Sunday, October 1, 2023
Homeಮಲೆನಾಡುಚಿಕ್ಕಮಗಳೂರುಕಳಸ: ಮತದಾನಕ್ಕೆ 1 ಗಂಟೆ ಬಾಕಿ ಇರುವಾಗಲೇ ಕೈಕೊಟ್ಟ ಮತಯಂತ್ರ: ಮತದಾರರ ಆಕ್ರೋಶ

ಕಳಸ: ಮತದಾನಕ್ಕೆ 1 ಗಂಟೆ ಬಾಕಿ ಇರುವಾಗಲೇ ಕೈಕೊಟ್ಟ ಮತಯಂತ್ರ: ಮತದಾರರ ಆಕ್ರೋಶ

ಕಳಸ: (ನ್ಯೂಸ್ ಮಲ್ನಾಡ್ ವರದಿ) ಮತದಾನಕ್ಕೆ ಇನ್ನೊಂದು ಗಂಟೆ ಬಾಕಿ ಇದೆ. ಜಿಲ್ಲೆಯ ಎಲ್ಲೆಡೆ ಚುರುಕಿನಿಂದ ಮತದಾನ ನಡೆಯುತ್ತಿದೆ. ಈ ನಡುವೆ ಒಂದು ಗಂಟೆ ಬಾಕಿಗೆ ಮುನ್ನವೇ ಹೊರನಾಡಿನಲ್ಲಿ ಮತಯಂತ್ರ ಕೈಕೊಟ್ಟಿದೆ. ಹೀಗಾಗಿ ಮತದಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ; ಮದ್ಯ ಸೇವಿಸಿ ಚುನಾವಣಾ ಕರ್ತವ್ಯಕ್ಕೆ ಹಾಜರು: ಆರೋಪ!

ಇದನ್ನೂ ಓದಿ; ಶಾಸಕರು ಅನುದಾನ ತರದೇ ತಂದ ಅನುದಾನಗಳನ್ನು ತನ್ನ ಬೆಂಬಲಿಗರಿಗೆ ನೀಡಿದ್ದಾರೆ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡು ಗ್ರಾಮದಲ್ಲಿ ಇಂದು ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬೆಳಿಗ್ಗೆಯಿಂದ ಚುರುಕಿನಿಂದ ನಡೆಯುತ್ತಿತ್ತು. ಆದರೆ ಮತದಾನಕ್ಕೆ ಇನ್ನೊಂದು ಗಂಟೆ ಬಾಕಿ ಇರುವಾಗಲೇ ಮತಯಂತ್ರ ಕೈಕೊಟ್ಟು, ಮತದಾನ ಸ್ಥಗಿತಗೊಂಡಿದೆ.

ಮತಯಂತ್ರ ಕೈಕೊಟ್ಟ ಕಾರಣ, ಮತದಾನ ಮಾಡಲು ಸಾಲುಗಟ್ಟಿ ನಿಂತಿದ್ದಂತ ಜನರು, ಚುನಾವಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಇನ್ನೊಂದು ಗಂಟೆ ಬಾಕಿ ಇರುವಾಗಲೇ ಮತಯಂತ್ರ ಕೈಕೊಟ್ಟಿದ್ದಕ್ಕೆ ಆಕ್ರೋಶವನ್ನು ಹೊರ ಹಾಕಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಇದೀಗ ಮತಯಂತ್ರವನ್ನು ಬದಲಾವಣೆ ಮಾಡುವಂತ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಗಳು ನಿರತರಾಗಿದ್ದಾರೆ. ಮತಯಂತ್ರ ಪುನರ್ ಸ್ಥಾಪಿಸಿದ ಬಳಿ ಮತ್ತೆ ಮತದಾನ ಪ್ರಕ್ರಿಯೆಯನ್ನು ಹೊರನಾಡು ಗ್ರಾಮದಲ್ಲಿನ ಶಾಲೆಯಲ್ಲಿ ಆರಂಭಿಸುವುದಾಗಿ ತಿಳಿದು ಬಂದಿದೆ.

ಚುನಾವಣಾ ಕರ್ತವ್ಯಕ್ಕೆ ಲೋಪ; ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಮಾನತ್ತು

ಶೃಂಗೇರಿ: ಚುನಾವಣಾ ಕರ್ತವ್ಯಕ್ಕೆ ಲೋಪವನ್ನುಂಟು ಮಾಡಿ, ಚುನಾವಣಾ ಕಾರ್ಯಕ್ಕೆ ತೊಂದರೆಯುಂಟು ಮಾಡಿದ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಯನ್ನು ಅಮಾನತ್ತುಗೊಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ನಡೆದಿದೆ. ಪುಟ್ಟೇಗೌಡ ಅಮಾನತ್ತು ಆದ ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ.

ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ತಾಲೂಕು ಕಾರ್ಯ ನಿರ್ವಾಹಣಾಧಿಕಾರಿ ಪುಟ್ಟೇಗೌಡ ಅವರಿಗೆ ನಿಯೋಜಿಸಿದ್ದ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡದೇ ಚುನಾವಣಾ ಕೆಲಸಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿ ಕರ್ತವ್ಯ ಲೋಪ ಮಾಡಿದ್ದಾರೆ ಮತ್ತು ಮಹಿಳಾ ಸಿಬ್ಬಂದಿಗಳ ಮುಂದೆ ಅವಾಚ್ಯ ಪದಗಳನ್ನು ಬಳಸಿ ಅವರುಗಳಿಗೆ ಮುಜುಗರವಾಗುವಂತೆ ನಡೆದುಕೊಂಡಿದ್ದು, ಚುನಾವಣಾ ಕಾರ್ಯಕ್ಕೆ ತೊಂದರೆಯುಂಟು ಮಾಡಿದ್ದಾರೆ.

ಇದನ್ನೂ ಓದಿ; ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ

ಪ್ರಜಾಪ್ರಾತಿನಿಧ್ಯ ಕಾಯ್ದೆ 1951 ರ ಕಲಂ 28 (ಎ) ಮತ್ತು 136 ರಡಿ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರು ಆದೇಶ ಹೊರಡಿಸಿದ್ದಾರೆ.

Most Popular

Recent Comments