ಮಂಗಳೂರು: ಅಪರಿಚಿತ ದುಷ್ಕರ್ಮಿಗಳು ವಿಶ್ವ ಹಿಂದೂ ಪರಿಷದ್ (ವಿ ಎಚ್ ಪಿ) ಮುಖಂಡರಿಗೆ ಸೇರಿದ ಮೀನು ಮಾರಾಟ ಅಂಗಡಿಗೆ ಬೆಂಕಿ ಹಚ್ಚಿರುವ ಘಟನೆ ಉಪ್ಪಿನಂಗಡಿಯ ಹಳೇಗೇಟು ಎಂಬಲ್ಲಿ ನಡೆದಿದೆ.
ಭಾನುವಾರ ರಾತ್ರಿ ಬೆಂಕಿಯನ್ನು ಹಚ್ಚಿರಬಹುದು ಎನ್ನುವ ಶಂಕೆ ತೀವ್ರವಾಗಿ ವ್ಯಕ್ತವಾಗಿದೆ. ರಾಜ್ಯ ಹೆದ್ದಾರಿಯ ಸಮೀಪದಲ್ಲಿ ಈ ಅಂಗಡಿ ಇತ್ತು. ಅಂಗಡಿ ಮಾಲೀಕ ಅಶೋಕ್ ಅವರು ಈ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದ್ದು, ಅಂಗಡಿಯಲ್ಲಿ ಮೀನು ಮತ್ತು ಮಂಜುಗಡ್ಡೆಯನ್ನು ಇಡಲಾಗಿತ್ತು ಎಂದಿದ್ದಾರೆ.
ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕೋಮು ಸೌಹಾರ್ದತೆಯನ್ನು ಕದಡುವ ಸಲುವಾಗಿ ದುಷ್ಕರ್ಮಿಗಳು ಬೆಂಕಿಯನ್ನು ಹಚ್ಚಿರಬಹುದು ಎಂದು ಶಂಕಿಸಿದ್ದಾರೆ. ಪುತ್ತೂರು ಶಾಸಕರು ಕೂಡಾ ಸ್ಥಳಕ್ಕೆ ಆಗಮಿಸಿದ್ದು, ಶೀಘ್ರವಾಗಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಂತೆ ಪುತ್ತೂರು ಡಿ ವೈ ಎಸ್ ಪಿ ಅವರಲ್ಲಿ ಮನವಿಯನ್ನು ಮಾಡಿದ್ದಾರೆ.