Sunday, June 4, 2023
Homeಕೃಷಿಮಲೆನಾಡಿನ ಎಲೆಚುಕ್ಕಿ ಪೀಡಿತ ಅಡಿಕೆ ತೋಟಗಳಿಗೆ ವಿಜ್ಞಾನಿಗಳ ಭೇಟಿ, ಪರಿಶೀಲನೆ

ಮಲೆನಾಡಿನ ಎಲೆಚುಕ್ಕಿ ಪೀಡಿತ ಅಡಿಕೆ ತೋಟಗಳಿಗೆ ವಿಜ್ಞಾನಿಗಳ ಭೇಟಿ, ಪರಿಶೀಲನೆ

ಮಲೆನಾಡಿನ ಬಹುತೇಕ ಜಿಲ್ಲೆಗಳ ಅಡಿಕೆ ತೋಟಗಳನ್ನು ಆವರಿಸಿರುವ ಎಲೆಚುಕ್ಕಿರೋಗ ಹಾಗೂ ಹಳದಿ ಎಲೆ ರೋಗದ ಕುರಿತು, ಹಾಗೂ ನಿಯಂತ್ರಣಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ವಿಜ್ಞಾನಿಗಳು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶೃಂಗೇರಿ ತಾಲ್ಲೂಕಿನ ಕೆರೆ ಗ್ರಾಮ ಪಂಚಾಯತಿ ಮಾತುವಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವಿಜ್ಞಾನಿ ವಿನಾಯಕ ಹೆಗಡೆ ಚೇರ್ಮನ್ ಇವರ ನೇತೃತ್ವದ ತಂಡ ಅಡಿಕೆ ಬೆಳೆಗಾರರಿಗೆ ಮಾರಕವಾಗಿರುವ ಅಡಿಕೆ ಎಲೆಚುಕ್ಕಿ ರೋಗದ ನಿವಾರಣೆ ಮತ್ತು ನಿಯಂತ್ರಣಾ ಕ್ರಮಗಳನ್ನು ಸೂಚಿಸಿದರು. ಅಡಿಕೆ ತೋಟಗಳನ್ನು ಪರಿಶೀಲನೆ ಮಾಡಿದರು. ಈ ವೇಳೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ ಇದ್ದರು.

ಪರಿಶೀಲನೆ ನಡೆಸಿ ನಂತರ ರೈತರುಗಳೊಂದಿಗೆ ಮಾತುಕತೆ ನಡೆಸಿದ ವಿಜ್ಞಾನಿಗಳು ತಾತ್ಕಾಲಿಕವಾಗಿ ರೋಗವನ್ನು ನಿವಾರಣೆ ಮಾಡಲು ಔಷಧಗಳನ್ನು ಸಿಂಪಡಿಸಲು ಮಾಹಿತಿ ನೀಡಿದರು. ಈ ವೇಳೆ ಎಲೆಚುಕ್ಕಿ ರೋಗದಿಂದ ತತ್ತರಿಸಿರುವ ರೈತರಿಗೆ ಕೂಡಲೆ ಪರಿಹಾರವನ್ನು ನೀಡುವ ಬಗ್ಗೆ ಪ್ರಸ್ತಾಪ ಮಾಡಲಾಯಿತು ಮತ್ತು ಶಾಶ್ವತವಾಗಿ ರೋಗವನ್ನು ನಿಯಂತ್ರಿಸುವ ಬಗ್ಗೆ ಸೂಕ್ತ ಅಧ್ಯಯನವನ್ನು ನಡೆಸಿ ದಾಖಲೆಗಳ ಮುಖಾಂತರ ಸರ್ಕಾರಗಳಿಗೆ ಶಿಫಾರಸ್ಸು ಮಾಡಬೇಕೆಂದು ರೈತರು ಮನವಿ ಸಲ್ಲಿಸಿದರು.

