Monday, December 11, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು/ಶೃಂಗೇರಿ: ಮಲೆನಾಡಿನಲ್ಲಿ ಗಾಳಿ ಮಳೆಯ ಆರ್ಭಟ: ಧರೆಗುರುಳಿದ ವಿದ್ಯುತ್ ಕಂಬ, ಮನೆ ಮೇಲೆ ಬಿದ್ದ ಮರ

ಚಿಕ್ಕಮಗಳೂರು/ಶೃಂಗೇರಿ: ಮಲೆನಾಡಿನಲ್ಲಿ ಗಾಳಿ ಮಳೆಯ ಆರ್ಭಟ: ಧರೆಗುರುಳಿದ ವಿದ್ಯುತ್ ಕಂಬ, ಮನೆ ಮೇಲೆ ಬಿದ್ದ ಮರ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕಳೆದ ಒಂದು ತಿಂಗಳಿನಿಂದ ಬಾರದ ಮಳೆರಾಯ ಇದೀಗಾ ಚುರುಕು ಪಡೆದುಕೊಂಡಿದ್ದು, ಅನ್ನದಾತನ ಮೊಗದಲ್ಲಿ ಮಂದಹಾಸ ಒಂದೆಡೆಯಾದರೆ, ಗಾಳಿ-ಮಳೆಯಿಂದಾಗಿ ಹಲವು ಕಡೆ ನಾನಾ ಅನಾಹುತ ಸಂಭವಿಸಿದೆ. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಕೂಡ ಘೋಷಿಸಿದೆ.

ಇದನ್ನೂ ಓದಿ; ಧರೆಗುರುಳಿದ ಬೃಹತ್ ಮರ, ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಟಿಪ್ಪರ್

ಮೆಸ್ಕಾಂ ನೌಕರರನ್ನ ಸೈನಿಕರೆಂದು ಕರೆದ ಶೃಂಗೇರಿ ಜನರು;
ನಿನ್ನೆ ಸಂಜೆ ಸುರಿದ ಮಳೆಯಿಂದಾಗಿ ಮುಂಡಗೋಡು ಗ್ರಾಮದಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಜಯಪುರ, ಶೃಂಗೇರಿ ವಿದ್ಯುತ್ ಕಡಿತವಾಗಿತ್ತು. ಈ ನಿಟ್ಟಿನಲ್ಲಿ ಮಳೆ ಮಧ್ಯೆ 4 ಗಂಟೆ ಬಳಿಕ ಸಮಸ್ಯೆ ಪತ್ತೆಯಾದ ನಂತರ ರಾತ್ರಿ 11 ಗಂಟೆಗೆ ಟಾರ್ಚ್ ಬೆಳಕಿನಲ್ಲಿ ವಿದ್ಯುತ್ ಕಂಬ ಹತ್ತಿ ಲೈನ್ ದುರಸ್ಥಿ ಮಾಡಿ ಜಯಪುರ, ಶೃಂಗೇರಿ ತಾಲ್ಲೂಕಿನ ಜನರಿಗೆ ಬೆಳಕು ನೀಡಿದ ಕಾರಣದಿಂದಾಗಿ ಮೆಸ್ಕಾಂ ನೌಕರರನ್ನ ಸೈನಿಕರೆಂದು ಕರೆದ ಶೃಂಗೇರಿ, ಜಯಪುರ ನಿವಾಸಿಗಳು.


ಇತ್ತೀಚಿನ ಜನಪ್ರಿಯ ಸುದ್ದಿಗಳು

ಬಿರುಗಾಳಿ ಸಹಿತ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು:
ಇನ್ನು ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ತರುವೆ, ಬಣಕಲ್, ಬಾಳೂರು, ದೇವರಮನೆ, ಗುತ್ತಿ, ಕುಂದೂರು, ಮತ್ತಿಕಟ್ಟೆ, ಜಾಣಿಗೆ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿದೆ. ಮಳೆ ಮಧ್ಯೆಯೇ ಕಂಬಗಳನ್ನ ದುರಸ್ಥಿ ಮಾಡುತ್ತಿರುವ ಮೆಸ್ಕಾಂ ಸಿಬ್ಬಂದಿಗಳು.

