(Bank of Baroda 25:) ಬ್ಯಾಂಕ್ ಆಫ್ ಬರೋಡದಲ್ಲಿ ಖಾಲಿ ಇರುವ 2500 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನ
ಈ ಅರ್ಹತೆ ಹೊಂದಿರುವುದು ಕಡ್ಡಾಯ:
* ಬ್ಯಾಂಕ್ ಆಫ್ ಬರೋಡ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.
* CA, ಕಾಸ್ಟ್ ಅಕೌಂಟೆಂಟ್, ಇಂಜಿನಿಯರಿಂಗ್, ಮೆಡಿಕಲ್, ಈ ಪದವೀಧರರು ಕೂಡ ಅರ್ಜಿಯನ್ನು ಸಲ್ಲಿಸಬಹುದು.
* ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ಒಂದು ವರ್ಷದ ಕಾಲ ಅನುಭವ ಇರಬೇಕು ಮತ್ತು ಬ್ಯಾಂಕಿಂಗ್ ಜ್ಞಾನ ಇರತಕ್ಕದ್ದು.
(Bank of Baroda 25:) ವಯೋಮಿತಿ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷಗಳಾಗಿರಬೇಕು ಮತ್ತು ಗರಿಷ್ಠ 30 ವರ್ಷಗಳ ಒಳಗಿರಬೇಕು. ವಯಸ್ಸಿನ ಸಡಿಲಿಕೆ ಬ್ಯಾಂಕಿನ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾಗಿದೆ.
ಇದನ್ನೂ ಓದಿ: ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವ ಸಾಮಾನ್ಯ ಅಭ್ಯರ್ಥಿಗಳಿಗೆ 800 ಶುಲ್ಕ ವಿಧಿಸಲಾಗುವುದು ಮತ್ತು ಎಸ್ಸಿ / ಎಸ್ಟಿ / ಮಹಿಳೆಯರು / ಅಂಗವಿಕಲರು ಮತ್ತು ಮಾಜಿ ಸೈನಿಕರಿಗೆ ಕೇವಲ 175 ಅರ್ಜಿ ಶುಲ್ಕ ವಿಧಿಸಬಹುದು. ಅರ್ಜಿ ಶುಲ್ಕ ಕೇವಲ ಆನ್ಲೈನ್ ಪಾವತಿ ಮಾತ್ರವಾಗಿರುವುದು ಹಾಗೂ ಅರ್ಜಿ ಶುಲ್ಕವನ್ನು ಹಿಂಪಡೆಯಲಾಗುವುದಿಲ್ಲ.
(Bank of Baroda 25:) ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಯಾವುದು?:
* ಜನನ ಪ್ರಮಾಣ ಪತ್ರ
* ಶೈಕ್ಷಣಿಕ ಪ್ರಮಾಣ ಪತ್ರ
* ಅನುಭವದ ಸರ್ಟಿಫಿಕೇಟ್
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಪಾನ್ ಕಾರ್ಡ್
ಇದನ್ನೂ ಓದಿ: 500 ಮೀಟರ್ ಒಳಗಿನ ಪಂಪ್ಸೆಟ್ ಗಳಿಗೆ ಇಲಾಖೆಯಿಂದಲೇ ಟ್ರಾನ್ಸ್ಫಾರ್ಮರ್!; ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿಕೆ
ಅರ್ಜಿ ಸಲ್ಲಿಸುವ ವಿಧಾನ:
* ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲಿಗೆ ಬ್ಯಾಂಕಿನ ಅಧಿಕೃತ https://www.bankofbaroda.in ವೆಬ್ಸೈಟ್ಗೆ ಭೇಟಿ ನೀಡಿ.
* ಅಲ್ಲಿ ಕೆರಿಯರ್ ಮೇಲೆ ಕ್ಲಿಕ್ ಮಾಡಿ ನಂತರ local bank officer requirement 2025 ಇದರ ಮೇಲೆ ಆಯ್ಕೆ ಮಾಡಿಕೊಳ್ಳಿ.
* ಎಲ್ಲ ವಿವರಗಳನ್ನು ಸರಿಯಾಗಿ ಅಲ್ಲಿ ಭರ್ತಿ ಮಾಡಿ.
* ಅಲ್ಲಿ ಕೇಳುವ ಅಗತ್ಯ ದಾಖಲೆಗಳು ಪಿಡಿಎಫ್ ರೂಪದಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿಕೊಳ್ಳಿ.
* ನಂತರ ಶುಲ್ಕವನ್ನು ಪಾವತಿಸಿ.
* ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಈ ಹುದ್ದೆಯ ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್ ಆಫ್ ಬರೋಡ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ತಿಳಿದುಕೊಳ್ಳಿ.

ಇತ್ತೀಚಿನ ಜನಪ್ರಿಯ ಸುದ್ದಿಗಳು (Bank of Baroda 25:)
- ಕಟ್ಟಡ ನಿರ್ಮಾಣಗಳಿಗೆ ಗ್ರಾ.ಪಂ.ಗಳಲ್ಲೇ ಸಿಗಲಿದೆ ಸ್ವಾಧೀನ ಪ್ರಮಾಣ ಪತ್ರ; ಈ ದಾಖಲೆಗಳು ಕಡ್ಡಾಯ
- ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಮಹತ್ವದ ಆದೇಶ
- ಇ-ಆಸ್ತಿ ಖಾತಾ ದಾಖಲೆ ಪಡೆಯಲು ಅವಕಾಶ
- ರೈತರ ಗಮನಕ್ಕೆ; ಕೃಷಿ ಯಂತ್ರೋಪಕರಣ ಖರೀದಿಗೆ ಶೇ.50ರಷ್ಟು ಸಬ್ಸಿಡಿ!
- ರಾಜ್ಯದ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಎಂ ನಿಂದ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ





