Tuesday, November 28, 2023
Homeಮಲೆನಾಡುಕೊಡಗುನಿಮ್ಮ ಜಿಲ್ಲೆಯಿಂದ ಯಾರೆಲ್ಲ ಸಚಿವ ಸಂಪುಟಕ್ಕೆ ಸಂಭಾವ್ಯರು?

ನಿಮ್ಮ ಜಿಲ್ಲೆಯಿಂದ ಯಾರೆಲ್ಲ ಸಚಿವ ಸಂಪುಟಕ್ಕೆ ಸಂಭಾವ್ಯರು?

ಬೆಂಗಳೂರು: (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿ ಹುದ್ದೆಗಾಗಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಪೈಪೋಟಿ ಶುರುವಾಗಿದೆ. ಈ ನಡುವೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ಹಲವರು ಲಾಭಿ ನಡೆಸುತ್ತಿದ್ದಾರೆ.

ಇದನ್ನೂ ಓದಿ; ಹಣಕ್ಕಾಗಿ ಯುವತಿಯ ಕಿಡ್ನ್ಯಾಪ್

ಇದನ್ನೂ ಓದಿ; ಅನಾಥ ಶವದ ಪಕ್ಕದಲ್ಲಿದ್ದ ಬ್ಯಾಗಿನಲ್ಲಿ 6.65 ಲಕ್ಷ ಪತ್ತೆ

ಹೌದು, ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಪೈಪೋಟಿ ಶುರುವಾಗಿದ್ದು, ಸಿಎಂ ಆಯ್ಕೆ ದೆಹಲಿ ಅಂಗಳ ತಲುಪಿದ್ದು, ಬಹುತೇಕ ಇಂದು ಕಾಂಗ್ರೆಸ್‌ ಹೈಕಮಾಂಡ್ ಅಧಿಕೃತವಾಗಿ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ಘೋಷಣೆ ಮಾಡುವ ಸಾಧ್ಯತೆ ಇದೆ.

ಬಹುಮತ ಪಡೆದ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನದ ಜೊತೆಗೆ ಸಚಿವ ಸ್ಥಾನದ ಲಾಭಿಯೂ ಜೋರಾಗಿ ನಡೆಯುತ್ತಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನೆಗಳಿಗೆ ಸಚಿವ ಸ್ಥಾನದ ಆಕಾಂಕ್ಷಿಗಳು ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ.

ನೂತನ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಗೆ ಸಂಬಂಧಿಸಿದಂತೆ ಹೈಕಮಾಂಡ್ ಕೆಲ ಸೂತ್ರಗಳನ್ನು ಸಿದ್ಧಪಡಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಸುರ್ಜೆವಾಲಾ, ಕೆ.ಸಿ. ವೇಣುಗೋಪಾಲ್‌ ಹಾಗೂ ಚುನಾವಣಾ ಕಾರ್ಯತಂತ್ರ ಉಸ್ತುವಾರಿ ಸುನಿಲ್ ಕನುಗೋಲು ಸೇರಿ ಸಚಿವರ ಶಾರ್ಟ್ ಲಿಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

ಇಲ್ಲಿದೆ ಸಂಭಾವ್ಯ ಸಚಿವರ ಪಟ್ಟಿ

ಚಿಕ್ಕಮಗಳೂರು ಸಂಭಾವ್ಯ ಸಚಿವರು?:
ಚಿಕ್ಕಮಗಳೂರು ಜಿಲ್ಲೆಯಿಂದ ಟಿ.ಡಿ. ರಾಜೇಗೌಡ ಒಬ್ಬರದ್ದೇ ಹೆಸರು ಪಟ್ಟಿಯಲ್ಲಿದೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಶಿವಮೊಗ್ಗ ಸಂಭಾವ್ಯ ಸಚಿವರು?:
ಶಿವಮೊಗ್ಗ ಜಿಲ್ಲೆಯಿಂದ ಮಧುಬಂಗಾರಪ್ಪ ಹಾಗೂ ಬಿ.ಕೆ. ಸಂಗಮೇಶ್ ಅವರ ಹೆಸರು ಉಲ್ಲೇಖಿಸಲಾಗಿದೆ.