ಇದನ್ನೂ ಓದಿ; ಬಾರೀ ಮಳೆಯ ಎಚ್ಚರಿಕೆ: ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಹೈ ಅಲರ್ಟ್ ಘೋಷಣೆ

ವಿದ್ಯುತ್ ಕಂಬ ಬಿದ್ದ ಪರಿಣಾಮ ಹಳ್ಳಕ್ಕೆ ಬಿದ್ದ ವಿದ್ಯುತ್ ತಂತಿಗಳು:
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನಲ್ಲಿ ವಿಪರೀತ ಬಿರುಗಾಳಿ-ಮಳೆಗೆ ಮನೆ ಮೇಲೆ ಬೃಹತ್ ಮರ ಉರುಳಿ ಬಿದ್ದು, ಮನೆಯಲ್ಲಿದ್ದ ದಿನಸಿ ಪದಾರ್ಥಗಳು ನಾಶವಾಗಿದೆ ಸದ್ಯ ಅಡಿಗೆ ಮನೆಯಲ್ಲಿದ್ದ ನಾಗರತ್ನಮ್ಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳಸ ತಾಲೂಕಿನ ಹೊರನಾಡಿನಲ್ಲಿ ಬಿರುಗಾಳಿ-ಮಳೆಗೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಹಳ್ಳಕ್ಕೆ ವಿದ್ಯುತ್ ತಂತಿಗಳು ಬಿದ್ದಿದೆ. ವಿಷಯ ತಿಳಿದ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ತೆರವು ಕಾರ್ಯ ಮಾಡಲಾಗಿದೆ.

ಬಾರೀ ಮಳೆಯ ಎಚ್ಚರಿಕೆ: ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಹೈ ಅಲರ್ಟ್ ಘೋಷಣೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಜಿಲ್ಲಾಡಳಿತ ಮುಂದಿನ 3 ದಿನ ಭಾರೀ ಮಳೆ ಸುರಿಯುವ ಎಚ್ಚರಿಕೆ ನೀಡಿದೆ. ಜು. 5, 6 ಹಾಗೂ 7 ರಂದು ಹೈ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ 3 ದಿನ 115 ರಿಂದ 204 ಮಿ.ಮೀ. ಮಳೆ ಸಾಧ್ಯತೆಯಿದ್ದು ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕರು, ಪ್ರವಾಸಿಗರು ನದಿಗಳಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಸಾರ್ವಜನಿಕರು, ವಾಹನ ಸವಾರರು ವಿದ್ಯುತ್ ಕಂಬ, ಮರಗಳ ಬಳಿ ನಿಲ್ಲದಂತೆ ಸೂಚನೆ ನೀಡಲಾಗಿದೆ. ಮಕ್ಕಳು ನದಿ, ಕೆರೆ, ತಗ್ಗು ಪ್ರದೇಶಗಳ ಬಳಿ ಹೋಗದಂತೆ ಪೋಷಕರು, ಶಾಲಾ ಮುಖ್ಯಸ್ಥರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಹಿರಿಯರು ತಮ್ಮ ಮನೆಗಳಿಂದ ಹೊರಬಾರದಂತೆ, ಅನಿವಾರ್ಯವಾದಲ್ಲಿ ಮನೆ ಸದಸ್ಯರ ಜೊತೆ ಹೊರ ಹೋಗುವಂತೆ ಜಿಲ್ಲಾಡಳಿತ ಮನವಿ ಮಾಡಿದ್ದು, ಸಾರ್ವಜನಿಕರು ಜಿಲ್ಲಾಡಳಿತದ ನಿರ್ದೇಶನವನ್ನು ಪಾಲಿಸುವಂತೆ ತಿಳಿಸಲಾಗಿದೆ.

Most Popular

Recent Comments