(bpl card) ಆರೋಗ್ಯ ಸೇವೆಯಲ್ಲಿ ಒಂದಾದ ಆಯುಷ್ಮಾನ್ ಭಾರತ್-ಪ್ರಧಾನಮಂತ್ರಿಗಳ ಜನ ಆರೋಗ್ಯ ಯೋಜನಾ ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯೂ ಲಕ್ಷಾಂತರ ಭಾರತೀಯರಿಗೆ ಉಪಯೋಗವಾಗಿದೆ. ಆದರೆ, ಈ ಯೋಜನೆ ಇನ್ನೂ ಹಲವು ಮಂದಿಗೆ ಸರಿಯಾಗಿ ಅರ್ಥವೇ ಆಗಿಲ್ಲ. ಆಯುಷ್ಮಾನ್ ಕಾರ್ಡ್ ಸೇರಿದಂತೆ ಅದರ ಪ್ರಯೋಜನಗಳಿಗಾಗಿ ಹೇಗೆ ನೋಂದಾಯಿಸಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಕಾರ್ಡ್ ನೋಂದಣಿ ಎಲ್ಲಿ?:
ಆಯುಷ್ಮಾನ್ ಕಾರ್ಡ್ಗಳನ್ನು ನಿಮ್ಮ ಹತ್ತಿರದ ಗ್ರಾಮ ಒನ್ ನಿಂದ ರೇಷನ್ ಕಾರ್ಡ್ ಲಿಂಕ್ ಆಗಿರುವ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆ ನೀಡಿ ಉಚಿತವಾಗಿ ಪಡೆಯಬಹುದಾಗಿದೆ. ಹಾಗಾದರೆ ಈ ಕಾರ್ಡ್ ಮಾಡಿಸಲು ಬೇಕಾಗುವ ದಾಖಲೆಗಳು ಯಾವುದು, ಇದರಿಂದ ಪ್ರಯೋಜನವೇನು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಶ್ರಿ ರಾಮ್ ಫೈನಾನ್ಸ್ ಲಿಮಿಟೆಡ್ (BALEHONNUR) ವತಿಯಿಂದ ಸ್ಕಾಲರ್ ಶಿಪ್; ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸಿ
ಆಯುಷ್ಮಾನ್ ಕಾರ್ಡ್ ಹೊಂದಿರುವ ಬಿಪಿಎಲ್ ಕಾರ್ಡ್ದಾರರ ಪ್ರತೀ ಕುಟುಂಬಗಳಿಗೆ ರೂ.5 ಲಕ್ಷ ವಾರ್ಷಿಕ ಮಿತಿಯೊಳಗೆ ಉಚಿತ ಚಿಕಿತ್ಸೆ ಎಪಿಎಲ್ ಕಾರ್ಡನ ಪ್ರತೀ ಕುಟುಂಬಗಳಿಗೆ ಪ್ಯಾಕೇಜ್ ದರದಲ್ಲಿ ಶೇ.30 ರಷ್ಟು ವಾರ್ಷಿಕವಾಗಿ 1.5 ಲಕ್ಷದ ಮಿತಿಯೊಳಗೆ ಉಚಿತ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.
ಈ ಕಾರ್ಡ್ ನ ನೆರವಿನಿಂದ ದೇಶದಲ್ಲಿ ಎಲ್ಲೆ ಇದ್ದರೂ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಲು ಫೋರ್ಟಬಿಲಿಟಿ ಸೌಲಭ್ಯವಿದೆ. ಅಲ್ಲದೆ ತುರ್ತು ಸಂದರ್ಭದಲ್ಲಿ 171 ಚಿಕಿತ್ಸಾ ವಿಧಾನಗಳಿಗೆ ರೋಗಿಯು ನೇರವಾಗಿ ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
ಇದನ್ನೂ ಓದಿ: ಇನ್ಮುಂದೆ ಈ ಮಹಿಳೆಯರಿಗೆ ಬರಲ್ಲ ಗೃಹಲಕ್ಷ್ಮಿ ಹಣ; ಕಾರಣ ಏನು ಗೊತ್ತಾ?
ಈ ಕಾರ್ಡ್ ಅನ್ನು 14 ಸಂಖ್ಯೆಯ ಆಭಾ ಹೆಲ್ತ್ ಐಡಿಯೊಂದಿಗೆ ಸಂಯೋಜಿಸಲಾಗಿದೆ. ಕಾರ್ಡ್ ಇದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಮಾತ್ರ ರೆಫರಲ್ ಆಧಾರದ ಮೇಲೆ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು.
ಈ ಕಾರ್ಡ್ ಮಾಡಿಸಲು ಬೇಕಾಗುವ ದಾಖಲೆಗಳು ಯಾವುದು?:
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಫೋಟೋ
- ನಿವಾಸ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
- ಕುಟುಂಬದ ಎಲ್ಲಾ ಸದಸ್ಯರ ದಾಖಲೆಗಳು

ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಚಹಾ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಶೀಘ್ರವೇ ರಾಜ್ಯದಲ್ಲಿ ಟೀ ಪುಡಿ ಬ್ಯಾನ್
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಅಳವಡಿಕೆ ಕುರಿತು ಮತ್ತೊಂದು ಹೊಸ ಅಪ್ಡೇಟ್; ಮಿಸ್ ಮಾಡ್ದೆ ಈ ಸುದ್ದಿ ಓದಿ
- ಪಿಎಂ ಕಿಸಾನ್ ಯೋಜನೆ; 6,000 ಬದಲು 8,000ಕ್ಕೆ ಹೆಚ್ಚಿಸುವ ಸಾಧ್ಯತೆ; ಯೋಜನೆಗೆ ನೋಂದಣಿ ಹೇಗೆ?, ಇಲ್ಲಿದೆ ಮಾಹಿತಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಗ್ರಾಮ ಪಂಚಾಯತ್ ನಲ್ಲಿ ಜಾಬ್ ಆಫರ್; ಪಿಯುಸಿ ಪಾಸ್ ಆದವರು ಅರ್ಜಿ ಸಲ್ಲಿಸಿ; 15,000 ಸಂಬಳ
- ಯಜಮಾನಿಯರಿಗೆ ಸರ್ಕಾರದಿಂದ ಬಿಗ್ ಶಾಕ್; ಇನ್ಮುಂದೆ ಇಂತಹವರಿಗೆ ಬರಲ್ಲ ಗೃಹಲಕ್ಷ್ಮಿ ಯೋಜನೆಯ ಹಣ
- ಕರ್ನಾಟಕ ಬ್ಯಾಂಕ್ ನಲ್ಲಿ ಜಾಬ್ ಆಫರ್; ಈಗಲೇ ಅರ್ಜಿ ಸಲ್ಲಿಸಿ
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ






