Tuesday, April 23, 2024
Homeಇತರೆಟಿ20 ವಿಶ್ವಕಪ್ ಪಂದ್ಯದಲ್ಲಿ ಗೆದ್ದ ಪಾಕ್ ಪರ ಘೋಷಣೆ : ಮೂವರು ಕಾಶ್ಮೀರಿ ಇಂಜಿನಿಯರ್ ವಿದ್ಯಾರ್ಥಿಗಳು...

ಟಿ20 ವಿಶ್ವಕಪ್ ಪಂದ್ಯದಲ್ಲಿ ಗೆದ್ದ ಪಾಕ್ ಪರ ಘೋಷಣೆ : ಮೂವರು ಕಾಶ್ಮೀರಿ ಇಂಜಿನಿಯರ್ ವಿದ್ಯಾರ್ಥಿಗಳು ಅರೆಸ್ಟ್

ನವದೆಹಲಿ: ಟಿ20 ವಿಶ್ವಕಪ್​ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತಿದ್ದಕ್ಕೆ ಪಾಕಿಸ್ತಾನದ ಪರ ಘೋಷಣೆಯನ್ನು ಕೂಗಿ, ವಿಜಯೋತ್ಸವವನ್ನು ಆಚರಿಸಿದ ಮೂವರು ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ಆಗ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮೂವರು ಕೂಡ ಕಾಶ್ಮೀರಿ ವಿದ್ಯಾರ್ಥಿಗಳಾಗಿದ್ದು, ಆಗ್ರಾದ ರಾಜಾ ಬಲ್ವಂತ್​ ಸಿಂಗ್​ ಕಾಲೇಜಿನಲ್ಲಿ ಇಂಜಿನಿಯರಿಂಗ್​ ವಿದ್ಯಾಭ್ಯಾಸ ಮಾಡುತ್ತಿದ್ದರು, ಆರೋಪಿಗಳನ್ನು ತೃತೀಯ ವರ್ಷದ ಇಂಜಿನಿಯರ್​ ವಿದ್ಯಾರ್ಥಿಗಳಾದ ಅರ್ಷಿದ್​ ಯೂಸುಫ್​, ಇನಾಯತ್​ ಶೇಕ್​ ಹಾಗೂ ನಾಲ್ಕನೇ ವರ್ಷದ ವಿದ್ಯಾರ್ಥಿ ಶೋಕತ್​ ಅಹ್ಮದ್​ ಗನೈ ಎಂದು ಗುರುತಿಸಲಾಗಿದೆ.

ಈಗಾಗಲೇ ಕಾಲೇಜು ಆಡಳಿತ ಮಂಡಳಿ ಮೂವರನ್ನು ಅಮಾನತು ಮಾಡಿದ್ದು ಭಾರತದ ವಿರುದ್ಧ ಪಾಕಿಸ್ತಾನ ಗೆದ್ದ ಬಳಿಕ ಪಾಕ್​ ಪರವಾಗಿ ಆರೋಪಿಗಳು ಸ್ಟೇಟಸ್​ ಹಾಕಿ ದೇಶದ್ರೋಹದ ಕೃತ್ಯವನ್ನು ಎಸಗಿದ್ದಾರೆ. ಇಷ್ಟೇ ಅಲ್ಲದೇ ಇನ್ನು ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬರೇಲಿಯಲ್ಲಿ ಮೂವರು ಹಾಗೂ ಲಖನೌದಲ್ಲಿ ಒಬ್ಬರನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ, ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಹಾಗೂ 505 (1) (ಬಿ) (ಯಾವುದೇ ಹೇಳಿಕೆ/ವದಂತಿಯನ್ನು ಮಾಡಿದವರು/ಪ್ರಕಟಿಸುವವರು/ಪ್ರಸರಣ ಮಾಡುವುದು /ವರದಿ) ಮತ್ತು ಐಟಿ ಕಾಯಿದೆ 2008ರ ವಿಭಾಗ 66ಎಫ್​ (ಸೈಬರ್ ಭಯೋತ್ಪಾದನೆಗೆ ಶಿಕ್ಷೆ) ಅಡಿಯಲ್ಲಿ ಎಫ್​ಐಆರ್​ ನನ್ನು ದಾಖಲಿಸಲಾಗಿದೆ ಎಂದು ಮಾಹಿತಿ ಲಭಿಸಿದೆ.

Most Popular

Recent Comments