Tuesday, November 28, 2023
Homeಸುದ್ದಿಗಳುಕ್ರೀಡೆವಿಶ್ವ ಟೆಸ್ಟ್​ ಚಾಂಪಿಯನ್ ​ಶಿಪ್​ ಪಟ್ಟಿಯಲ್ಲಿ " ಅಗ್ರಸ್ಥಾನ " ಪಡೆದ ಟೀಂ ಇಂಡಿಯಾ

ವಿಶ್ವ ಟೆಸ್ಟ್​ ಚಾಂಪಿಯನ್ ​ಶಿಪ್​ ಪಟ್ಟಿಯಲ್ಲಿ ” ಅಗ್ರಸ್ಥಾನ ” ಪಡೆದ ಟೀಂ ಇಂಡಿಯಾ

ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ (2021-2023) ಪಟ್ಟಿಯಲ್ಲಿ ಟೀಂ ಇಂಡಿಯಾ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

2 ನೇ ಸ್ಥಾನದಲ್ಲಿ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡ ಸ್ಥಾನವನ್ನು ಪಡೆದಿದೆ.

ಇಂಗ್ಲೆoಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಮೂಲಕ ಟೀಂ ಇಂಡಿಯಾ 14 ಅಂಕಗಳನ್ನು ಸಂಪಾದಿಸಿತ್ತು. ಒಂದು ಪಂದ್ಯವನ್ನು ಗೆದ್ದು ಮತ್ತೊಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಟೀಂ ಇಂಡಿಯಾ 58.33 ಪಾಯಿಂಟ್ ಪರ್ಸೆಂಟೇಜ್ ನನ್ನು ಸಂಪಾದಿಸಿದೆ. ನಂತರ ಈ ಪಟ್ಟಿಯಲ್ಲಿ ಇಂಗ್ಲೆoಡ್ ತಂಡವು ಪಾಕ್ ಹಾಗೂ ವೆಸ್ಟ್ ಇಂಡೀಸ್ ನಂತರದ ಸ್ಥಾನದಲ್ಲಿದೆ.

ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡವು 12 ಅಂಕಗಳನ್ನು ಸಂಪಾದಿಸುವ ಮೂಲಕ ೨ನೇ ಸ್ಥಾನದಲ್ಲಿವೆ.

ಟೀಂ ಇಂಡಿಯಾ ಹಾಗೂ ಇಂಗ್ಲೆoಡ್ ಸರಣಿಯಲ್ಲಿ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಕೊನೆಗಂಡಿತ್ತು. ಆದರೆ 2ನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಟೀಂ ಇಂಡಿಯಾ 151 ರನ್ ಗಳ ಅಂತರದಲ್ಲಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಗೆಲುವಿನ ನಗೆಯನ್ನು ಬೀರಿದೆ. ಟೀಂ ಇಂಡಿಯಾ ಇಂದು ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯಲಿರುವ 3 ನೇ ಟೆಸ್ಟ್ ಪಂದ್ಯದಲ್ಲಿಯೂ ಜಯಭೇರಿ ಬಾರಿಸುವ ವಿಶ್ವಾಸದಲ್ಲಿದೆ.

Most Popular

Recent Comments