Akshaya Tritiya 25: ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಆಗದೇ ಇದ್ದರೆ ಈ 5 ವಸ್ತುಗಳನ್ನು ಖರೀದಿಸಿ!

(Akshaya Tritiya 25:) ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವುದು ಶುಭವೆಂದು ಒಂದಿಷ್ಟು ಜನ ಹೇಳಿದರೆ. ಆದರೆ, ದುಬಾರಿಯಾದ ಕಾರಣ ಮಧ್ಯಮ ವರ್ಗದವರು, ಬಡವರು ನೋಡಿ ಕಣ್ತುಂಬಿಸಿಕೊಳ್ಳಬೇಕಷ್ಟೆ. ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸಲು ಸಾಧ್ಯವಾಗದೇ ಇದ್ದರೆ ಈ ವಸ್ತುಗಳನ್ನು ಖರೀದಿಸಿ. ಇದು ಚಿನ್ನದಷ್ಟೇ ಶುಭ ಫಲವನ್ನು ನೀಡುವುದು. ಹಾಗಾದರೆ ಯಾವ ವಸ್ತು ಎಂಬುದರ ಕುರಿತು ಇಲ್ಲಿದೆ ನೋಡಿ.


ನ್ನೂ ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಏನದು? ಇಲ್ಲಿದೆ ನೋಡಿ


ಮಣ್ಣಿನ ಪಾತ್ರೆ
ಅಕ್ಷಯ ತೃತೀಯ ದಿನದಂದು ಮಡಿಕೆಯನ್ನು ಖರೀದಿಸುವುದು ಚಿನ್ನವನ್ನು ಖರೀದಿಸಿದಷ್ಟೇ ಶುಭ ಫಲಗಳನ್ನು ನೀಡುತ್ತದೆ. ಈ ರೀತಿ ಮಣ್ಣಿನ ಮಡಿಕೆಯನ್ನು, ದೀಪವನ್ನು ಅಥವಾ ಹೂಜಿಯನ್ನು ಖರೀದಿಸುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಯಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ.

ಕವಡೆ ಮತ್ತು ಪಾತ್ರೆ:
ಅಕ್ಷಯ ತೃತೀಯದಂದು ತಾಮ್ರ ಅಥವಾ ಹಿತ್ತಾಳೆ ಪಾತ್ರೆಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ. ಕವಡೆಯು ತಾಯಿ ಲಕ್ಷ್ಮಿಗೆ ಇಷ್ಟವಾದ ವಸ್ತುವಾಗಿದೆ. ಏಕೆಂದರೆ ತಾಯಿ ಲಕ್ಷ್ಮಿಯಂತೆ ಕವಡೆಯು ಕೂಡ ಸಮುದ್ರದಿಂದ ಹುಟ್ಟಿಕೊಂಡಿತು. ಈ ಪವಿತ್ರವಾದ ಕವಡೆಯನ್ನು ಖರೀದಿಸಿ ದೇವಿಯ ಪಾದಗಳಲ್ಲಿ ಇಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.


ನ್ನೂ ಓದಿ: ಈ ದಿನ SSLC ಫಲಿತಾಂಶ ಪ್ರಕಟ


(Akshaya Tritiya 25:) ಕಲ್ಲುಪ್ಪು:
ಕಲ್ಲು ಉಪ್ಪನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಕಲ್ಲುಪ್ಪು ಭೌತಿಕ ಸುಖಗಳ ಅಧಿಪತಿ ಶುಕ್ರ ಮತ್ತು ತಾಯಿ ಮತ್ತು ಮಾನಸಿಕ ಶಾಂತಿಗೆ ಕಾರಣವಾದ ಗ್ರಹ ಚಂದ್ರದೇವನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಈ ದಿನ ಕಲ್ಲು ಉಪ್ಪನ್ನು ಖರೀದಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ. ಕಲ್ಲುಪ್ಪು ಖರೀದಿಸುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಶಾಂತಿ ದೊರೆಯುತ್ತದೆ.

ಹತ್ತಿ:
ನಿಮ್ಮ ಬಳಿ ಹೆಚ್ಚು ಹಣವಿಲ್ಲದಿದ್ದರೂ, ನೀವು ಹತ್ತಿಯನ್ನು ಖರೀದಿಸಬಹುದು. ಹತ್ತಿಯನ್ನು ಖರೀದಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಅಲ್ಲದೆ, ಸಂಪತ್ತು ಮತ್ತು ಧಾನ್ಯಗಳ ವೃದ್ಧಿಯಾಗುವುದು.


ನ್ನೂ ಓದಿ: ಎನ್‌ಸಿಆರ್‌ಟಿಸಿ ಇಂದ ನೇಮಕಾತಿ; 18,000 ದಿಂದ ಸಂಬಳ


ಬಾರ್ಲಿ, ಹಳದಿ ಸಾಸಿವೆ, ಕೊತ್ತಂಬರಿ ಬೀಜ:
ಬಾರ್ಲಿ ಅಥವಾ ಹಳದಿ ಸಾಸಿವೆ ಅಥವಾ ಕೊತ್ತಂಬರಿ ಬೀಜಗಳನ್ನು ಖರೀದಿಸುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವಷ್ಟೇ ಶುಭ ಫಲವನ್ನು ನೀವು ಇವುಗಳನ್ನು ಖರೀದಿಸುವುದರಿಂದ ಪಡೆದುಕೊಳ್ಳುತ್ತೀರಿ. ಬಾರ್ಲಿ ಅಥವಾ ಹಳದಿ ಸಾಸಿವೆಯನ್ನು ಮನೆಗೆ ತರುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಪ್ರಾಪ್ತವಾಗುವುದು. ಬಾರ್ಲಿ ಅಥವಾ ಹಳದಿ ಸಾಸಿವೆ ಕೂಡ ಸಂತೋಷ, ಶಾಂತಿ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

(ಸೂಚನೆ: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ನ್ಯೂಸ್‌ ಮಲ್ನಾಡ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್‌ ಮಲ್ನಾಡ್ ಇದಕ್ಕೆ ಜವಾಬ್ದಾರಿಯಲ್ಲ)

Akshaya Tritiya 25: ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಆಗದೇ ಇದ್ದರೆ ಈ 5 ವಸ್ತುಗಳನ್ನು ಖರೀದಿಸಿ!
Akshaya Tritiya 25: ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಆಗದೇ ಇದ್ದರೆ ಈ 5 ವಸ್ತುಗಳನ್ನು ಖರೀದಿಸಿ!

ಇತ್ತೀಚಿನ ಜನಪ್ರಿಯ ಸುದ್ದಿಗಳು (Akshaya Tritiya 25:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?