ಮೈಸೂರು: ರಾಜ್ಯದ ರೈತ ಸಮುದಾಯದ ಜನತೆಗೆ ಸಿಎಂ ಬಸವರಾಜ ಬೊಮ್ಮಾಯಿಯವರು ಸಿಹಿ ಸುದ್ದಿಯನ್ನು ನೀಡಿದ್ದಾರೆ.
ಮೈಸೂರು ದಸರಾ ಉದ್ಘಾಟನೆಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಎಸ್. ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತರಲಾಗಿದ್ದ ಯಶಸ್ವಿನಿ ಯೋಜನೆ ಯನ್ನು ಮರುಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿರುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ರೈತರಿಗೆ ಅನಾರೋಗ್ಯ ಉಂಟಾದರೆ ಆಸ್ಪತ್ರೆಗೆ ಹಣವನ್ನು ನೀಡಲು ತೊಂದರೆಯಗಬಾರದೆಂದು ಅವರಿಗೆ ಉಚಿತವಾಗಿ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಹಿಂದೆ ಜಾರಿಯಲ್ಲಿದ್ದ ಯಶಸ್ವಿ ಯೋಜನೆಯನ್ನು ಮರುಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಭಾಷಣ ಮಾಡುವ ವೇಳೆ ತಿಳಿಸಿದರು.
ಯಶಸ್ವಿ ಯೋಜನೆ ಗ್ರಾಮೀಣ ಸಹಕಾರಿಗಳ ಆರೋಗ್ಯ ಸುರಕ್ಷತಾ ಯೋಜನೆಯಗಿದ್ದು ಯಾವುದೇ ಸಂಘದ ಸದಸ್ಯರು ಕನಿಷ್ಠ ಮೊತ್ತದ ಪ್ರಿಮಿಯಂ ಹಣವನ್ನು ಪಾವತಿಸಿ ತಮ್ಮ ಕುಟುಂಬದವರ ಹೆಸರನ್ನು ನೋಂದಣಿ ಮಾಡಿಸಿದರೆ ಏನೇ ಚಿಕಿತ್ಸೆ ಮಾಡಿಸುವುದಾದರೂ ಉಚಿತವಾಗಿ ಹಲವು ವಿಧಗಳ ಚಿಕಿತ್ಸೆ ಮಾಡಿಸಬಹುದು ಎಂದು ರಾಜ್ಯದ ರೈತ ಸಮುದಾಯದ ಜನತೆಗೆ ಮಾಹಿತಿಯನ್ನು ನೀಡಿದರು