Sunday, December 3, 2023
Homeಇತರೆಅಪ್ರಾಪ್ತ ಹಿಂದೂ ಬಾಲಕನನ್ನು ಹತ್ಯೆ ಮಾಡಿ ಮೃತದೇಹದ ಮೇಲೆ ಅತ್ಯಾಚಾರ ನಡೆಸಿದ ಕಾಮುಕರು.

ಅಪ್ರಾಪ್ತ ಹಿಂದೂ ಬಾಲಕನನ್ನು ಹತ್ಯೆ ಮಾಡಿ ಮೃತದೇಹದ ಮೇಲೆ ಅತ್ಯಾಚಾರ ನಡೆಸಿದ ಕಾಮುಕರು.

ಪಾಕಿಸ್ತಾನ: 8 ವರ್ಷದ ಹಿಂದೂ ಬಾಲಕನನ್ನು ಹತ್ಯೆ ಮಾಡಿ ಆತನ ಶವದ ಮೇಲೆ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ದೇಶದ ಸಿಂಧ್ ಪ್ರಾಂತ್ಯದಲ್ಲಿ ನಡೆದಿದೆ.

5 ನೇ ತರಗತಿ ಓದುತ್ತಿದ್ದ 8 ವರ್ಷದ ಬಾಲಕನನ್ನು ಅಪಹರಿಸಿ ಆತನ ಕತ್ತನ್ನು ಕೊಯ್ದು ಹತ್ಯೆ ಮಾಡಿ ಆತನ ಮೇಲೆ ಆರೋಪಿಗಳು ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಗುರುನಾನಕ್ ಜಯಂತಿಯ ಸಂಭ್ರಮಾಚರಣೆಯಲ್ಲಿದ್ದ ಕುಟುಂಬದವರು ಬಾಲಕ ಮನೆಯ ಬಳಿ ಕಾಣದ ಕಾರಣ ಹುಡುಕಾಟ ನಡೆಸಿದರು. ಬಾಲಕನನ್ನು ಹುಡುಕಾಡಿದ ಕುಟುಂಬದವರು ಬಾಲಕನ ಮೃತದೇಹವನ್ನು ಒಮ್ಮೆಲೆ ನೋಡಿ ದಿಗ್ಬ್ರಮೆಗೊಂಡಿದ್ದಾರೆ.

ಬಾಲಕನ ಶವ ಖೈರ್ ಪುರ್ ಮಿರ್ ಪ್ರದೇಶದ ಬಾಬರ್ಲೊಯ್ ಪಟ್ಟಣದ ಪಾಳುಬಿದ್ದಿದ್ದ ಮನೆಯಲ್ಲಿ ಪತ್ತೆಯಾಗಿದೆ. ಅಲ್ಲದೇ ಬಾಲಕನ ದೇಹದ ಕುತ್ತಿಗೆ, ಬೆನ್ನು, ಮತ್ತು ಸೊಂಟದ ಭಾಗದಲ್ಲಿ ಪರಚಿರುವ ಗುರುತುಗಳು ಕಂಡು ಬಂದಿದ್ದು ಆತನಿಗೆ ಚಿತ್ರಹಿಂಸೆ ನೀಡಿ ಭೀಕರವಾಗಿ ಹತ್ಯೆ ಮಾಡಿ ಆತನ ಮೇಲೆ ಅತ್ಯಾಚಾರವನ್ನು ನಡೆಸಿದ್ದಾರೆ.

ವಿಷಯ ತಿಳಿದ ನಂತರ ಸ್ಥಳಕ್ಕೆ ಬಂದ ಬಾಬಾರ್ಲೊಯ್ ಪೊಲೀಸ್ ಠಾಣೆಯ ಪೊಲೀಸರು ಘಟನೆಯ ಪ್ರಮುಖ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ತನಿಖೆ ನಡೆಸುವ ವೇಳೆ ಇಬ್ಬರು ತಾವು ಮಾಡಿರುವ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿದುಬಂದಿದೆ.

ಕೊಲೆ ಹಾಗೂ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಪಾಕಿಸ್ತಾನ ಸರ್ಕಾರ ಕ್ಯಾಸ್ಟ್ರೇಶನ್ ( ಲೈಂಗಿಕ ಚಟುವಟಿಕೆ ಕಡಿಮೆ ಮಾಡಲು ಬಳಸುವ ಔಷಧಿ/ ಚಿಕಿತ್ಸೆ ) ಎನ್ನುವ ಕಠಿಣ ಶಿಕ್ಷೆಯನ್ನು ವಿಧಿಸಿದೆ.

Most Popular

Recent Comments