ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಡಿಸಿಎಸ್ ಇಲಾಖೆಯು ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು. ವಿದ್ಯಾರ್ಥಿಗಳ ವಿವರಗಳನ್ನು ದಾಖಲಿಸಲು. SATS / UUCMS /PUE ಡಾಟಾಬೇಸ್ ಜೊತೆಗೆ ಆಧಾರ್ / ಕುಟುಂಬ ಡಾಟಾಬೇಸ್‌ನಿಂದ ವಿದ್ಯಾರ್ಥಿಗಳ ವಿವರಗಳು ದಾಖಲಾಗಲಿವೆ. ಇದರ ಜೊತೆಗೆ ಕೆ-1 (ಕರ್ನಾಟಕ ಒನ್), ಜಿ-1 (ಗ್ರಾಮ ಒನ್) ಕೇಂದ್ರಗಳು ಹಾಗೂ ಇಡಿಸಿಎಸ್ ಸಿಬ್ಬಂದಿಗಳ ನಿಯೋಜನೆಯೊಂದಿಗೆ ನಿಗಮದ ಬಸ್ ನಿಲ್ದಾಣಗಳಲ್ಲಿನ ಪಾಸ್ ಕೌಂಟರ್‌ಗಳಲ್ಲಿ ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ವಿತರಿಸಲಾಗುವುದು. ಇಡಿಸಿಎಸ್ ಇಲಾಖೆಯ ನಿಯೋಜಿತ ಸಿಬ್ಬಂದಿಗಳು ನಿಗಮದ ಪಾಸ್ ಕೌಂಟ‌ರ್ಗಳಲ್ಲಿ ಹಾಗೂ ಅಗತ್ಯವಿರುವೆಡೆ ಶಾಲಾ / ಕಾಲೇಜುಗಳಲ್ಲಿ ಕೌಂಟರ್ ತೆರೆದು ಬಸ್ ಪಾಸ್ ವಿತರಣೆ ಮಾಡಲಿದ್ದಾರೆ.


ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ €18,750 ಸ್ಕಾಲರ್‌ ಶಿಪ್; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?


* ವಿದ್ಯಾರ್ಥಿ ಬಸ್ ಪಾಸ್ ವೈಯಕ್ತಿಕ ಮಾಹಿತಿಯುಳ್ಳ ಪಿವಿಸಿ ಕಾರ್ಡ್ ಆಗಿದ್ದು, ಸದರಿ ಕಾರ್ಡಿನ ಮೇಲೆ ವಿದ್ಯಾರ್ಥಿಯ ಭಾವಚಿತ್ರ, ಹೆಸರು, ಪ್ರಯಾಣದ ಮಾರ್ಗ, ಪಾಸಿನ ಮಾನ್ಯತಾ ಅವಧಿ ಮುದ್ರಿತವಾಗುತ್ತದೆ.
* ಪ್ರತಿಯೊಂದು ಕಾರ್ಡಿಗೂ ಅನನ್ಯ (unique) ಸಂಖ್ಯೆಯಿದ್ದು ಕಾರ್ಡಿನ ಮೇಲ್ಬಾಗದಲ್ಲಿ ಮುದ್ರಿತವಾಗುತ್ತದೆ. ಅಲ್ಲದೇ ಕ್ಯೂಆರ್ ಕೋಡ್‌ನಲ್ಲಿ ವಿದ್ಯಾರ್ಥಿ ಮಾಹಿತಿ, ಪ್ರಯಾಣದ ಮಾರ್ಗ, ಪಾಸ್‌ನ ಮಾನ್ಯತೆ, ಅವಧಿ ಒಳಗೊಂಡಿರುತ್ತದೆ.
* ಸರ್ಕಾರದ ನೂತನ ಯೋಜನೆಯಾದ “ಶಕ್ತಿ ಯೋಜನೆ”ಯಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರು (ವಿದ್ಯಾರ್ಥಿನಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ) ರಾಜ್ಯದೊಳಗೆ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ಯೋಜನೆಯಡಿ ರಾಜ್ಯದೊಳಗೆ ಪ್ರಯಾಣಿಸುವ ವಿದ್ಯಾರ್ಥಿನಿಯರು ವಿದ್ಯಾರ್ಥಿ ಬಸ್ ಪಾಸ್ ಪಡೆಯುವ ಅಗತ್ಯವಿರುವುದಿಲ್ಲ. ಆದರೆ, ವಿದ್ಯಾರ್ಥಿನಿಯರು ಬಸ್ ಪಾಸ್ ಪಡೆಯಲು ಇಚ್ಚಿಸಿದಲ್ಲಿ ಪಾಸನ್ನು ವಿತರಿಸಬಹುದಾಗಿರುತ್ತದೆ.

Bus Pass: ವಿದ್ಯಾರ್ಥಿಗಳಿಗೆ ಉಚಿತ / ರಿಯಾಯಿತಿ ಬಸ್ ಪಾಸ್
Bus Pass: ವಿದ್ಯಾರ್ಥಿಗಳಿಗೆ ಉಚಿತ / ರಿಯಾಯಿತಿ ಬಸ್ ಪಾಸ್

ಇತ್ತೀಚಿನ ಜನಪ್ರಿಯ ಸುದ್ದಿಗಳು (Bus Pass:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?