BSNL Recruitment2026: ಸರ್ಕಾರಿ ವಲಯದಲ್ಲಿ ಉದ್ಯೋಗವಕಾಶ

BSNL Recruitment2026: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ 2026ರಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನಿ (SET) ಹುದ್ದೆಗಳಿಗೆ ಬೃಹತ್ ನೇಮಕಾತಿಯನ್ನು ಪ್ರಕಟಿಸಿದೆ. ಟೆಲಿಕಾಂ ಮತ್ತು ಫೈನಾನ್ಸ್ ವಿಭಾಗಗಳಲ್ಲಿ ಒಟ್ಟು 120 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಬಿ.ಇ./ಬಿ.ಟೆಕ್ (B.E./B.Tech) ಅಥವಾ ಸಿಎ/ಸಿಎಂಎ (CA/CMA) ವಿದ್ಯಾರ್ಹತೆ ಹೊಂದಿರುವ ಫ್ರೆಶರ್‌ಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಎಂಜಿನಿಯರಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಅರ್ಹತೆ ಹೊಂದಿರುವ ಯುವಕರಿಗೆ ಸರ್ಕಾರಿ ವಲಯದಲ್ಲಿ ಉತ್ತಮ ವೃತ್ತಿಜೀವನ ನಿರ್ಮಿಸಲು ಇದು ಅತ್ಯುತ್ತಮ ಅವಕಾಶವಾಗಿದೆ. ಸರ್ಕಾರಿ ದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ BSNL SET ನೇಮಕಾತಿ ಒಂದು ಸವರ್ಣಾವಕಾಶ ಒದಗಿಸಿದೆ


ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ


ಎರಡು ಪ್ರಮುಖ ಸ್ಟ್ರೀಮ್‌ಗಳಿವೆ:
ಟೆಲಿಕಾಂ ಸ್ಟ್ರೀಮ್ – 95 ಹುದ್ದೆಗಳು
ಹಣಕಾಸು (Finance) ಸ್ಟ್ರೀಮ್ – 25 ಹುದ್ದೆಗಳು

ಶೈಕ್ಷಣಿಕ ಅರ್ಹತೆ:
ಎಲೆಕ್ಟ್ರಾನಿಕ್ಸ್, ಟೆಲಿಕಾಂ, ಕಂಪ್ಯೂಟರ್ ಸೈನ್ಸ್, ಐಟಿ, ಎಲೆಕ್ಟ್ರಿಕಲ್ ಅಥವಾ ಇನ್ಸ್ಟ್ರುಮೆಂಟೇಶನ್ ವಿಭಾಗದಲ್ಲಿ ಕನಿಷ್ಠ ಶೇ.60 ಅಂಕಗಳೊಂದಿಗೆ BE/B.Tech ಪದವಿ ಅಗತ್ಯ.

ವಯೋಮಿತಿ:
ಕನಿಷ್ಠ 21 ವರ್ಷ ಮತ್ತು ಗರಿಷ್ಠ 31 ವರ್ಷ ಹೊಂದಿರಬೇಕು.

ಆಯ್ಕೆಯಾದ ಅಭ್ಯರ್ಥಿಗಳು 24,900 – 50,500 ರೂ. ಸಂಬಳ ಪಡೆಯುತ್ತಾರೆ. ಪ್ರೊಬೇಷನ್ ಪೂರ್ಣಗೊಂಡ ನಂತರ ಪದೋನ್ನತಿ ಹಾಗೂ ಸರ್ಕಾರಿ ಭತ್ಯೆಗಳು, ಸೌಲಭ್ಯಗಳು ದೊರೆಯುತ್ತವೆ. ಕಂಪ್ಯೂಟರ್‌ ಆಧಾರಿತ ಪರೀಕ್ಷೆ ನಡೆಯಲಿದೆ.

ಶುಲ್ಕ:
ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್ – 2,500 ರೂ.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಬಿಡಿ – 1,250 ರೂ.


ಇದನ್ನೂ ಓದಿ: ಡ್ರೋನ್ ಪೈಲಟ್ ಆಗಲು ಇಲ್ಲಿದೆ ಸುವರ್ಣಾವಕಾಶ: ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರದ ವತಿಯಿಂದ ಉಚಿತ ಡ್ರೋನ್ ಪೈಲಟ್ ತರಬೇತಿ


ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಕೊನೆಯ ದಿನಾಂಕ ಮಾರ್ಚ್‌ 7 ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಕೊನೆಯ ದಿನಾಂಕ ಒಳಗಾಗಿ ಆಸಕ್ತಿ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಅರ್ಹ ಅಭ್ಯರ್ಥಿಗಳು BSNL ನ ಅಧಿಕೃತ ವೆಬ್‌ಸೈಟ್ (www.bsnl.co.in) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದು ಕೇಂದ್ರ ಸರ್ಕಾರದ ನೇಮಕಾತಿಯಾಗಿದ್ದು, ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರೀಕ್ಷಿಸಲು ಸೂಚಿಸಲಾಗಿದೆ.

BSNL Recruitment2026: ಸರ್ಕಾರಿ ವಲಯದಲ್ಲಿ ಉದ್ಯೋಗವಕಾಶ
BSNL Recruitment2026: ಸರ್ಕಾರಿ ವಲಯದಲ್ಲಿ ಉದ್ಯೋಗವಕಾಶ

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಇತ್ತೀಚಿನ ಜನಪ್ರಿಯ ಸುದ್ದಿಗಳು (BSNL Recruitment2026:) 

  1.  ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
  2. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
  3. ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
  4. ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
  5. ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