ಕರ್ನಾಟಕವು ಭಾರತದಲ್ಲಿ ಅತಿ ಹೆಚ್ಚು ಅರೆಕಾ ಬೆಳೆಯುವ ರಾಜ್ಯವಾಗಿದ್ದು, ಒಟ್ಟು ಉತ್ಪಾದನೆಯ 80% ರಷ್ಟು ಕೊಡುಗೆ ನೀಡುತ್ತದೆ. ಅಡಿಕೆ ತೋಟಗಳು ಕರ್ನಾಟಕದಲ್ಲಿ 5 ಲಕ್ಷ ಹೆಕ್ಟೇರ್‌ಗಳಲ್ಲಿ ಹರಡಿಕೊಂಡಿವೆ. 50 ಲಕ್ಷಕ್ಕೂ ಹೆಚ್ಚು ಜನರು ಈ ಬೆಳೆಯನ್ನು ಅವಲಂಬಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ತಂಡವು ನವೆಂಬರ್ 20 ರ ಭಾನುವಾರ ಮಧ್ಯಾಹ್ನ ಸುಳ್ಯದ ಕೆಲ ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ನಿನ್ನೆ ಸೋಮವಾರದಂದು ಕಳಸ, ಶೃಂಗೇರಿ, ಕೊಪ್ಪ ತಾಲೂಕಿನ ಕೆಲ ಭಾಗಗಳಿಗೆ ಭೇಟಿ ನೀಡಿದ್ದ ವಿಜ್ಞಾನಿಗಳ ತಂಡ, ಇಂದು ಮಂಗಳವಾರ ತೀರ್ಥಹಳ್ಳಿಗೆ ಭೇಟಿ ನೀಡಿ, ಅರೇಕಾ ಕಾರ್ಯಪಡೆಯ ಅಧ್ಯಕ್ಷರೂ ಆಗಿರುವ ರಾಜ್ಯದ ಗೃಹಸಚಿವ ಆರಗ ಜ್ಞಾನೇಂದ್ರ ಮತ್ತು ಇತರೆ ಚುನಾಯಿತಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ಕಳೆದ ಮೂರು ವರ್ಷಗಳಿಂದ ಹಾನಿಗೊಳಗಾದ ತೋಟಗಳಲ್ಲಿ ಇಳುವರಿ 90% ರಷ್ಟು ಕಡಿಮೆಯಾಗಿದೆ. ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ನೂರಾರು ಅಡಕೆ ಬೆಳೆಗಾರರು ಎಲೆ ಚುಕ್ಕೆ ರೋಗದಿಂದ ತೋಟ ಕಳೆದುಕೊಂಡು ಕಂಗಾಲಾಗಿದ್ದು, ವಿಜ್ಞಾನಿಗಳ ಭೇಟಿಯಿಂದಾದರೂ ಸಮಸ್ಯೆಗೆ ಪರಿಹಾರ ದೊರೆಯಬೇಕು ಎಂಬ ನಿರೀಕ್ಷೆಯಲ್ಲಿ ಮಲೆನಾಡಿನ ಕೃಷಿಕರಿದ್ದಾರೆ.

ಕಳೆದ ಮೂರು ವರ್ಷಗಳಿಂದ ಫಂಗಲ್ ಸೋಂಕಿನಿಂದ ಅನೇಕ ರೈತರು ಇಳುವರಿಯಲ್ಲಿ ಅಪಾರ ನಷ್ಟ ಅನುಭವಿಸಿದ್ದು, ಈ ರೋಗವು 2018 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸದ ಕೆಲವು ಭಾಗಗಳಲ್ಲಿ ಮೊದಲ ಬಾರಿಗೆ ಕಂಡು ಬಂದಿತ್ತು. ನಂತರ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿಯೂ ಕಾಣಿಸಿಕೊಂಡಿತ್ತು. ಕ್ರಮೇಣ, ಇದು ಇತರ ಪ್ರದೇಶಗಳಿಗೆ ಹರಡಿತು.

ಕರ್ನಾಟಕದ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅರೇಕಾ ತೋಟಗಳ,
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ನೂರಾರು ಅಡಿಕೆ ಬೆಳೆಗಾರರು ಎಲೆಚುಕ್ಕೆ ರೋಗದಿಂದ ತೋಟ ಕಳೆದುಕೊಂಡು ಕಂಗಾಲಾಗಿದ್ದಾರೆ, ನಷ್ಟವನ್ನು ಅನುಭವಿಸಿದ್ದಾರೆ.

ವಿಜ್ಞಾನಿಗಳ ತಂಡದಲ್ಲಿ ICAR-CPCRI ನಿರ್ದೇಶಕಿ ಡಾ.ಅನಿತಾ ಕರುಣ್, ಕಾಸರಗೋಡು, ಕ್ಯಾಲಿಕಟ್ ನ ಅರೇಕಾನಟ್ ಮತ್ತು ಸಂಬಾರ ಪದಾರ್ಥಗಳ ಅಭಿವೃದ್ದಿ ನಿರ್ದೇಶನಾಲಯದ (DASD) ನಿರ್ದೇಶಕ ಡಾ.ಹೋಮಿ ಚೆರಿಯನ್, DASD ಉಪನಿರ್ದೇಶಕಿ ಡಾ.ಫರ್ಮಿನಾ CPCRI ಮುಖ್ಯಸ್ಥ ಡಾ.ರವಿ ಭಟ್, ಕೆಳದಿ ಶಿವಪ್ಪ ನಾಯಕ ವಿಶ್ವ ವಿದ್ಯಾನಿಲಯದ ನಿರ್ದೇಶಕ ಡಾ.ಎಂ ವಾಲಿ, ತೋಟಗಾರಿಕೆ ಉಪನಿರ್ದೇಶಕ ಡಾ. H.R ನಾಯ್ಕ್, ಉಸ್ತುವಾರಿ ಮುಖ್ಯಸ್ಥ CPCRI ಡಾ.ವಿನಾಯಕ ಹೆಗ್ಡೆ ಇದ್ದರು.

Most Popular

Recent Comments