Share Market Kannada: ಇನ್ನು ಮುಂದೆ ಷೇರು ಮಾರುಕಟ್ಟೆಯಲ್ಲಿ ಜಿಗಿತ | ಖರೀದಿಗೆ ಯಾವ ಷೇರು ಉತ್ತಮ

  • ಷೇರು ಮಾರುಕಟ್ಟೆಯಲ್ಲಿ ಕ್ಯಾಂಡಲ್ ಸ್ಟಿಕ್ ಪ್ರೈಸ್ ಆಕ್ಷನ್ ಅನಲೈಸ್ ಮಾಡುವುದು ಹೇಗೆ ?
  • ವಿವಿಧ ರೀತಿಯ ಇಂಡಿಕೇಟರ್ ಬಳಸುವುದರ ಪ್ರಯೋಜನವೇನು ?
  • ಹಾರಿಜಾಂಟಲ್/ಆಂಗ್ಯುಲರ್ ಸಪೋರ್ಟ್ & ರೆಸಿಸ್ಟನ್ಸ್ ಗುರುತಿಸಿ ಅದರ ಆಧಾರದ ಮೇಲೆ ಹೇಗೆ ಟ್ರೇಡ್ ಮಾಡಬಹುದು ?
  • ವಿವಿಧ ರೀತಿಯ ಚಾರ್ಟ್ ಪ್ಯಾಟರ್ನ್ ಗಳ ಪರಿಣಾಮಗಳು ಏನಿರುತ್ತವೆ ?
  • ಸರಿಯಾದ ಸಮಯದಲ್ಲಿ ಉತ್ತಮವಾದ ಷೇರುಗಳನ್ನು ಗುರುತಿಸುವುದು ಹೇಗೆ ?
  • ಸರಿಯಾದ ಸ್ಟಾಪ್ ಲಾಸ್ ಮತ್ತು ರಿಸ್ಕ್ ರಿವಾರ್ಡ್ ಲೆಕ್ಕಾಚಾರ ಮಾಡಿ ಉತ್ತಮ ಲಾಭ ಪಡೆಯುವುದು ಹೇಗೆ ?
  • ಬೇರೆಯವರ ಸ್ಟಾಪ್ ಲಾಸ್ ಕಂಡು ಹಿಡಿಯಲು ಸಾಧ್ಯವೇ ?
  • ಯಾವ ಟೈಮ್ ಫ್ರೇಮ್ ನಲ್ಲಿ ಹೇಗೆ ಟ್ರೇಡ್ ಮಾಡುವುದು ಉತ್ತಮ ?

ಮೇಲಿನ ಎಲ್ಲ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿವೆಯೇ, ಹಾಗಾದರೆ ಷೇರು ಮಾರುಕಟ್ಟೆಯ ಉಚಿತ ಕೋರ್ಸ್ (ಕಾರ್ಯಾಗಾರ), ಹಾಗೂ ಲೈವ್ ಮಾರ್ಕೆಟ್ ನಲ್ಲಿ ಮಾರುಕಟ್ಟೆಯ ಅಪ್ಡೇಟ್ ಪಡೆಯಲು ಈ ಲಿಂಕ್ ಒತ್ತುವುದರ ಮೂಲಕ ಉಚಿತ Whatsapp Group (https://chat.whatsapp.com/EPQ3IZ3QTsDJRHZWRsq7xa) ಜಾಯಿನ್ ಆಗಬಹುದು. (ಈ ಗ್ರೂಪ್ ನಲ್ಲಿ ಕೇವಲ ಆಸಕ್ತರಿಗೆ ಹಾಗೂ ದಿನದಲ್ಲಿ ಸ್ವಲ್ಪ ಸಮಯ ಮೀಸಲಿಟ್ಟು ಕಲಿಯುವ ಇಚ್ಛೆ ಹೊಂದಿರುವವರಿಗೆ ಮಾತ್ರ ಅವಕಾಶ)

ಸೂಪರ್ ಫಾಸ್ಟ್ ಚೇತರಿಕೆ ಕಂಡ ನಿಫ್ಟಿ:

ನಿಫ್ಟಿಯು ಬುಲ್ಲಿಶ್ ಮೂವ್ ತಯಾರಾಗಿದೆ ಎಂದು ನಿನ್ನೆಯ ಆರ್ಟಿಕಲ್ ನಲ್ಲಿ ಚರ್ಚಿಸಲಾಗಿತ್ತು, ಅಂತೆಯೇ ಮಂಗಳವಾರದ ದಿನದಂದು ಭೀಕರ ಕುಸಿತ ಕಂಡಿದ್ದ ನಿಫ್ಟಿಯು, ನಂತರದ ಮೂರೇ ಮೂರು ಟ್ರೇಡಿಂಗ್ ಸೆಷನ್ ಗಳಲ್ಲಿ ಸೂಪರ್ ಫಾಸ್ಟ್ ಚೇತರಿಕೆ ಕಂಡು ಆಲ್ ಟೈಮ್ ಹೈ ನತ್ತ ಮುನ್ನುಗ್ಗಲು ಸಿದ್ಧವಾಗಿದೆ. ಇದಕ್ಕೆ ಪೂರಕವೆನ್ನುವಂತೆ ಇದೇ ಭಾನುವಾರ ಕೇಂದ್ರದಲ್ಲಿ NDA ಸರ್ಕಾರ ರಚನೆಗೆ ಪ್ರಮಾಣವಚನ ಇರಲಿದ್ದು, ಅಂತಾರಾಷ್ಟ್ರೀಯ ಹೂಡಿಕೆದಾರರಿಗೆ ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಉತ್ತೇಜನಕಾರಿಯಾಗಿದೆ.

ಇನ್ನು ಟೆಕ್ನಿಕಲ್ ಅನಾಲಿಸಿಸ್ ಪ್ರಕಾರವಾಗಿ ನಿಫ್ಟಿಯ ಮುಂದಿನ ಹೆಜ್ಜೆಗಳನ್ನು ಗಮನಿಸುವುದಾದರೆ, ನಿಫ್ಟಿಯು 23334ರ ಹಂತದ ಮೇಲೆ ಟ್ರೇಡಿಂಗ್ ಮಾಡಲು ಶುರು ಮಾಡಿದರೆ ಉತ್ತಮ ಬುಲ್ಲಿಶ್ ಮೂವ್ ಕಂಡುಬರಬಹುದು, 23334 ಹಂತ ದಾಟಿದರೆ ನಿಫ್ಟಿಯ ಮುಂದಿನ ಮೇಜರ್ ಟಾರ್ಗೆಟ್ 24500 ಆಗಿರಲಿದೆ. FII ಕಡೆಯಿಂದ ಉತ್ತಮ ಹೂಡಿಕೆ ಕಂಡು ಬಂದಲ್ಲಿ ಕಡಿಮೆ ಅವಧಿಯಲ್ಲಿ ನಿಫ್ಟಿಯು ಈ ಹಂತವನ್ನು ತಲುಪುವ ನಿರೀಕ್ಷೆ ಇರಲಿದೆ. ಹಾಗೆಯೆ ಸೋಮವಾರ ನಿಫ್ಟಿಯಲ್ಲಿ ಗ್ಯಾಪ್ ಅಪ್ ಓಪನಿಂಗ್ ಕಾಣುವ ಸಾಧ್ಯತೆ ಇರಬಹುದು.

ಆಪ್ಷನ್ ಚೈನ್ ನಲ್ಲಿ ನೋಡುವುದಾದರೆ ಡೀಪ್ ಇನ್ ದಿ ಮನಿ ಪುಟ್ ಆಪ್ಷನ್ ನಲ್ಲಿ ಪುಟ್ ಸೆಲ್ಲರ್ ಗಳು, ಹಾಗು ಡೀಪ್ ಇನ್ ದಿ ಮನಿ ಕಾಲ್ ಆಪ್ಷನ್ ನಲ್ಲಿ ಕಾಲ್ ಬಯರ್ಸ್ ಇರುವುದು ನೋಡಿದರೆ ನಿಫ್ಟಿಯಲ್ಲಿ ಬುಲ್ಲಿಶ್ ಮೂವ್ ಇರುವುದು ಖಚಿತ ಎನಿಸುತ್ತದೆ.

ಈ ಷೇರಿನ ಮೇಲೆ ಇರಲಿ ಗಮನ:

SWSOLAR – ಕಳೆದ ಹಲವಾರು ದಿನಗಳಿಂದ ಉತ್ತಮ ಡಿಪ್ ನೀಡಿದ್ದ ಈ ಶೇರಿನಲ್ಲಿ ಇದೀಗ ಉತ್ತಮ ಖರೀದಿ ಕಂಡು ಬರುತ್ತಿದೆ. ಧೀರ್ಘವಧಿಯ ಹೂಡಿಕೆಗೆ ಈ ಷೇರಿನತ್ತ ಗಮನವಿಡಬಹುದು.

(ಹೂಡಿಕೆ ಮಾಡುವ ಮುನ್ನ ಅಧಿಕೃತ /ಸರ್ಟಿಫೈಡ್ ಅಡ್ವೈಸರ್ ನೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಿ)