Bhoomi Hunnime:ಮಲೆನಾಡಿನಲ್ಲಿ ಶ್ರದ್ಧಾ ಭಕ್ತಿಯ ಭೂಮಿ ಹುಣ್ಣಿಮೆ

(Bhoomi Hunnime) ಪುರಾತನ ಕಾಲದಿಂದಲೂ ನಡೆದು ಬಂದಿರುವ ಈ ಪ್ರಕೃತ್ತಿ ಪೂಜೆಗೆ ಅತ್ಯುತ್ತಮ ಉದಾಹರಣೆ ಎಂದರೆ ಭೂಮಿ ಹುಣ್ಣಿಮೆ. ಈ ಹಬ್ಬವನ್ನು ಮಲೆನಾಡು ಭಾಗದ ರೈತರು ಆಚರಿಸುತ್ತಾರೆ. ಸಂಭ್ರ,ಮ ಸಡಗರದಿಂದ ಭೂಮಿ ತಾಯಿಯನ್ನು ಆರಾಧಿಸುವ ಹಬ್ಬ ಇದು.


ಇದನ್ನೂ ಓದಿ; ಪವರ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 2975 ಹುದ್ದೆ, 10th ವಿದ್ಯಾರ್ಹತೆ; ಈಗಲೇ ಅರ್ಜಿ ಸಲ್ಲಿಸಿ


ಮನುಷ್ಯನು ತಾನು ಎಷ್ಟೇ ಸ್ವಾವಲಂಬಿ ಎಂದು ಹೇಳಿದರೂ ಪ್ರಕೃತಿಯ ಅವಲಂಬನೆ ಇಲ್ಲದೆ ಮನುಷ್ಯನಿಗೆ ಜೀವಿಸಲು ಸಾಧ್ಯವೇ ಇಲ್ಲ. ನಾವು ತನ್ನದೆಂದು ಹೇಳುವ ವಸ್ತು ಏನಿದೆ ಅದರ ಉತ್ಪತ್ತಿಯೆನ್ನುವುದು ಪಂಚಭೂತಗಳ ಮೇಲನದಿಂದ ಆಗಿದ್ದು ಹೊರತು ನಮ್ಮ ಕಾರಣದಿಂದ ಅಲ್ಲ. ಪಂಚಭೂತಗಳಾದ ಭೂಮಿ – ನೀರು – ಅಗ್ನಿ – ಗಾಳಿ – ಆಕಾಶ ಇವುಗಳಿಗೆ ಈ ವ್ಯವಸ್ಥೆಯಿಂದ ಉಪಕೃತನಾದ ಮಾನವನು ಅವಶ್ಯವಾಗಿ ಕೃತಜ್ಞತೆಯನ್ನು ಸಲ್ಲಿಸಲೇಬೇಕು. ಇದು ಸಂಪ್ರದಾಯವೂ ಹೌದು, ಶಾಸ್ತ್ರವೂ ಆಗಿದೆ. ಇದರ ಹೊರತಾಗಿ ನಾವು ಕೃತಘ್ನರಾಗಿ ದುರಾಸೆಯಿಂದ ಇವುಗಳನ್ನು ಅಗೌರವಿಸಿದರೆ ವಿಪತ್ತು ಸಂಭವಿಸುವುದರಲ್ಲಿ ಸಂಶಯವೇ ಇಲ್ಲ. ಇಂದಿನ ವರ್ತಮಾನದ ವಾತಾವರಣ ವೈಪರೀತ್ಯಕ್ಕೆ ಇದೂ ಒಂದು ಕಾರಣ.


ಇದನ್ನೂ ಓದಿ; ಸಂತೂರ್ ವತಿಯಿಂದ ವಿದ್ಯಾರ್ಥಿವೇತನ; ದ್ವಿತೀಯ ಪಿಯುಸಿ ಪಾಸ್ ಆದ ವಿದ್ಯಾರ್ಥಿಗಳಿಗೆ ಸಿಗಲಿದೆ 24,000 ಸ್ಕಾಲರ್ ಶಿಪ್


ವಿಜಯದಶಮಿ ಮುಗಿದು ಐದು ದಿನಗಳ ನಂತರ ಬರುವುದೇ ಈ ಒಂದು ಹಬ್ಬ. ಪುರಾತನ ಕಾಲದಿಂದಲೂ ನಡೆದು ಬಂದಿರುವ ಈ ಹಬ್ಬವನ್ನು ಮಲೆನಾಡು ಭಾಗದ ರೈತರು ಹೆಚ್ಚಾಗಿ ಆಚರಣೆ ಮಾಡುತ್ತಾರೆ ಭೂಮಿ ತಾಯಿಯನ್ನು ಸಂಭ್ರಮ ಸಡಗರದಿಂದ ಭೂತಾಯಿ ಸೀಮಂತವನ್ನು ಆರಾಧಿಸುವ ಹಬ್ಬವಾಗಿದೆ. ಭೂಮಿ ಹುಣ್ಣಿಮೆ ಶರದೃತುವಿನ ಆಶ್ವಯುಜಮಾಸದ ಶುಕ್ಲಪಕ್ಷದ ಕೊನೆಯ ದಿನ ಅಂದರೆ ಹುಣ್ಣಿಮೆಯಂದು ಭೂಮಿ ಪೂಜೆಯನ್ನು ಮಾಡುವುದು ವಿಶೇಷ.


ಇದನ್ನೂ ಓದಿ; ಜಿಲ್ಲೆಯ ಅಂಗನವಾಡಿಯಲ್ಲಿ ಭರ್ಜರಿ ಜಾಬ್ ಆಫರ್; 1170 ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ


ನಮ್ಮ ಪೂರ್ವಿಕರು ಪ್ರಕೃತಿಯನ್ನು ಗೌರವಿಸುವ ಸಲುವಾಗಿ ಕೆಲವು ವಿಶೇಷ ದಿನಗಳನ್ನು ಗುರುತಿಸಿ ಆದಿನದಂದು ಆಯಾಯ ರೂಪವನ್ನು ಪೂಜಿಸುವ ಪರಿಪಾಠ ಆರಂಭಿಸಿದರು. ಅದರಲ್ಲಿ ಇಂದಿನ ದಿನ “ಭೂಮಿ ಹುಣ್ಣಿಮೆ”. ಶರದೃತುವಿನ ಆಶ್ವಯುಜಮಾಸದ ಶುಕ್ಲಪಕ್ಷದ ಕೊನೆಯ ದಿನ ಅಂದರೆ ಹುಣ್ಣಿಮೆಯಂದು ಭೂಮಿ ಪೂಜೆಯನ್ನು ಮಾಡುವುದು ವಿಶೇಷ. ಈ ದಿನ ಜನರು ಎರಡು ಭಾವದಿಂದ ಭೂಮಿಯನ್ನು ಪೂಜಿಸುತ್ತಾರೆ.


ಇದನ್ನೂ ಓದಿ; ನೇಕಾರ ಸಮ್ಮಾನ್ ಯೋಜನೆಗೆ ನೋಂದಣಿ ಶುರು; ಈ ದಾಖಲೆ ಕಡ್ಡಾಯ


ಭೂ ತಾಯಿ ಸೀಮಂತ:
ಮೊದಲನೇಯದ್ದು – ಭೂಮಿತಾಯಿಯು ತನ್ನ ಮಡಿಲಿನಲ್ಲಿ ಫಲವನ್ನ /ಫಸಲನ್ನುತುಂಬಿಕೊಂಡು ಹಚ್ಚಹಸುರಾಗಿ ಕಂಗೊಳಿಸುತ್ತಿರುತ್ತಾಳೆ. ಅಂದರೆ ತನ್ನ ಗರ್ಭದಿಂದ ಪುಷ್ಟಿಯನ್ನು ನೀಡಿ ನಮಗಾಗಿ ಫಲವನ್ನು ನೀಡಲು ಸಿದ್ಧಳಾಗಿರುವಳು ಎಂಬ ಭಾವದಿಂದ ಸ್ತ್ರೀಯರಿಗೆ ಸೀಮಂತ ಮಾಡಿದ ರೀತಿಯಲ್ಲಿ ವಿವಿಧ ತಿಂಡಿಗಳನ್ನು ಮಾಡಿ ಭೂಮಿಗೆ ಅದನ್ನು ಬಳಿಸಿ ಅರಶಿನ ಕುಂಕುಮಗಳನ್ನು ಇಟ್ಟು ವಿಶೇಷವಾಗಿ ಪೂಜಿಸುತ್ತಾರೆ.


ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?


ಎರಡನೇಯದ್ದು – ಭೂಮಾತೆಯು ಈ ದಿನದಂದು ದೊಡ್ಡವಳಾದಳು (ಮೈನೆರೆದಳು) ಎಂಬ ಭಾವದಿಂದ ವಿಶೇಷವಾಗಿ ಪೂಜಿಸುತ್ತಾರೆ. ಈ ಮೇಲಿನ ಎರಡು ಪೂಜಾ ಭಾವಗಳೇನಿವೆ ಅವರೆಡೂ ಸಹಿತ ನಮ್ಮ ಕೃತಜ್ಞತೆಯ ರೂಪ. ವರುಷವಿಡೀ ಭೂಮಿಯನ್ನು ಅವಲಂಬಿಸಿ ಬದುಕುತ್ತೇವೆ. ಅದರಲ್ಲಿ ಉಳುಮೆ ಮಾಡುತ್ತೇವೆ, ನಮ್ಮ ಜೀವಕ್ಕೆ ಮತ್ತು ಜೀವನಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಅವಳ ಮಡಿಲಿನಿಂದಲೇ ಪಡೆಯುತ್ತೇವೆ. ಏನು ನಮ್ಮ ಅವಶ್ಯ ಪದಾರ್ಥಗಳಿವೆ ಅವು ಪಕ್ವವಾಗುವ ಕಾಲ ಈ ಶರದೃತುವಿನ ಆಶ್ವಿನ ಹುಣ್ಣಿಮೆಯಂದು ಎಂದು ಹಳೆಕಾಲದ ರೂಢಿಯ ಮಾತು. ಅದಕ್ಕನುಗುಣವಾಗಿ ಈ ದಿನದ ಹುಣ್ಣಿಮೆಯನ್ನು “ಭೂಮಿ ಹುಣ್ಣಿಮೆ” ಎಂಬದಾಗಿ ಆಚರಿಸುತ್ತೇವೆ.

Bhoomi Hunnime:ಮಲೆನಾಡಿನಲ್ಲಿ ಶ್ರದ್ಧಾ ಭಕ್ತಿಯ ಭೂಮಿ ಹುಣ್ಣಿಮೆ
Bhoomi Hunnime:ಮಲೆನಾಡಿನಲ್ಲಿ ಶ್ರದ್ಧಾ ಭಕ್ತಿಯ ಭೂಮಿ ಹುಣ್ಣಿಮೆ

ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆಯ 1 ತಿಂಗಳ ಹಣ ಜಮೆ; ಇನ್ನೊಂದು ತಿಂಗಳ ಹಣದ ಕುರಿತು ಸ್ಪಷ್ಟನೆ ನೀಡಿದ ಸಚಿವೆ


ಹಬ್ಬದ ತಯಾರಿ:
ಮನೆಯ ಗಂಡಸರು ಇಂದಿನ ದಿನ ತಮ್ಮ ಹೊಲ, ತೋಟಗಳಿಗೆ ಹೋಗಿ ಅಲ್ಲಿ ನೆಲವನ್ನು ಶುಚಿಗೊಳಿಸಿ, ಬಾಳೆಕಂಬ ಇತ್ಯಾದಿಗಳಿಂದ ಮಂಟಮ ಮಾಡಿ, ಮಾವಿನೆಲೆಯ ತೋರಣವನ್ನು ಮಾಡುತ್ತಾರೆ/ಬೇಕು. ಮನೆಯ ಹೆಂಗಳೆಯರು ಭೂಮಿಗೆ ರಂಗವಲ್ಲಿಯನ್ನಿಟ್ಟು, ಹೂವಿನಿಂದ ಅಲಂಕರಿಸಿ , ಅರಶಿನ – ಕುಂಕುಮಗಳಿಂದ ಅರ್ಚನೆ ಮಾಡಬೇಕು. ಹಸಿರು ಬಳೆ, ಹಸಿರು ವಸ್ತ್ರ ಇತ್ಯಾದಿಗಳನ್ನು ಇಟ್ಟರೆ ಉತ್ತಮ.


ಇದನ್ನೂ ಓದಿ;  ರಾಜ್ಯದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಗುಡ್ ನ್ಯೂಸ್ ನೀಡಿದ ಸಿಎಂ ಸಿದ್ಧರಾಮಯ್ಯ


ಆ ನಂತರ ಮನೆಯಿಂದ ಸುಂದರವಾದ ಬುಟ್ಟಿಯನ್ನು ಸಿದ್ಧಪಡಿಸಿ ಮನೆಯಲ್ಲಿಯೇ ಮಾಡಿದ ವಿವಿಧ ಭಕ್ಷ್ಯಗಳನ್ನು ಈ ಬುಟ್ಟಿಯಲ್ಲಿರಿಸಿ ಪೂಜಾ ಸ್ಥಾನಕ್ಕೆ ಹೋಗಿ, ಅಲ್ಲಿ ಮನೆಯವರೆಲ್ಲಾ ಸೇರಿ ಪೂಜಿಸಬೇಕು. ಪೂಜೆಯ ಕೊನೆಯಲ್ಲಿ ತಾಯಿಯನ್ನು ಭಕ್ತಿಯಿಂದ ಪ್ರಾರ್ಥಿಸಿ, ಒಳ್ಳೆಯ ರೀತಿಯ ಫಸಲನ್ನು ನೀಡು ಎಂಬ ಭಾವದಿಂದ ಬುಟ್ಟಿಯಲ್ಲಿ ತಂದ ಆಹಾರವನ್ನು ಬಾಳೇ ಎಲೆಯ ಮೇಲೆ ಬಡಿಸಬೇಕು. ಆನಂತರ ಪ್ರಸಾದ ರೂಪದಲ್ಲಿ ನಾವು ಬೆಳೆದ ಪೈರು ಅಥವಾ ಏನು ಬೆಳೆದಿರುವೆವೋ ಅದನ್ನು ಮನೆಗೆ ತಂದು ಮನೆಯಲ್ಲಿ ದೇವರ ಮುಂದಿಟ್ಟು ಪೂಜಿಸಿವುದು. ಈ ರೀತಿಯಾಗಿ ಬೆಳೆ ನೀಡುವ ಭೂತಾಯಿಗೆ ರೈತರು ಮನಸಾರೆ ಪ್ರಾರ್ಥಿಸುತ್ತಾರೆ.


ಇದನ್ನೂ ಓದಿ; ಅಂಚೆ ಪೇಮೆಂಟ್ ಬ್ಯಾಂಕ್ ನಲ್ಲಿ ಜಾಬ್ ಆಫರ್; 344 ಎಕ್ಸಿಕ್ಯೂಟಿವ್ ಜಾಬ್’ಗೆ ಅರ್ಜಿ ಸಲ್ಲಿಸಿ


ಬುಟ್ಟಿ ಮಾಡುವ ವಿಧಾನ:
ಬುಟ್ಟಿಗೆ ಸಗಣಿ, ಕೆಮ್ಮಣ್ಣು ಹಚ್ಚಿ ನಂತರ ಅದರ ಮೇಲೆ ಅಕ್ಕಿ ಹಿಟ್ಟಿನಲ್ಲಿ ಹಸೆ ಚಿತ್ತಾರವನ್ನು ಬಿಡಿಸಲಾಗುತ್ತದೆ. ಮಲೆನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಚಿತ್ಥಾರಗಳನ್ನು ಬುಟ್ಟಿಯ ಮೇಲೆ ಬಿಡಿಸಲಾಗುತ್ತದೆ.


ಇದನ್ನೂ ಓದಿ; PM ಕಿಸಾನ್ ಯೋಜನೆಯ 18 ನೇ ಕಂತಿನ ಹಣ ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