Tuesday, November 28, 2023
Homeವಿಶೇಷಆರೋಗ್ಯವೆರಿಕೋಸ್ ವೇಯ್ನ್ ಗೆ ತಮ್ಮದೇ ಔಷಧಿ ಕಂಡುಹಿಡಿದು ಸಾವಿರಾರು ರೋಗಿಗಳ ಬಾಳಿನ ಆಶಾಕಿರಣವಾದ ಡಾ. ಉರಾಳ್

ವೆರಿಕೋಸ್ ವೇಯ್ನ್ ಗೆ ತಮ್ಮದೇ ಔಷಧಿ ಕಂಡುಹಿಡಿದು ಸಾವಿರಾರು ರೋಗಿಗಳ ಬಾಳಿನ ಆಶಾಕಿರಣವಾದ ಡಾ. ಉರಾಳ್

ವೆರಿಕೋಸ್ ವೇಯ್ನ್ ತಜ್ಞ ಡಾ. ಎಂ. ವಿ ಉರಾಳ್ ರವರು ಮೂಲತಃ ಉಡುಪಿ ಜಿಲ್ಲೆಯ ಕೋಟಾದ ಮಣೂರಿನವರು ಇವರ ತಂದೆ ರಾಧಾಕೃಷ್ಣ ಉರಾಳ್ ತಾಯಿ ಮಹಾಲಕ್ಷ್ಮಿ.

ಇವರು ತಮ್ಮ ಪಿಯುಸಿ ವಿದ್ಯಾಭ್ಯಾಸವನ್ನು ಕೋಟ ವಿವೇಕ ಜೂನಿಯರ್ ಕಾಲೇಜಿನಲ್ಲಿ ನಡೆಸಿದರು. ನಂತರ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಎ, ಎಲ್, ಎಸ್ ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಆಯುರ್ವೇದ (ಬಿ. ಎ. ಎಂ. ಎಸ್ ) ಕೋರ್ಸ್ ಪೂರೈಸಿದರು. ನಂತರ ಮಣಿಪಾಲ ವಿಶ್ವವಿದ್ಯಾಲಯದಿಂದ ಎಫ್ ಜೆ ಇ ಪಡೆದರು.

ಆಯುರ್ವೇದ ಅಧ್ಯಯನ ಮುಗಿಸಿದ ನಂತರ ಶೃಂಗೇರಿಯಲ್ಲಿ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಿ ಸರಳ ಗಿಡಮೂಲಿಕೆಗಳ ಸಂಯೋಜನೆಯೊಂದಿಗೆ ವಿವಿಧ ರೀತಿಯ ದೀರ್ಘಕಾಲದ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದರು.

ನಂತರ ಅನೇಕ ಜನರನ್ನು ಕಟುವಾಗಿ ಕಾಡುತ್ತಿರುವ ವೆರಿಕೋಸ್ ವೇಯ್ನ್ ರೋಗಕ್ಕೆ ಸೂಕ್ತವಾದ ಔಷಧಿ ಇಲ್ಲದಿರುವುದನ್ನು ಮನಗಂಡು ತಮ್ಮದೇ ಪರಿಕಲ್ಪನೆಯಿಂದ ಸಂಶೋಧನಾ ಸಂಸ್ಥೆಗಳ ಸಹಯೋಗ ಹಾಗೂ ಸತತ 5 ವರ್ಷಗಳ ಕಾಲ ಕ್ಲಿನಿಕಲ್ ಸಂಶೋಧನೆಯೊಂದಿಗೆ ” ಶಸ್ತ್ರ ಚಿಕಿತ್ಸೆಯಿಲ್ಲದೇ ವೆರಿಕೋಸ್ ವೇಯ್ನ್ ” ಕಡಿಮೆ ಮಾಡುವಂತಹ ಒಂದು ಕ್ರಾಂತಿಕಾರಿ ಆಯುರ್ವೇದ ಔಷಧಿಯನ್ನು ಆವಿಷ್ಕಾರ ಮಾಡಿದರು.

ಇಲ್ಲಿಯವರೆಗೆ ಇವರಿಂದ 3000 ಕ್ಕೂ ಹೆಚ್ಚು ರೋಗಿಗಳು ಯಶಸ್ವಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಹಲವಾರು ವರ್ಷಗಳಿಂದ ಹಲವು ಚಿಕಿತ್ಸೆಯಿಂದ ಗುಣವಾಗದ ವೆರಿಕೋಸ್ ವೇಯ್ನ್ ಗಾಯಗಳು ಇವರ ಚಿಕಿತ್ಸೆಯಿಂದ ಗುಣವಾಗಿದ್ದು ಉರಾಳ್ ರ ಹೆಗ್ಗಳಿಕೆಯಾಗಿದೆ.

ಇವರು ವೆರಿಕೋಸ್ ವೇನ್ಸ್ ನ ಉಪದ್ರವಗಳನ್ನು ಕಡಿಮೆಮಾಡುವ ಕೌಶಲ್ಯಗಳನ್ನು ಕಲಿತು ಓಷಧಿಯನ್ನು ತಯಾರಿಸಿ ವ್ಯಕ್ತಿಯ ಕಾಲು ಮತ್ತು ಕಾಲಬೆರಳುಗಳನ್ನು ಕತ್ತರಿಸುವುದನ್ನು ತಡೆದಿದ್ದಾರೆ. ಇವರು ತಮ್ಮ ಮಾತು ಹಾಗೂ ಚಿಕಿತ್ಸೆಯಿಂದ ಜೀವನದಲ್ಲಿ ಭರವಸೆ ಕಳೆದುಕೊಂಡ ರೋಗಿಗಳಿಗೆ ಭರವಸೆಯನ್ನು ತುಂಬಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ರೋಗಿಗಳು ಇವರಿಂದ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ.

ಮನುಷ್ಯರಲ್ಲಿ ಕಾಣುವ ಗಂಭೀರವಾದ ವೆರಿಕೋಸ್ ವೇನ್ಸ್ ಖಾಯಿಲೆಯ ಬಗ್ಗೆ ರೋಟರಿ, ಲಯನ್ಸ್ ಕ್ಲಬ್, ಜೆಸಿಐ, ಸಂಘ ಸಂಸ್ಥೆಗಳು ಹಾಗೂ ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಉಚಿತ ತಪಾಸಣಾ ಶಿಬಿರಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ. ವೆರಿಕೋಸ್ ಮುಕ್ತ ಸಮಾಜವನ್ನು ನಿರ್ಮಿಸುವುದು ಇವರ ಕನಸಾಗಿದ್ದು ಜನರಿಗೆ ಉಪಯುಕ್ತವಾಗುವ ಉದ್ದೇಶದಿಂದ ಕಡಿಮೆ ದರದಲ್ಲಿ ಶೀಘ್ರ ಪರಿಣಾಮಕಾರಿಯಾದಂತಹ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಡಾ. ಎಂ. ವಿ. ಉರಾಳ್
ವೆರಿಕೋಸ್ ವೇನ್ಸ್ ತಜ್ಞ
+91 84311 14028
Visit : http://www.uralsayurveda.in

https://www.facebook.com/DrUrals/

Most Popular

Recent Comments