ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಕುರಿತಂತೆ ತಪ್ಪು ಸಂದೇಶಗಳನ್ನು ಭಿತ್ತರಿಸುವಂತಹ ವಾಟ್ಸ್ಆಪ್ ಸಂದೇಶ, ಕರೆಗಳ ಕುರಿತು ಎಚ್ಚರಿಕೆಯಿಂದ ಇರುವಂತೆ ಭಾರತೀಯ ಕಾನೂನು ಆಯೋಗ ಸಾರ್ವಜನಿಕರಿಗೆ ತಿಳಿಸಿದೆ.
ಇದನ್ನೂ ಓದಿ; ಕೊಪ್ಪ: ಮೇಯುವಾಗ ಆಯಾ ತಪ್ಪಿ 50 ಅಡಿ ಆಳದ ಬಾವಿಗೆ ಬಿದ್ದ ಹಸು
ಆಯೋಗ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಾಟ್ಸ್ಆಪ್ ಸಂದೇಶ ಅಥವಾ ಕರೆಗಳಿಗೆ ಸಂಬಂಧಿಸಿದಂತೆ ಆಯೋಗಕ್ಕೆ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ; ಜಯಪುರ: ಸಹಕಾರ ಸಂಘದ ಕರ್ತವ್ಯ ನಿರತ ಕಾವಲುಗಾರನ ಮೇಲೆ ಹಲ್ಲೆ; ಆರೋಪಿಗಳಿಬ್ಬರ ಬಂಧನ
ಕೆಲವು ದೂರವಾಣಿ ಸಂಖ್ಯೆಗಳು ಸಂದೇಶಗಳಲ್ಲಿ ರವಾನೆಯಾಗಿ, ಅದು ಭಾರತೀಯ ಕಾನೂನು ಆಯೋಗದ ಸಂಖ್ಯೆ ಎಂದು ಹೇಳಲಾಗಿದೆ. ಆದರೆ ಆಯೋಗ ಆ ರೀತಿ ಯಾವುದೇ ಕರೆಗಳನ್ನು ಅಥವಾ ಸಂದೇಶಗಳನ್ನು ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಭಾರತೀಯ ಕಾನೂನು ಆಯೋಗ ಖಚಿತ ಮಾಹಿತಿಗಾಗಿ ಸಾರ್ವಜನಿಕರು ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ ಎಂದು ಹೇಳಿದೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- debit card ಇಲ್ಲದೆಯೇ atmನಿಂದ ಹಣವನ್ನು ಸುಲಭವಾಗಿ ಪಡೆಯಬಹುದು
- ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಸೋರುತಿರುವ ಶಾಲೆ ಮಳಿಗೆ
- amarnath yatra: ಅಮರನಾಥ ಯಾತ್ರೆಗೆ ತೆರಳಿದ್ದ ಕಾಫಿನಾಡಿಗರು ಸೇಫ್
amarnath yatra: ಅಮರನಾಥ ಯಾತ್ರೆಗೆ ತೆರಳಿದ್ದ ಕಾಫಿನಾಡಿಗರು ಸೇಫ್
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಳೆ ಆರ್ಭಟ ಹೆಚ್ಚಾದ ಪರಿಣಾಮ ಅಮರನಾಥದಲ್ಲಿ ರಸ್ತೆ ಸಂಪರ್ಕ ಬಂದ್ ಆಗಿದೆ. ಇದರಿಂದ ಕರ್ನಾಟದಿಂದ ತೆರಳಿದ್ದ ಹಲವು ಜಿಲ್ಲೆಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪೈಕಿ ಯಾತ್ರೆಗೆ ಹೋಗಿದ್ದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಮೂಲದ ಪ್ರವಾಸಿಗರು ಯಾವುದೇ ತೊಂದರೆ ಇಲ್ಲದೆ ಸೇಫ್ ಆಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಚಿಕ್ಕಮಗಳೂರಿನಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಶ್ರೀನಿವಾಸ್, ಮಣಿ, ಭರತ್, ಚಂದ್ರಶೇಖರ್, ಮನೋಜ್ ಎಂಬ ಐವರು ಸುರಕ್ಷಿತವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಳೆದ ವಾರ ಯಾತ್ರೆಗೆ ತೆರಳಿದ್ದ ಈ ಐವರ ತಂಡ ಇದೀಗ ಶೇಷನಾಗ್ ಪ್ರದೇಶದಲ್ಲಿದ್ದಾರೆ ಎಂದು ತಿಳಿದುಬಂದಿದೆ.