BPL card 26: ಬಿಪಿಎಲ್ ಕಾರ್ಡ್ ಹೊಂದಿರುವವರು ಹಾಗೂ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಮಹತ್ವದ ಸೌಲಭ್ಯ ಘೋಷಿಸಿದೆ. ಬೆಂಗಳೂರಿನ ನಾಲ್ಕು ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ರೆಫರಲ್ ಲೆಟರ್ ಇಲ್ಲದೆ ನೇರವಾಗಿ ಉಚಿತ ಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿದೆ.
ಯಾವ ಆಸ್ಪತ್ರೆಗಳಲ್ಲಿ ಸೌಲಭ್ಯ?
* ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ
* ಕಿಮ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ
* ಅಂಬೇಡ್ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ.
ಯಾವ ಯೋಜನೆಯಡಿ ಚಿಕಿತ್ಸೆ
* ಬಡವರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ 5ರೂ. ಲಕ್ಷವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಲಭ್ಯವಿದೆ.
* ಸರ್ಕಾರಿ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆಯಡಿ ಚಿಕಿತ್ಸೆ ನೀಡಲಾಗುತ್ತದೆ.
ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಬೆಂಗಳೂರು ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಯದೇವಾ ಹಾಗೂ ಕಿದ್ವಾಯಿ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚಿನ ಒತ್ತಡವಿದೆ. ತುರ್ತು ಚಿಕಿತ್ಸೆಗೆ ವಿಳಂಬವಾಗದಂತೆ ಖಾಸಗಿ ಆಸ್ಪತ್ರೆಗಳಲ್ಲಿ ನೇರ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ
ಅಗತ್ಯ ದಾಖಲೆಗಳು:
* ಬಿಪಿಎಲ್ ಕಾರ್ಡ್
* ಆಯುಷ್ಮಾನ ಭಾರತ್ ಕಾರ್ಡ್ ಅಥವಾ ಅರೋಗ್ಯ ಕಾರ್ಡ್
ಇತರೆ ಪ್ರಮುಖ ನಿರ್ಧಾರಗಳು:
* ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 14 ವರ್ಷದ ಹೆಣ್ಣುಮಕ್ಕಳಿಗೆ ಎಚ್ಪಿವಿ ಲಸಿಕೆ ನೀಡಲು ₹15 ಕೋಟಿ ಮಂಜೂರು.
* ಬಳ್ಳಾರಿ ವೈದ್ಯಕೀಯ ಕಾಲೇಜಿನಲ್ಲಿ ಸ್ಕಿಲ್ ಲ್ಯಾಬ್ ಸ್ಥಾಪನೆಗೆ ₹41 ಕೋಟಿ ಅನುಮೋದನೆ.
* ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹71 ಕೋಟಿ ಮಂಜೂರು.
* ಈ ನಿರ್ಧಾರದಿಂದ ಬಡವರು ಹಾಗೂ ಸರ್ಕಾರಿ ನೌಕರರಿಗೆ ತ್ವರಿತ ಹಾಗೂ ಸುಲಭ ಚಿಕಿತ್ಸಾ ಸೌಲಭ್ಯ ದೊರೆಯಲಿದೆ ಎಂದು ಸರ್ಕಾರ ತಿಳಿಸಿದೆ.

Public Desclimer
This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.
News Malnad is not responsible for any misuse of our media identity by unauthorized persons.
ಇತ್ತೀಚಿನ ಜನಪ್ರಿಯ ಸುದ್ದಿಗಳು (BPL card 26:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





