(aadhaar -card) ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಆಧಾರ್ ಕಾರ್ಡ್ನ ಉಚಿತ ನವೀಕರಣದ ಗಡುವನ್ನು ವಿಸ್ತರಿಸಿದ್ದು, ಈ ಮೊದಲು ಈ ಗಡುವು 14 ಸೆಪ್ಟೆಂಬರ್ 2024 ಆಗಿತ್ತು. ಇದನ್ನು ಈಗ 14 ಡಿಸೆಂಬರ್ 2024 ರವರೆಗೆ ವಿಸ್ತರಿಸಲಾಗಿದೆ. ಆಧಾರ್ ಹೊಂದಿರುವವರು ಮುಂದಿನ 90 ದಿನಗಳವರೆಗೆ ಯಾವುದೇ ಶುಲ್ಕವಿಲ್ಲದೆ ಆನ್ ಲೈನ್ ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದಾಗಿದೆ.
ಇದನ್ನೂ ಓದಿ; ಆಧಾರ್ ಕಾರ್ಡ್ ಅಪ್ಡೇಟ್’ಗೆ ಕೊನೆಯ ದಿನಾಂಕ ವಿಸ್ತರಣೆ; ಇಲ್ಲಿದೆ ಹೊಸ ಡೆಡ್ ಲೈನ್…!
ಆಧಾರ್ ಬಹಳ ಮುಖ್ಯವಾದ ದಾಖಲೆಯಾಗಿದ್ದು, UIDAI ನ ಅಧಿಕೃತ ವೆಬ್ ಸೈಟ್ ಪ್ರಕಾರ, ಆಧಾರ್ ಕಾರ್ಡ್‌ದಾರರು ಈಗ ಡಿಸೆಂಬರ್ 14, 2024 ರವರೆಗೆ ಆನ್ ಲೈನ್ ನಲ್ಲಿ ಮಾಹಿತಿಯನ್ನು ಉಚಿತವಾಗಿ ನವೀಕರಿಸಬಹುದು.
ಇದನ್ನೂ ಓದಿ; ಮತ್ತೆ APL-BPL ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ; ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ..!
ಯಾರು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕು?;
ಸರ್ಕಾರದಿಂದ ಯಾವುದೇ ಯೋಜನೆಯ ಪ್ರಯೋಜನ ಪಡೆಯಲು ಆದಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಹೀಗಾಗಿ ಆಧಾರ್ ಕಾರ್ಡ್ ಪಡೆದು 10 ವರ್ಷ ದಾಟಿದವರು ಕಡ್ಡಾಯವಾಗಿ ಆಧಾರ್ ಅನ್ನು ಅಪ್ಡೇಟ್ ಮಾಡಿಸಬೇಕು. UIDAI ನೀಡಿದ ಮಾಹಿತಿಯ ಪ್ರಕಾರ, ಡಿಸೆಂಬರ್ 14 ರವರೆಗೆ ಎಲ್ಲಾ 10 ವರ್ಷಗಳ ಹಳೆಯ ಆಧಾರ್ ಕಾರ್ಡ್ ಗಳನ್ನು ಉಚಿತವಾಗಿ ನವೀಕರಿಸಬಹುದಾಗಿದೆ. ಅದರ ನಂತರ ಆಧಾರ್ ಅಪ್ಡೆಟ್ ಮಾಡಲು ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ನಿಮಗೆ ಕೇವಲ 90 ದಿನಗಳವರೆಗೆ ಅವಕಾಶವಿದೆ.
ಇದನ್ನೂ ಓದಿ; ರಾಜ್ಯದ ಕಟ್ಟಡ ಕಾರ್ಮಿಕರಿಗೆ ಮುಖ್ಯ ಮಾಹಿತಿ; ಕಾರ್ಮಿಕ ಕಾರ್ಡ್ ನೋಂದಣಿ ನವೀಕರಣಕ್ಕೆ ಈ ದಾಖಲೆಗಳು ಕಡ್ಡಾಯ!
ಹಾಗಾದರೆ ಹೇಗೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವುದು ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ:
ಉಚಿತವಾಗಿ ಆಧಾರ್ ಕಾರ್ಡ್ ಅನ್ನು ನೀವು ಆನ್ ಲೈನ್ ಮೂಲಕವು ಮಾಡಬಹುದಾಗಿದೆ. ಇಲ್ಲವಾದಲ್ಲಿ ನಿಮ್ಮ ಹತ್ತಿರದ ಅಂಚೆ ಕಚೇರಿ, ಆಧಾರ್ ಸೆಂಟರ್ ಗೆ ಭೇಟಿ ನೀಡಿ ಆಪ್ಡೇಟ್ ಮಾಡಿಸಬಹುದಾಗಿದೆ.