ಕೊಡಗು ಸಂಭಾವ್ಯ ಸಚಿವರು?:
ಕೊಡಗು ಜಿಲ್ಲೆಯಿಂದಲೂ ಕೂಡ ಎ.ಎಸ್ ಪೊನ್ನಣ್ಣ ಅವರ ಒಬ್ಬರದ್ದೇ ಹೆಸರು ಸಂಭಾವ್ಯ ಸಚಿವರ ಪಟ್ಟಿಯಲ್ಲಿದೆ.

ಇದನ್ನೂ ಓದಿ; ಕಾರ್ಮಿಕನ ಮೇಲೆ ಕಾಡಾನೆ ದಾಳಿ; ಗಂಭೀರ ಗಾಯ

ಸೋಲಿನ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಸಿ.ಟಿ.ರವಿ

ಚಿಕ್ಕಮಗಳೂರು; 20 ವರ್ಷಗಳಿಂದ ಶಾಸಕರಾಗಿದ್ದು ಮೊದಲ ಬಾರಿಗೆ ಸೋಲಿನ ಕಹಿ ಕಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜನಾದೇಶಕ್ಕೆ ತಲೆಬಾಗುತ್ತೇನೆ. ಇದು ಸಿದ್ಧಾಂತದ ಸೋಲಲ್ಲ. ವೈಯಕ್ತಿಕ ಸೋಲು ಎಂದು ತಿಳಿಸಿದ್ದಾರೆ.

ಆರಂಭದಿಂದಲೂ ತೀವ್ರ ಕುತೂಹಲ ಮೂಡಿಸಿದ್ದ ಫಲಿತಾಂಶ ಅಂತಿಮವಾಗಿ ಸಿ.ಟಿ.ರವಿ ಸೋಲು ಎಂದು ರಿಸಲ್ಟ್ ಹೊರಬರುತ್ತಿದ್ದಂತೆ ಶಾಸಕ ಸಿ.ಟಿ.ರವಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕರ್ತರಿಗೆ ಧೈರ್ಯ ತುಂಬಿದ್ದಾರೆ. ಬಿಜೆಪಿ ಭದ್ರಕೋಟೆಯಾಗಿದ್ದ ಚಿಕ್ಕಮಗಳೂರು 1999ರಲ್ಲೂ ಜಿಲ್ಲೆಯಲ್ಲಿ ಐದಕ್ಕೆ ಐದು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದವು. ಆ ಬಳಿಕ ಈಗ ಮತ್ತೆ ಐದಕ್ಕೆ ಐದು ಕ್ಷೇತ್ರಗಳು ಕೈ ಪಾಲಾಗಿವೆ.

ಇದನ್ನೂ ಓದಿ; ಜ್ಯೋತಿಷಿ ಮಾತು ಕೇಳಿ ಯುವಕನ ಕೈ-ಕಾಲು ಕತ್ತರಿಸಿದ್ದ ಚಿಕ್ಕಪ್ಪ?

ಸೋಲಿನ ಬಗ್ಗೆ ಪ್ರತಿಕ್ತಿಯೆ ಕೊಟ್ಟ ಸಿ.ಟಿ ರವಿ:
ಫಲಿತಾಂಶ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ ರವಿ, ಕಳೆದ ಬಾರಿಗಿಂತ 9 ಸಾವಿರ ಓಟು ಜಾಸ್ತಿ ಬಂದಿದೆ. ಇದು ಒಂದು ಕಾರಣವಲ್ಲ, ಹಲವು ಕಾರಣಗಳಿವೆ.

