Monday, December 11, 2023
Homeಮಲೆನಾಡುಚಿಕ್ಕಮಗಳೂರುಚಾರ್ಮಾಡಿ ಘಾಟ್ ನಲ್ಲಿ ಭೂಕುಸಿತ ಎಂದು ವಿಡಿಯೋ ವೈರಲ್ | ಘಾಟಿಯಲ್ಲಿ ನಿಜವಾಗಿಯೂ ಭೂಕುಸಿತ ಆಗಿದೆಯಾ?

ಚಾರ್ಮಾಡಿ ಘಾಟ್ ನಲ್ಲಿ ಭೂಕುಸಿತ ಎಂದು ವಿಡಿಯೋ ವೈರಲ್ | ಘಾಟಿಯಲ್ಲಿ ನಿಜವಾಗಿಯೂ ಭೂಕುಸಿತ ಆಗಿದೆಯಾ?

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಾರ್ಮಾಡಿ ಘಾಟ್ ನಲ್ಲಿ ಭೂಕುಸಿತ ಸಂಭವಿಸಿದೆ ಎಂದು ತೋರಿಸುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ವೀಡಿಯೊದಲ್ಲಿ ಇರುವ ದೃಶ್ಯ ಹಾಗೂ ಚಾರ್ಮಾಡಿ ಘಾಟ್ ನಲ್ಲಿ ಯಾವುದೇ ಭೂಕುಸಿತ ಸಂಭವಿಸಿಲ್ಲ ಹಾಗಾದರೆ ಈ ದೃಶ್ಯದ ಸತ್ಯಾಸತ್ಯತೆ ಏನು?, ಈ ವೀಡಿಯೊದಲ್ಲಿ ಇರುವ ಭೂಕುಸಿತ ಸಂಭವಿಸಿದ ಸ್ಥಳ ಯಾವುದು ಎಂದು ನೋಡಣ.

ಇದನ್ನೂ ಓದಿ; ಗಮನಿಸಿ: ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಹೀಗಿದೆ 07-07-2023

ನ್ಯೂಸ್ ಮಲ್ನಾಡ್ ಫ್ಯಾಕ್ಟ್ ಚೆಕ್:
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೊ 2 ವರ್ಷದ ಹಿಂದೆ ಅರುಣಾಚಲ ಪ್ರದೇಶ ರಾಜ್ಯದ ರೋಯಿಂಗ್-ಹುನ್ಲಿ ರಸ್ತೆಯಲ್ಲಿ ನಡೆದ ಘಟನೆಯಾಗಿದೆ. ಈ ವಿಡಿಯೋ ಕಳೆದ ವರ್ಷ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೇ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಜೂನ್ 23, 2022 ರಂದು ಸಿಲ್ಚಾರ್ -ಮಿಜೋರಾಂ ಹೆದ್ದಾರಿ (NH 306) ಯಲ್ಲಿ ಭೂಕುಸಿತದ ದೃಶ್ಯಾವಳಿ ಎಂದು ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೋದಲ್ಲಿನ ಭೂಪ್ರದೇಶ ಬಹುತೇಕ ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಪ್ರದೇಶವನ್ನು ಹೋಲುವಂತಿದೆ. ಹೀಗಾಗಿ ಕೆಲವರು ಇದನ್ನು ಚಾರ್ಮಾಡಿ ಘಾಟ್ ಎಂದು ವೈರಲ್ ಮಾಡಿದ್ದರು.

ಇದನ್ನೂ ಓದಿ; ಚಿಕ್ಕಮಗಳೂರು: ಪತಿಯ ಪ್ರಿಯತಮೆಯಿಂದಲೇ ನಡೀತಾ ಪತ್ನಿಯ ಭೀಕರ ಕೂಲೆ?

ಆದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವೀಡಿಯೋ ಅರುಣಾಚಲ ಪ್ರದೇಶದ ರೋಯಿಂಗ್-ಹುನ್ಲಿ ರಸ್ತೆಯಲ್ಲಿ ನಡೆದ ಘಟನೆಯಾಗಿದೆ. (ವೈರಲ್ ಆದ ನಕಲಿ ವೀಡಿಯೋ ನೋಡಿ)


ಇತ್ತೀಚಿನ ಜನಪ್ರಿಯ ಸುದ್ದಿಗಳು

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಭೂಕುಸಿತದ ವೀಡಿಯೋ ಚಾರ್ಮಾಡಿ ಘಾಟ್ ನಲ್ಲಿ ನಡೆದಿದ್ದು ಅಲ್ಲ. ಘಾಟ್‌ನಲ್ಲಿ ಯಾವುದೇ ಭೂಕುಸಿತ ಸಂಬಂವಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಅರುಣಾಚಲ ಪ್ರದೇಶದಲ್ಲಿ ಭೂಕುಸಿತದ ಹಳೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಚಾರ್ಮಾಡಿ ಘಾಟ್‌ನಲ್ಲಿ ನಡೆದಿದೆ ಎಂದು ಹಂಚಿಕೊಳ್ಳಲಾಗಿದೆ. ಈ ಕುರಿತು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕೂಡ ಪ್ರಕಟಣೆ ಹೊರಡಿಸಿದ್ದು ವೈರಲ್ ಅಗಿರುವ ವೀಡಿಯೋ ಚಾರ್ಮಾಡಿ ಘಾಟ್ ನದ್ದಲ್ಲ, ಜನತೆ ಯಾರೂ ಭಯಬೀತರಾಗುವ ಅವಶ್ಯಕತೆ ಇಲ್ಲ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವೀಡಿಯೋ ನಕಲಿ ಎಂದು ಸ್ಪಷ್ಟಪಡಿಸಿದೆ. ಚಾರ್ಮಾಡಿ ಘಾಟ್ ನಲ್ಲಿ ಎಂದಿನಂತೆ ವಾಹನಗಳು ಸಂಚರಿಸುತ್ತಿವೆ. ಇಂತಹ ನಕಲಿ ವೀಡಿಯೋ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡದಂತೆ ಕಡಿವಾಣ ಹಾಕಬೇಕಿದೆ.

Most Popular

Recent Comments