ಇದನ್ನೂ ಓದಿ; ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 50,000ದ ವರೆಗೆ ಸ್ಕಾಲರ್ ಶಿಪ್; ಈ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಿ
ಆನ್ ಲೈನ್ ಅಲ್ಲಿ ಅಪ್ಡೇಟ್ ಮಾಡುವುದು ಹೇಗೆ? ಇಲ್ಲಿದೆ ನೋಡಿ :
* uidai.gov.in ನಲ್ಲಿ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ
* ಹೋಮ್ ಪೇಜ್ ನಲ್ಲಿ, ‘ಮೈ ಅಧಾರ್’ ಟ್ಯಾಬ್ ಅಡಿಯಲ್ಲಿ, ‘ಅಪ್ ಡೇಟ್ ಡೆಮೊಗ್ರಾಫಿಕ್ಸ್ ಡೇಟಾ ಮತ್ತು ಚೆಕ್ ಸ್ಟೇಟಸ್’ ಅನ್ನು ಕ್ಲಿಕ್ ಮಾಡಿ.
* ಲಾಗಿನ್ ಪುಟಕ್ಕೆ ಹೋದ ನಂತರ, ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಲಾಗ್ ಇನ್ ಮಾಡಲು ‘OTP’ ಆಯ್ಕೆಯನ್ನು ಆರಿಸಿ.
* ಒಮ್ಮೆ ಹೀಗೆ ಮಾಡಿದ ನಂತರ, ‘ಅಪ್ ಡೇಟ್ ಆಧಾರ್ ಆನ್ ಲೈನ್’ ವಿಭಾಗಕ್ಕೆ ಹೋಗಿ ಮತ್ತು ‘ಅಪ್ ಡೇಟ್ ಆಧಾರ್’ ಕ್ಲಿಕ್ ಮಾಡಿ.
* ಈ ವಿಂಡೋದಲ್ಲಿ ನೀವು ನವೀಕರಿಸಲು ಬಯಸುವ ಡೇಟಾವನ್ನು ಆಯ್ಕೆಮಾಡಿ ಮತ್ತು ಅಗತ್ಯವಿರುವ ಡಾಕ್ಯುಮೆಂಟ್ ಗಳನ್ನು ಅಪ್ ಲೋಡ್ ಮಾಡಿ.
* ಇದೆಲ್ಲಾ ಆದ ಬಳಿಕ ಸಬ್ ಮಿಟ್ ಕೊಡಿ.
* ಇದಿಷ್ಟು ಮಾಡಿದರೆ ನಿಮ್ಮ ಆಧಾರ್ ನವೀಕರಣಗೊಳ್ಳುತ್ತದೆ.

ಇದನ್ನೂ ಓದಿ; ರೈತರಿಗೆ ಭರ್ಜರಿ ಗುಡ್ ನ್ಯೂಸ್; ಸಿಬಿಲ್ ಸ್ಕೋರ್ ಇಲ್ಲದೇ 10 ಲಕ್ಷ ರೂ. ಸಾಲ ವಿತರಿಸಲು ಬ್ಯಾಂಕ್ ಗಳಿಗೆ ಸೂಚನೆ
ಇತ್ತೀಚಿನ ಜನಪ್ರಿಯ ಸುದ್ದಿಗಳು
-
- ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
- ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
- ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
- ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
- ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
- ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
- ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
- ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
- 31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
- ಬಿಪಿಎಲ್ ರೇಷನ್ ಕಾರ್ಡ್ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
- 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
- PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
- ವಾಹನ ಸವಾರರೇ ಗಮನಿಸಿ; ಆಗಸ್ಟ್ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
- HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ
- ಹೃದಯಾಘಾತಕ್ಕೂ ಮುನ್ನ ಈ ಐದು ಎಚ್ಚರಿಕೆ ನೀಡುತ್ತೆ ನಿಮ್ಮ ದೇಹ….; ದೇಹದ ಈ ಭಾಗಗಳಲ್ಲಿ ನೋವು ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು!






