ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕ ವಿಧಾನಸಭೆ ಚುನಾವಣೆ 2023 ರಲ್ಲಿ ಕಡೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಜಿತಗೊಂಡ ಜೆಡಿಎಸ್ ನ ವೈಎಸ್‌ವಿ ದತ್ತ ಅವರು ಇದೀಗ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಮಾತ್ರವಲ್ಲದೆ ಚುನಾವಣೆ ಸಮಯದಲ್ಲಿ ನಡೆದ ಬೆಳವಣಿಗೆಯಿಂದ ಪಶ್ಚಾತ್ತಾಪ ಪಟ್ಟಿರುವ ದತ್ತ ಅವರು, ಇದೀಗ ಕ್ಷೇತ್ರದಲ್ಲಿ ಪಶ್ಚಾತ್ತಾಪ ಪಾದಯಾತ್ರೆ ಕೈಗೊಂಡು ಜನರಲ್ಲಿ ಕ್ಷಮೆ ಕೋರಲು ನಿರ್ಧರಿಸಿದ್ದಾರೆ. ಈ ಬಗ್ಗೆ ವೈಎಸ್‌ವಿ ದತ್ತ ಸುದೀರ್ಘ ಪತ್ರ ಬರೆದಿದ್ದಾರೆ.
ಇದನ್ನೂ ಓದಿ; ಬಂದೂಕಿನಿಂದ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಇದನ್ನೂ ಓದಿ; ಕಾಫಿನಾಡಲ್ಲಿ ಹೆಚ್ಚಾದ ದಲಿತ ಸಿಎಂ ಕೂಗು
ನನಗೆ ಕ್ಷೇತ್ರದ ಜನತೆ ನೀಡಿರುವ ಪ್ರೀತಿಗೆ ಪ್ರತಿಯಾಗಿ ಕೊನೆಯ ಉಸಿರು ಇರುವವರೆಗೂ ಎಲ್ಲರಲ್ಲೂ ಒಂದಾಗಿ ನನ್ನ ನೆಲದಲ್ಲಿಯೇ ಮಣ್ಣಾಗುತ್ತೇನೆ. ನನ್ನ ಅನೇಕ ತಪ್ಪುಗಳಿಗೆ ಜನ ಸರಿಯಾದ ಶಿಕ್ಷೆ ನೀಡಿದ್ದಾರೆ. ತಪ್ಪು ಮಾಡಿದ ನಾನು ಪ್ರಾಯಶ್ಚಿತ್ತ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಕಡೂರು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದಾರೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಬಿಜೆಪಿಗೆ ಮತ ನೀಡಿದ್ದಕ್ಕೆ ಹಲ್ಲೆ ಮಾಡಿದ್ದಾರೆಂದ್ರು ಡ್ರಾಮ ಮಾಡಿ ಈಶ್ವರಪ್ಪ ಬಳಿ ಹಣ ಪೀಕಿದ
- ಯುವತಿ ಕಿಡ್ನ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
- ಸಿಟಿ ಬಸ್ ದ್ವಿಚಕ್ರ ವಾಹನದ ನಡುವೆ ಡಿಕ್ಕಿ
ಕ್ಷೇತ್ರದ ನೂತನ ಶಾಸಕರಿಗೆ ಮಂತ್ರಿಯಾಗಲೆಂದು ಶುಭ ಹಾರೈಸಿದರು. ಸದ್ಯ ನಾನೀಗ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಾನು ಎಲ್ಲಿ ಎಡವಿದೆ, ನನ್ನ ಮತದಾರ ಬಂಧುಗಳಾದ ನಿಮ್ಮ ನಿರೀಕ್ಷೆಯನ್ನು ಮುಟ್ಟಲು ನಾನು ಎಲ್ಲಿ ವಿಫಲನಾಗಿದ್ದೇನೆ ಎಂಬ ಬಗ್ಗೆ ಚಿಂತನ ಮಂಥನ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ; ನೇತ್ರಾವತಿ ನದಿಗೆ ಬಿದ್ದು ವ್ಯಕ್ತಿ ಮೃತ್ಯು
ಕಡೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜೂನ್ 24ರಂದು ನನ್ನ ಜನ್ಮದಿನವಾಗಿದ್ದು, ಅಂದಿನಿಂದ ಕ್ಷೇತ್ರದ ಪ್ರತಿ ಹಳ್ಳಿಗೆ ಪಾದಯಾತ್ರೆ ಮೂಲಕ ತೆರಳಿ ಜನರ ಕ್ಷಮೆ ಕೋರುತ್ತೇನೆ. ಪಾದಯಾತ್ರೆ ವೇಳೆ ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಯಾವುದೇ ಚುನಾವಣೆ ದೃಷ್ಟಿಯಿಂದ ನಾನು ಇದನ್ನು ಮಾಡುತ್ತಿಲ್ಲ. ನನ್ನ ಆತ್ಮಾವಲೋಕನಕ್ಕಾಗಿ ಪ್ರಾಯಶ್ಚಿತ್ತ ಪಾದಯಾತ್ರೆ ಮಾಡುತ್ತಿದ್ದೇನೆ ಎಂದು ದತ್ತ ತಿಳಿಸಿದ್ದಾರೆ.
ಕಳೆದ 17 ವರ್ಷಗಳಿಂದ ನೀವು ತೋರಿರುವ ಪ್ರೀತಿ, ಬೆಂಬಲ, ಅಭಿಮಾನದ ಕಾರಣದಿಂದ ನಿಮ್ಮ ಋಣ ತೀರಿಸುವ ಹಾಗೂ ನನ್ನ ಕೊನೆಯ ಉಸಿರು ಇರುವವರೆಗೂ ನಾನು ನಿಮ್ಮೊಂದಿಗೆ ಇದ್ದು ನಿಮ್ಮಲ್ಲಿಯೇ ಒಬ್ಬನಾಗಿ ಈ ನನ್ನ ನೆಲದಲ್ಲಿ ಮಣ್ಣಾಗಬೇಕೆಂಬ ದೃಢ ಸಂಕಲ್ಪ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ; ನಿಮ್ಮ ಜಿಲ್ಲೆಯಿಂದ ಯಾರೆಲ್ಲ ಸಚಿವ ಸಂಪುಟಕ್ಕೆ ಸಂಭಾವ್ಯರು? ಇಲ್ಲಿದೆ ಮಾಹಿತಿ
ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುವ ವೈ.ಎಸ್.ವಿ. ದತ್ತ ಅವರ ನಿರ್ಧಾರಕ್ಕೆ ಸಂಸದ ಪ್ರಜ್ವಲ್ ರೇವಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ. ನಿವೃತ್ತಿ ಮಾತನಾಡಬೇಡಿ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದು, ಕಡೂರಿನಲ್ಲಿ ದತ್ತ ಅವರ ಸೋಲು ಕೇವಲ ಅವರೊಬ್ಬರ ಸೋಲಲ್ಲ, ಅದು ನಮ್ಮೆಲ್ಲರ ಸೋಲು. ಎಲ್ಲರೂ ಸೇರಿ ದತ್ತ ಅವರಿಗೆ ಸಹಕಾರ ನೀಡೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ; ಮಗಳ ಮೊಬೈಲ್ ಫೋನ್ ನಿಂದಲೇ ಬಂತು 20 ಲಕ್ಷ ರೂ.ಗಳ ಬೇಡಿಕೆ