ಬೆಂಗಳೂರು : ಐಎಂಎ ವಂಚನೆ ಪ್ರಕರಣದಲ್ಲಿ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ಅಧಿಕಾರಿಗಳು ನಡೆಸಿದ ದಾಳಿ ಇಂದು ಮುಂಜಾನೆ ಅಂತ್ಯಗೊಂಡಿದೆ.
ಗುರುವಾರ ಬೆಳಿಗ್ಗೆ ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ಇರುವಂತಹ ಜಮೀರ್ ನಿವಾಸದ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ಸತತ 24 ಗಂಟೆಗಳ ಪರಿಶೀಲನೆಯನ್ನು ನಡೆಸಿ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಜಮೀರ್ ರವರ ಕಚೇರಿ, ಫ್ಲ್ಯಾಟ್ ಗಳ ಮೇಲೆ ಭಾರಿ ದೊಡ್ಡ ಇಡಿ ಅಧಿಕಾರಿಗಳ ತಂಡ ರೇಡ್ ಮಾಡಿದ್ದಾರೆ. ಹಾಗೆಯೇ ನ್ಯಾಷನಲ್ ಟ್ರಾವೆಲ್ಸ್ ಕಚೇರಿಯ ಮೇಲೆ ಸಹ ರೇಡ್ ಮಾಡಿ ಸಾಕಷ್ಟು ವಿಚಾರಣೆಯನ್ನು ನಡೆಸಿದ್ದಾರೆ ಇಂದು ವಿಚಾರಣೆ ಅಂತ್ಯ ಗೊಂಡಿದೆ.
ನಂತರ ಮಾಧ್ಯಮಗಳೊಂದಿಗೆ ಜಮೀರ್ ರವರು ಇಡಿ ಅಧಿಕಾರಿಗಳ ದಾಳಿ ಈಗ ಮುಗಿದಿದೆ ಅವರು ನಾನು ನಿರ್ಮಿಸಿದ ಮನೆಯ ಪರಿಶೀಲನೆಗಾಗಿ ದಾಳಿ ನಡೆಸಿದ್ದಾರೆ ಅವರಿಗೆ ಎಲ್ಲಾ ರೀತಿಯಲ್ಲೂ ಅಗತ್ಯ ಸಹಕಾರವನ್ನು ನೀಡಿದ್ದೇನೆ ಮುಂದೆಯೂ ಸಹಕರಿಸುತ್ತೇನೆ ಎಂದು ಹೇಳಿದರು.