ಕೇರಳ : ತನ್ನ ಪ್ರಿಯಕರನಿಂದ ಅತ್ಯಾಚಾರ ಮತ್ತು ಗರ್ಭಪಾತಕ್ಕೆ ಒಳಗಾಗಿದ್ದ 17 ವರ್ಷದ ಬಾಲಕಿಯೊಬ್ಬಳು ಯುಟ್ಯೂಬ್ ವಿಡಿಯೋ ಸಹಾಯದಿಂದ ಮಗುವಿಗೆ ಜನ್ಮ ನೀಡಿದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ತಾನು ಪ್ರೀತಿಸುತ್ತಿದ್ದ 21 ವರ್ಷದ ಯುವಕನಿಂದ ಗರ್ಭವತಿಯಾದ 17 ವರ್ಷದ ಬಾಲಕಿ ಯಾರ ಸಹಾಯವನ್ನು ಪಡೆಯದೇ ಬರಿ ಯೂಟ್ಯೂಬ್ ನಲ್ಲಿ ಬರುವ ವಿಡಿಯೋ ಸಹಾಯದಿಂದ ಮಗುವಿಗೆ ಜನ್ಮವನ್ನು ನೀಡಿದ್ದಾಳೆ. ಬಾಲಕಿ ಮತ್ತು ಆ ಯುವಕ ಹಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು ಇದಕ್ಕೆ ಮನೆಯವರು ಕಾನೂನಿನ ಪ್ರಕಾರ 18 ವರ್ಷದ ನಂತರ ಅವರಿಬ್ಬರಿಗೆ ಮದುವೆ ಮಾಡಲು ನಿರ್ಧರಿಸಿದ್ದರು.
ಬಾಲಕಿಯ ತಾಯಿ ಅಂಧೆಯಾಗಿದ್ದರು ಮತ್ತು ತಂದೆ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು, ಇವರಿಗೆ ಮಗಳು ಗರ್ಭವತಿಯಾಗಿದ್ದ ಬಗ್ಗೆ ತಿಳಿಯದ ಕಾರಣ ಆಕೆ ಯೂಟ್ಯೂಬ್ ನನ್ನು ಮಾರ್ಗದರ್ಶಕವಾಗಿ ಇಟ್ಟುಕೊಂಡು ಮಗುವಿಗೆ ಜನ್ಮವನ್ನು ನೀಡಿದ್ದಾಳೆ.
ಯೂಟ್ಯೂಬ್ ನಲ್ಲಿ ಬರುವ ವಿಡಿಯೋ ಮೂಲಕ ಮಗುವಿಗೆ ಜನ್ಮ ನೀಡಿ ಹೊಕ್ಕುಳಬಳ್ಳಿಯನ್ನು ಕತ್ತರಿಸಿದ್ದಾಳೆ ಯಾವುದೇ ರೀತಿಯ ಬಾಹ್ಯ ಸಹಾಯವನ್ನು ಪಡೆಯದೇ ಜನ್ಮವನ್ನು ನೀಡಿದ್ದಾಳೆ ಎಂದು ತಿಳಿದುಬಂದಿದೆ. ಅಕ್ಟೋಬರ್ 22 ರಂದು ಆ ಪುಟ್ಟ ಮಗುವಿನ ಅಳನ್ನು ಕೇಳಿದ ನಂತರ ಬಾಲಕಿಯ ಪೋಷಕರಿಗೆ ವಿಷಯ ತಿಳಿದು ಪೊಲೀಸರಿಗೆ ತಿಳಿಸಿದ್ದಾರೆ.
ಆ ಬಾಲಕಿಗೆ ಇನ್ನೂ 18 ವರ್ಷ ತುಂಬದ ಕಾರಣ ಆಕೆಯ ಪ್ರಿಯಕರನ ಮೇಲೆ ಅತ್ಯಾಚಾರ ಮತ್ತು ಮಕ್ಕಳ ರಕ್ಷಣೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ತಾಯಿ ಮತ್ತು ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಲಪುರಂ ಜಿಲ್ಲೆಯ ಕೊಟ್ಟಕ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