ಮುಂಬೈ: ಯುವತಿಯ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಬರ್ಭರವಾಗಿ ಹತ್ಯೆ ಮಾಡಿರುವ ಭೀಕರ ಘಟನೆ ನಗರದ ಕುರ್ಲಾ ಪ್ರದೇಶದಲ್ಲಿ ನಡೆದಿದೆ.
ಸುಮಾರು 20 ವರ್ಷದ ಯುವತಿಯ ಮೃತ ದೇಹ ನಗರದ HDIL ಕಂಪೌಂಡ್ ನ ಖಾಲಿ ಕಟ್ಟಡದ 13 ನೆ ಮಹಡಿಯಲ್ಲಿ ಸಿಕ್ಕಿದ್ದು ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಒಬ್ಬ 18 ವರ್ಷದ ಬಾಲಕ ಗೆಳೆಯರೊಂದಿಗೆ ಕಟ್ಟಡದ ವಿಡಿಯೋ ಮಾಡುತ್ತಿದ್ದ ಸಂದರ್ಭದಲ್ಲಿ ಯುವತಿಯ ಮೃತದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿಯನ್ನು ನೀಡಿದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಕೊಳೆಯುತ್ತಿದ್ದ ಯುವತಿಯ ಮೃತ ದೇಹವನ್ನು ಪ್ರಾಥಮಿಕ ತನಿಖೆ ನಡೆಸಲು ಆಸ್ಪತ್ರೆಗೆ ರವಾನಿಸಿ ವೈದ್ಯಕೀಯ ವರದಿಯಲ್ಲಿ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಖಚಿತವಾಗಿದೆ.
ಯುವತಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ತಲೆಗೆ ಭೀಕರವಾಗಿ ಹೊಡೆದು ವಿಕೃತವಾಗಿ ಕೊಲೆ ಮಾಡಿರುವುದು ಗೊತ್ತಾಗಿದೆ.
ಪ್ರಕರಣ ದಾಖಲಿಸಿಕೊಂಡ ವಿನೋಬ ಭಾವೆ ನಗರದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದು ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ( ಅತ್ಯಾಚಾರ ) ಹಾಗೂ ಸೆಕ್ಷನ್ 302 (ಹತ್ಯೆ) ಪ್ರಕರಣದಡಿಯಲ್ಲಿ ಕೇಸನ್ನು ದಾಖಲಿಸಿಕೊಂಡಿದ್ದಾರೆ.