ಜೆಡಿಎಸ್-ಕಾಂಗ್ರೇಸ್ ಒಂದಾಗಿ ಕೆಲಸ ಮಾಡಿತ್ತು, ಕಳೆದ ಸಾರಿ ಜೆಡಿಎಸ್ 38 ಸಾವಿರ ಈ ಬಾರಿ 1700 ತಗೊಂಡಿದೆ. ಹಾಗೆ ಜೆಡಿಎಸ್ ಮುಖಂಡರುಗಳು ನೇರವಾಗಿ ಕಾಂಗ್ರೆಸ್‌ ಗೆ ಬೆಂಬಲಿಸಿದ್ದರು. ನನ್ನನ್ನು ಸೋಲಿಸಬೇಕೆಂದು ಟಾರ್ಗೆಟ್ ಮಾಡಿದರು. ಹಲವು ನಾಯಕರುಗಳ ಕೆಂಕಣಿಗೂ ಗುರಿಯಾಗಿದೆ.

ನಾನು ಪಕ್ಷದ ಕಾರಣಕ್ಕೆ, ಸಿದ್ಧಾಂತದ ಕಾರಣಕ್ಕೆ, ಪಕ್ಷದ ಪರವಾಗಿ ಸಮರ್ಥನೆ ಮಾಡಿಕೊಳ್ಳುತ್ತಾ ಇದ್ದ ಕಾರಣಕ್ಕಾಗಿ, ಮತ್ತೆ ಸಿದ್ಧಾಂತದ ಕಾರಣಕ್ಕಾಗಿ ಕೆಂಕಣಿಗೂ ಗುರಿಯಾಗಿದ್ದೆ. ಆದರೆ ಸೋತ ಕ್ಷಣದಿಂದ ಜನ ನಮ್ಮ ಮನೆಗೆ ಬಂದು ಬೇಸರ ವ್ಯಕ್ತಪಡಿಸುತ್ತಾ ಇದ್ದರೆ. ಆ ಕ್ಷಣಕ್ಕೆ ಚಿಕ್ಕಮಗಳೂರು ಜಿಲ್ಲೆಗೆ, ಜನತೆಗೆ, ನಮಗೆ ನಾವೇ ತೊಂದರೆ ಮಾಡಿಕೊಂಡಿದ್ದೇವೆ.

ಇದನ್ನೂ ಓದಿ; ಸರ್ಕಾರಿ ನೌಕರನಿಂದ ಮರ್ಕಲ್ ಗ್ರಾಮ ಪಂಚಾಯಿತಿ ಸಮೀಪ ಅಕ್ರಮ ಕಟ್ಟಡ ನಿರ್ಮಾಣ ಆರೋಪ, ಶಿಸ್ತು ಕ್ರಮಕ್ಕೆ 

ಆಗಿರುವ ತಪ್ಪುಗಳನ್ನ ಸರಿಪಡಿಸಿಕೊಳ್ಳುವ ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಸಿ,ಟಿ ರವಿ ತಿಳಿಸಿದರು.

ಬೇಸರ ವ್ಯಕ್ತ ಪಡಿಸಿದ ಬೆಂಬಲಿಗರಿಗೆ ಸಮಾಧನ ಪಡಿಸಿದ ಸಿ.ಟಿ ರವಿ:
ಫಲಿತಾಂಶ ಹೊರಬೀಳುತ್ತಿದ್ದಂತೆ ಸಿ.ಟಿ ರವಿ ನಿವಾಸಕ್ಕೆ ಹಲವು ಬೆಂಬಲಿಗರು ಬಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಇದಕ್ಕೆ ಸಿ.ಟಿ ರವಿ ಮನೆ ಬಳಿ ಬಂದು ಬೇಸರ ವ್ಯಕ್ತ ಪಡಿಸಿದ್ದ ಬೆಂಬಲಿಗರಿಗೆ ಧೈರ್ಯ ತುಂಬಿದರು.

Most Popular

Recent Comments