Sunday, October 1, 2023
Homeಮಲೆನಾಡುಚಿಕ್ಕಮಗಳೂರುಮೂಲಭೂತ ಸೌಕರ್ಯ, ಮತದಾನ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

ಮೂಲಭೂತ ಸೌಕರ್ಯ, ಮತದಾನ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

ಕೊಪ್ಪ/ಹರಿಹರಪುರ: (ನ್ಯೂಸ್ ಮಲ್ನಾಡ್ ವರದಿ) ಕಳೆದ 30 ವರ್ಷಗಳಿಂದ ಗ್ರಾಮದಲ್ಲಿ ಅಭಿವೃದ್ಧಿಯಾಗದೆ, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿರುವುದರಿಂದ ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ಯಡದಂಟೆ, ಕೆಳದೇವರ ಮನೆಯಲ್ಲಿ ನಡೆದಿದೆ.

ಇದನ್ನೂ ಓದಿ; ಟ್ರ‍್ಯಾಕ್ಟರ್‌ನ ಹಿಂಬದಿ ಡಾಬರ್ ರಾಡ್‌ಗೆ ತಲೆ ತಾಗಿ ಒಂದೂವರೆ ವರ್ಷದ ಮಗು ಸಾವು

ಇದನ್ನೂ ಓದಿ; ಕಾಂಗ್ರೆಸ್ ಮುಖಂಡನ ತಾಯಿ ನೇಣು ಬಿಗಿದು ಆತ್ಮಹತ್ಯೆ

ದೇವರಮನೆಯಿಂದ ಮತ್ವಾನಿಗೆ ಸಂಪರ್ಕ ಕಲ್ಪಿಸುವ 3 ಕಿ.ಮೀ ಉದ್ದದ ರಸ್ತೆಯನ್ನು ಸರ್ವಋತು ರಸ್ತೆಯಾಗಿ ಮಾರ್ಪಾಡಿಸಲು ಮನವಿ ಸಲ್ಲಿಸುತ್ತಾ ಬಂದಿದ್ದಾರೆ.

ಇನ್ನೂ ಈಗಿರುವ ಟ್ರಾನ್ಸ್ ಫಾರ್ಮ್ ನಿಂದ ಬೆಳೆ ಹಾಳಾಗುತ್ತಿದ್ದು ಕೂಡಲೆ ಹೆಚ್ಚುವರಿ ಟ್ರಾನ್ಸ್ ಫಾರ್ಮ್ ಅನ್ನು ಅಳವಡಿಸುವಂತೆ ಹಾಗೂ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದ್ದು ಇದರಿಂದಾಗಿ ಊರಿಗೆ ತುಂಗಾ ನದಿಯಿಂದ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಈ ಸಂದರ್ಭದಲ್ಲಿ ರಫೀಕ್, ಸಮೀರ್, ಮಾನಪ್ಪ, ಸುಧಾಕರ ಶೆಟ್ಟಿ, ಮಹೇಶ್ ಭಟ್, ಸುಬ್ರಮಣ್ಯ, ಶಿವಶಂಕರ್ ಮುಂತಾದವರು ಇದ್ದರು.

Most Popular

Recent Comments