Tuesday, November 28, 2023
Homeಇತರೆಮಹಿಳೆಯರು ಒಂಟಿಯಾಗಿರಲು ಬಯಸುತ್ತಾರೆ, ಮಕ್ಕಳಿಗೆ ಜನ್ಮ ನೀಡಲು ಇಷ್ಟ ಪಡೋದಿಲ್ಲ : ಕೋಲಾಹಲ ಸೃಷ್ಟಿಸಿದ ಡಾ....

ಮಹಿಳೆಯರು ಒಂಟಿಯಾಗಿರಲು ಬಯಸುತ್ತಾರೆ, ಮಕ್ಕಳಿಗೆ ಜನ್ಮ ನೀಡಲು ಇಷ್ಟ ಪಡೋದಿಲ್ಲ : ಕೋಲಾಹಲ ಸೃಷ್ಟಿಸಿದ ಡಾ. ಕೆ ಸುಧಾಕರ್ ಹೇಳಿಕೆ

ಬೆಂಗಳೂರು: ರಾಜ್ಯದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಭಾರತದಲ್ಲಿ ‘ಆಧುನಿಕ ಮಹಿಳೆಯರ’ ಬಗ್ಗೆ ವಿವಾದಾತ್ಮಕವಾದ ಹೇಳಿಕೆಯನ್ನು ನೀಡಿದ್ದಾರೆ

ಆಧುನಿಕ ಭಾರತೀಯ ಮಹಿಳೆಯರು ಒಂಟಿಯಾಗಿರಲು ಬಯಸುತ್ತಾರೆ. ಜನ್ಮ ನೀಡಲು ಇಷ್ಟಪಡುವುದಿಲ್ಲ ಎಂದು ಹೇಳಿರುವಂತ ಡಾ. ಕೆ. ಸುಧಾಕರ್ ರವರ ಹೇಳಿಕೆ ಜನರಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ.

ಬೆಂಗಳೂರಿನಲ್ಲಿ ಭಾನುವಾರ ನಡೆದ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) 25ನೇ ಘಟಿಕೋತ್ಸವದಲ್ಲಿ ಮಾತನಾಡಿದ ಸಚಿವರು, ಇಂದು ಆಧುನಿಕ ಭಾರತೀಯ ಮಹಿಳೆಯರು ಅವಿವಾಹಿತರಾಗಿರಲು ಬಯಸುತ್ತಾರೆ ಮತ್ತು ಅವರು ಮದುವೆಯಾದರೂ ಅವರು ಮಕ್ಕಳಿಗೆ ಜನ್ಮ ನೀಡಲು ಬಯಸುವುದಿಲ್ಲ. ಅವರು ಬಾಡಿಗೆ ತಾಯ್ತನವನ್ನು ಸಹ ಬಯಸುತ್ತಾರೆ. ಮಹಿಳೆಯರಲ್ಲಿ ಈ ರೀತಿಯ ಮಾದರಿ ಬದಲಾವಣೆ ಒಳ್ಳೆಯದಲ್ಲ ಎಂದು ಅವರು ಹೇಳಿದರು.

ನಂತರ ‘ಪಾಶ್ಚಿಮಾತ್ಯ ಪ್ರಭಾವ’ದ ಬಗ್ಗೆ ಪ್ರತಿಕ್ರಿಯಿಸುತ್ತಾ, ಇಂದಿನ ಪೀಳಿಗೆಯು ತಮ್ಮ ಪೋಷಕರು ತಮ್ಮೊಂದಿಗೆ ಇರಲು ಎಂದಿಗೂ ಬಯಸುವುದಿಲ್ಲ ಅವರ ಅಜ್ಜಿಯರ ಬಗ್ಗೆಯೂ ಮರೆತುಬಿಡುತ್ತಾರೆ ಎಂದು ಸಚಿವರು ಹೇಳಿದರು.

Most Popular

Recent Comments