ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಸರ್ಕಾರದ ಫ್ರೀ ಬಸ್ ಶಕ್ತಿ ಯೋಜನೆ ಸರಿ ಇಲ್ಲ, ಗಂಡ ಜೊತೆಗೆ ಬಾರದೆ ನಮ್ಮ ಭದ್ರತೆ ಇಲ್ಲದಂತಾಗಿದೆ. ಮತ ಹಾಕುವಾಗ ಮಹಿಳೆಯರು ಮಾತ್ರ ಹಾಕಿ ಎಂದಿದ್ರಾ, ನಾವ್ ಇಲ್ಲದೇ ನೀವ್ ಬಂದ್ರಾ ಅಂತಿದ್ದಾರೆ ಯಜಮಾನರು. ಅವರಿಲ್ಲದೆ ಮಕ್ಕಳು ಬಂದ್ರಾ ಎಂದು ಶಕ್ತಿ ಯೋಜನೆ ವಿರುದ್ಧ ಮಹಿಳೆ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆದಿದೆ.
ಇದನ್ನೂ ಓದಿ; ತುಂಗಾ ನದಿಯಲ್ಲಿ ಈಜಲು ಹೋಗಿ ಇಬ್ಬರು ಉಪನ್ಯಾಸಕರು ದುರ್ಮರಣ
ಗಂಡ ಬೇಕು, ಗಂಡನ ಜೊತೆಯೇ ಹೆಂಡ್ತಿ ಇರ್ಬೇಕು. ಈ ಕಾನೂನು ಬೇಡ. ವೋಟ್ ಹಾಕಿದ ಮೇಲೆ ಈ ರೀತಿ ನಡೆಸಿಕೊಳ್ಳುತ್ತಾರೆ ಅಂತ ಯಾರು ಊಹೆ ಮಾಡಿರಲಿಲ್ಲ. ದಯವಿಟ್ಟು ಯೋಜನೆಯನ್ನು ಬದಲಾಯಿಸಿ ಎಂದು ಚಿಕ್ಕಮಗಳೂರಿನಲ್ಲಿ ಮಮತಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಉಚಿತ ಸಾರಿಗೆ ಯೋಜನೆಗೆ ಬಗ್ಗೆ ಹೊರನಾಡಿನಲ್ಲಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ನಿವಾಸಿ ಮಮತಾ ಅವರು ಪ್ರತಿಕ್ರಿಯೆ ನೀಡಿದ್ದು, ದುಡ್ಡು ಕೊಟ್ಟು ಬಂದರೂ ಈ ರೀತಿ ನೂಕು-ನುಗ್ಗಲು ಇರುವಂತೆ ಮಾಡಬೇಡಿ. ಹೊರನಾಡಿನಿಂದ ಮಂಗಳೂರಿಗೆ ಹೋಗುವವರನ್ನು ಮಾತ್ರ ಬಸ್ಸಿಗೆ ಹತ್ತಿಸಿದ್ದಾರೆ. ಮಧ್ಯ ಇಳಿಯುವವರನ್ನು ಬಸ್ಸಿನಲ್ಲಿ ಹತ್ತಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ; ಆಗುಂಬೆ ಸಮೀಪ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
ದೊಡ್ಡವರು, ಚಿಕ್ಕವರು ಬರುತ್ತಾರೆ, ಕೈಮುಗಿದು ಕೇಳಿಕೊಳ್ಳುತ್ತೇವೆ ಎದ್ದು ಬಿದ್ದು ಬರುವಂತೆ ಮಾಡಬೇಡಿ. ಸರ್ಕಾರದ ಯೋಜನೆ ಕಾಲು ಭಾಗ ಖುಷಿ ನೀಡಿದೆ, ಗಂಡ-ಮಕ್ಕಳು, ಅತ್ತೆ-ಮಾವ ಎಲ್ಲ ಮನೆಯಲ್ಲೇ ಇದ್ದಾರೆ. ಹೆಂಡತಿ ಮಾತ್ರ ಎಲ್ಲಾ ಕಡೆ ಓಡಾಡಿಕೊಂಡು ಇರೋದಕ್ಕೆ ಆಗುವುದಿಲ್ಲ.
ಒಂದು ಬಸ್ಸಿಗೆ ಇಷ್ಟೇ ಮಹಿಳೆಯರು ಎಂಬ ಕಾನೂನು ಬಲವಾಗಬೇಕು. ಈ ನೂಕು ನುಗ್ಗಲಿನ ಬಸ್ಸಿನಲ್ಲಿ ಮಹಿಳೆಯರು ಹತ್ತುವುದು ಅಸಾಧ್ಯ. ಗಂಡನನ್ನ ಮನೆಯಲ್ಲಿ ಬಿಟ್ಟು ಬಂದಿದ್ದೇವೆ ನಮಗೆ ಸೂಕ್ತ ಭದ್ರತೆ ಇಲ್ಲ. ವಿದ್ಯೆ ಹಾಗೂ ಆಸ್ಪತ್ರೆ ಕಡೆಯೂ ಸ್ವಲ್ಪ ಗಮನ ಹರಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.